ನವದೆಹಲಿ:ದೇಶಾದ್ಯಂತ ವಲಸೆ ಕಾಮಿರ್ಕರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದ್ದ ಶ್ರಮಿಕ ಎಕ್ಸ್​ಪ್ರೆಸ್​ ರೈಲುಗಳಲ್ಲಿ ಈವರೆಗೆ 80 ಜನರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸುರಕ್ಷತಾ ದಳ ತಿಳಿಸಿದೆ.
ದೇಶದ ವಿವಿಧ ಭಾಗಗಳಿಂದ ಮೇ 1ರಿಂದ ಮೇ 27ರವರೆಗೆ ಶ್ರಮಿಕ ಎಕ್ಸ್​ಪ್ರೆಸ್​ ರೈಲುಗಳನ್ನು ಬಿಡಲಾಗಿತ್ತು. ಈ ಅವಧಿಯಲ್ಲಿ ಒಟ್ಟಾರೆ ದೇಶಾದ್ಯಂತ 3,870 ರೈಲುಗಳು ಸಂಚರಿಸಿವೆ. ಇದರಲ್ಲಿ ಅಂದಾಜು 50 ಲಕ್ಷಕ್ಕೂ ಅಧಿಕ ಜನರು ತಮ್ಮೂರುಗಳಿಗೆ ತೆರಳಿದ್ದಾರೆ.
ಇದನ್ನೂ ಓದಿ;ಪಿಯು ವಿದ್ಯಾರ್ಥಿಗಳಿಗೂ ಸಿಗಲಿದೆಯೇ ಉಚಿತ ಲ್ಯಾಪ್​ಟಾಪ್​…?
ಮೇ 9 ರಿಂದ ಮೇ 27 ರವರೆಗೆ ಈ ರೈಲುಗಳಲ್ಲಿ ಒಟ್ಟು 80 ವಲಸೆ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಸುರಕ್ಷತಾ ದಳ ಮಾಹಿತಿ ನೀಡಿದೆ. ಕಳೆದ ಬುಧವಾರ ಒಂದೇ ದಿನ ಶ್ರಮಿಕ ಎಕ್ಸೆಎಪ್ರೆಸ್​ ರೈಲುಗಳಲ್ಲಿ ಒಂಭತ್ತು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ಕೂಡಲೇ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ರೈಲ್ವೆ ಇಲಾಖೆ ಮೃತಪಟ್ಟವರೆಲ್ಲರೂ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯಲೆಂದೇ ವಿವಿಧ ನಗರಗಳಿಗೆ ತೆರಳಿದ್ದರು. ರೈಲು ಸಂಚಾರ ಆರಂಭವಾದ್ದರಿಂದಷ್ಟೇ ಅವರಿಗೆ ತಮ್ಮೂರಿಗೆ ತೆರಳಲು ಸಾಧ್ಯವಾಗಿತ್ತು ಎಂದು ತಿಳಿಸಿತ್ತು. ಇದೇ ಮೊದಲ ಬಾರಿಗೆ ರೈಲುಗಳಲ್ಲಿ ಸಂಭವಿಸಿದ ಮರಣದ ಬಗ್ಗೆ ಇಲಾಖೆ ಇಷ್ಟೊಂದು ವಿವರವಾಗಿ ಮಾಹಿತಿ ಕಲೆ ಹಾಕಿತ್ತು ಎನ್ನಲಾಗಿದೆ.
ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಅನಾರೋಗ್ಯಕ್ಕೆ ತುತ್ತಾದರೆ ಸಮೀಪದ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಇಲಾಖೆಯಲ್ಲಿ ಅಂಥ ಹಲವು ಪ್ರಕರಣಗಳು ನಡೆದಿವೆ. ಹೆರಿಗೆ ನೋವಿಗೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಿ ಅವರು ಮಗುವಿಗೆ ಜನ್ಮ ನೀಡಿದ ಹಲವು ಪ್ರಕರಣಗಳು ಶ್ರಮಿಕ ಎಕ್ಸ್​ಪ್ರೆಸ್​ ರೈಲಿನಲ್ಲಿ ನಡೆದಿವೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್​ ತಿಳಿಸಿದ್ದಾರೆ.
ಇದನ್ನೂ ಓದಿ;ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಏಕೈಕ ಭಾರತೀಯ ಕೊಹ್ಲಿ
ಆಹಾರದ ಕೊರತೆ ಇಲ್ಲದಿದ್ದರೂ ಕಾರ್ಮಿಕರು ಹಸಿವಿನಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಎಲ್ಲ ಸಾವಿನ ಕಾರಣಗಳನ್ನು ಆಯಾ ವಲಯಮಟ್ಟದಲ್ಲಿ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಯಾದವ್​ ಹೇಳಿದ್ದಾರೆ.
ಆದರೆ, ರೈಲಿನ ಪ್ರಯಾಣಿಕರು ಸೆಖೆ, ಸುಸ್ತು, ಬಾಯಾರಿಕೆಯಿಂದ ಬಳಲಿದ್ದರು ಎಂದು ಹೆಸರು ಹೇಳಲಿಚ್ಛಿಸದ ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೊಬೈಲ್​ ಸಂಖ್ಯೆಗಿನ್ನು 11 ಅಂಕಿಗಳು, ಟ್ರಾಯ್​ ಶಿಫಾರಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
