ನವದೆಹಲಿ:ಸಾರ್ವಜನಿಕರು ಪ್ರಯಾಣಕ್ಕೆ ರೈಲನ್ನು ಆಯ್ಕೆ ಮಾಡಿಕೊಳ್ಳಲು ಇರುವ ಕಾರಣದಲ್ಲಿ ಅದರ ಪ್ರಯಾಣ ದರವೂ ಒಂದು. ರಸ್ತೆ ಮಾರ್ಗಕ್ಕಿಂತ ರೈಲ್ವೇ ಪ್ರಯಾಣ ಅಗ್ಗವಾದ್ದರಿಂದಲೂ ಜನ ರೈಲಿನಲ್ಲಿ ಸಂಚರಿಸಲು ಆದ್ಯತೆ ನೀಡುತ್ತಿದ್ದಾರೆ. ಆದರೆ ಇದೀಗ ರೈಲು ಪ್ರಯಾಣ ದರ ದುಬಾರಿ ಆಗುವ ಲಕ್ಷಣ ಗೋಚರಿಸಿದೆ.
ಕೇಂದ್ರ ಸರ್ಕಾರ ರೈಲ್ವೇ ಪ್ರಯಾಣಕ್ಕೆ ಯೂಸರ್​ ಡೆವಲಪ್​ಮೆಂಟ್​ ಫೀಸ್ ​(ಯುಡಿಎಫ್​) ವಿಧಿಸುವ ಚಿಂತನೆಯಲ್ಲಿದೆ. ಇನ್ನು ಒಂದು ತಿಂಗಳಲ್ಲಿ ಅದಕ್ಕೆ ಅನುಮೋದನೆ ನೀಡುವ ನಿಟ್ಟಿನಲ್ಲೂ ಮಾತುಕತೆ ನಡೆದಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಹಾಗಾದಲ್ಲಿ ಎಸಿ ಹಾಗೂ ಸ್ಲೀಪರ್ ಕ್ಲಾಸ್​ ಪ್ರಯಾಣ ದರದಲ್ಲಿ ಹೆಚ್ಚಳ ಆಗಲಿದೆ.
ಸದ್ಯದ ಮಾಹಿತಿ ಪ್ರಕಾರ ಎಸಿ1 ಕೆಟಗರಿಯಲ್ಲಿ 35ರಿಂದ 40 ರೂ., ಎಸಿ 2ನಲ್ಲಿ ಸುಮಾರು 30 ರೂ., ಎಸಿ 3ನಲ್ಲಿ 25ರಿಂದ 30 ರೂ. ಮತ್ತು ಸ್ಲೀಪರ್ ಕ್ಲಾಸ್​​ನಲ್ಲಿ ಹತ್ತು ರೂ. ಹೆಚ್ಚಳ ಆಗುವ ಸಾಧ್ಯತೆ ಇದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − three =
Remember me
