ನವದೆಹಲಿ:ಶುಕ್ರವಾರ (ಜೂನ್ 2) ಸಂಜೆ ಒಡಿಶಾದಲ್ಲಿ ಸಂಭವಿಸಿದ ಅಪಘಾತದ ಮೂಲ ಕಾರಣವನ್ನು ರೈಲ್ವೆ ಗುರುತಿಸಿದೆ ಎನ್ನಲಾಗಿದ್ದು, ಸಾವಿನ ಸಂಖ್ಯೆ ಈಗ 288ಕ್ಕೆ ತಲುಪಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜನರಿಂದ ಪ್ರಚೋದಿಸಲ್ಪಟ್ಟ ಸಿಗ್ನಲಿಂಗ್ ವೈಫಲ್ಯವದ ಸುಳಿವು ನೀಡಿದ್ದಾರೆ.
ಇದನ್ನು “Human Error” ಎನ್ನುವ ಅರ್ಥದಲ್ಲಿ ಸಚಿವರು ಹೇಳಿದ್ದೋ ಅಥವಾ, ಉದ್ದೇಶಪೂರ್ವಕ ವಿಧ್ವಂಸಕತೆಯ ಸಾಧ್ಯತೆಯಿದೆಯೇ ಎಂಬುದು ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿಲ್ಲ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾನುವಾರ (ಜೂನ್ 4) ಹೇಳಿದರು: “ಅಪಘಾತದ ಮೂಲ ಕಾರಣವನ್ನು ಗುರುತಿಸಲಾಗಿದೆ. ಮತ್ತು ಅದನ್ನು ಮಾಡಿದ ಜನರನ್ನು ಸಹ ಗುರುತಿಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರ ವರದಿಯನ್ನು ಶೀಘ್ರವೇ ಸಾರ್ವಜನಿಕಗೊಳಿಸಲಾಗುವುದು ಎಂದರು. “ಕಿಸ್ ಕಾರಣ್ ಸೆ ಯೇ ಹಾತ್ಸಾ ಕಿಯಾ ಗಯಾ, ಉಸ್ಕಿ ಭಿ ಜಾಂಕರಿ ಜಲ್ದ್ ಹೀ ಸಾಮ್ನೆ ಆ ಜಾಯೇಗಿ” ಎಂದು ಅವರು ಡಿಡಿ ನ್ಯೂಸ್‌ಗೆ ತಿಳಿಸಿದ್ದರು.
ಅಲ್ಲಿ ವಿಧ್ವಂಸಕ ಕೃತ್ಯ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಮಾಜ ವಿರೋಧಿ ಶಕ್ತಿಗಳು ಶಾಮೀಲಾಗಿವೆಯೇ ಎಂದು ಸಚಿವರನ್ನು ಕೇಳಲಾಯಿತು, ಆದರೆ ಅವರು ಉತ್ತರವನ್ನು ನೀಡಲು ನಿರಾಕರಿಸಿದರು. “CRS ತನಿಖೆಯ ವರದಿಯ ಮೊದಲು ಹೇಳುವುದು ತಪ್ಪಾಗುತ್ತದೆ” ಎಂದು ಅವರು ಹೇಳಿದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
