ನವದೆಹಲಿ:ಸರಿ ಸುಮಾರು 165 ಅತ್ಯಾಚಾರ ಪ್ರಕರಣಗಳು ರೈಲು ನಿಲ್ದಾಣದ ಆವರಣ ಮತ್ತು ಚಲಿಸುತ್ತಿರುವ ರೈಲಿನಲ್ಲಿ ನಡೆದಿವೆ ಎಂಬುದು ತಿಳಿದು ಬಂದಿದೆ.
2017ರಲ್ಲಿ 51, 2019ರಲ್ಲಿ 44 ಪ್ರಕರಣಗಳು ದಾಖಲಾಗಿದ್ದರೆ, 2018ರಲ್ಲಿ ಒಟ್ಟು 70 ಅತ್ಯಾಚಾರದ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಿದ ವಿವರದಲ್ಲಿ ಇಲಾಖೆ ತಿಳಿಸಿದೆ.
ಚಂದ್ರಶೇಖರ ಗೌರ್​ ಎಂಬುವವರು ಪಡೆದ ಈ ಮಾಹಿತಿಯಲ್ಲಿ 2017ರಿಂದ 2019ರಲ್ಲಿ 136 ಅತ್ಯಾಚಾರ ಪ್ರಕರಣಗಳು ರೈಲು ನಿಲ್ದಾಣದ ಆವರಣದಲ್ಲಿ ನಡೆದಿದ್ದರೆ ಉಳಿದ 29 ಪ್ರಕರಣಗಳು ಚಲಿಸುವ ರೈಲಿನಲ್ಲಿ ನಡೆದಿವೆ ಎಂದು ತಿಳಿಸಲಾಗಿದೆ.
ಈ ಮೂರು ವರ್ಷಗಳಲ್ಲಿ 771 ಅಪಹರಣ ಪ್ರಕರಣಗಳು ದಾಖಲಾಗಿವೆ. 4,718 ಲೂಟಿ, 213 ಹತ್ಯೆ ಯತ್ನ ಹಾಗೂ 542 ಕೊಲೆ ದೂರುಗಳು ದಾಖಲಾಗಿವೆ ಎಂಬ ಆತಂಕದ ಕೃತ್ಯಗಳನ್ನು ಈ ಮಾಹಿತಿ ಬಹಿರಂಗಗೊಳಿಸಿದೆ.
ಈ ಎಲ್ಲ ಪ್ರಕರಣಗಳು ಆಯಾ ರಾಜ್ಯಗಳ ವ್ಯಾಪ್ತಿಗೆ ಬರಲಿದ್ದು, ಆಲ್ಲಿನ ಪೊಲೀಸರೇ ಕ್ರಮ ಕೈಗೊಳ್ಳಲಿದ್ದಾರೆ. ದೂರು ದಾಖಲಿಸುವುದು, ಅದರ ತನಿಖೆ, ಕಾನೂನು ಕ್ರಮ ಮುಂತಾದವುಗಳನ್ನು ಆಯಾ ಪೊಲೀಸರೇ ನಿಗಾ ವಹಿಸಲಿದ್ದಾರೆ.
ಮಹಿಳೆಯರ ಸುರಕ್ಷತೆಗೆ ರೈಲ್ವೆ ಇಲಾಖೆ ಸೂಕ್ತ ಕ್ರಮ ಕೈಗೊಂಡಿದೆ. ರಾಜ್ಯ ಸಭಾದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಇಲಾಖೆ, ಪ್ರತಿದಿನ ಸರಾಸರಿ 2,200 ರೈಲುಗಳಲ್ಲಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್‌ ಕಾರ್ಯ ನಿರ್ವಹಿಸುತ್ತದೆ. ಅದರಂತೆ 2,200 ರೈಲುಗಳನ್ನು ವಿವಿಧ ರಾಜ್ಯಗಳ ಪೊಲೀಸರ ಬೆಂಗಾವಲು ಇರುತ್ತದೆ ಎಂದು ತಿಳಿಸಿತ್ತು.
ಕೆಲ ಮೆಟ್ರೋ ಪಾಲಿಟಿನ್​ ನಗರಗಳಲ್ಲಿ ಮಹಿಳೆಯರಿಗಾಗಿ ವಿಶೇಷ ರೈಲುಗಳು ಕಾರ್ಯ ನಿರ್ವಹಿಸುತ್ತಿವೆ. ಈ ರೈಲುಗಳಿಗೆ ಮಹಿಳಾ ಆರ್​ಪಿಎಫ್​ ಅಧಿಕಾರಿಗಳನ್ನು ಸುರಕ್ಷತೆಗಾಗಿ ನೇಮಿಸಲಾಗಿದೆ. ಇದರಲ್ಲಿ 2019ರಲ್ಲಿ ಬೋಗಿಗಳಿಗೆ ಹಾಗೂ 511 ರೈಲು ನಿಲ್ದಾಣಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − four =
Remember me
