ಲಖನೌ:ಜೂನ್ 02ರಂದು ಒಡಿಶಾದ ಬಾಲಾಸೋರ್​ನಲ್ಲಿ ಸಂಭವಿಸಿದ ತ್ರಿವಳಿ ರೈಲು ಅಪಘಾತ ಪ್ರಕರಣ ಮಾಸುವ ಮುನ್ನವೇ ಉತ್ತರಪ್ರದೇಶದ ಲಖನೌನಲ್ಲಿ ಲೋಕೋ ಪೈಲಟ್​ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ಒಂದು ತಪ್ಪಿದೆ.
ಲಖನೌನ ನಿಗೋಹಾನ್​ ರೈಲು ನಿಲ್ದಾಣದಲ್ಲಿ ರೈಲು ಹಳಿಗಳು ವಕ್ರಗೊಂಡಿದ್ದು, ಇದನ್ನು ಗಮನಿಸಿದ ಲೋಕೋ ಪೈಲಟ್​ ದೊಡ್ಡ ಅನಾಹುತವನ್ನು ತಪ್ಪಿಸಿದ್ಧಾರೆ. ಘಟನೆಯೂ ಶನಿವಾರ ಸಂಜೆ 5 ಘಂಟೆ ಸುಮಾರಿಗೆ ಸಂಭವಿಸಿದ್ದು, ನೀಲಾಂಚಲ್​ ಎಕ್ಸ್​ಪ್ರೆಸ್​ ರೈಲು ಮುಖ್ಯ ಲೈನ್​ ಬದಲು ಲೂಪ್​ಲೈನ್​ನಲ್ಲಿ ಹಾದು ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
Nigohan Station visuals. Tracks bendedpic.twitter.com/QabZ9QbPld
ಇದನ್ನೂ ಓದಿ:ಹನುಮ ಜಯಂತಿ ಕುರಿತು ಅಪಹಾಸ್ಯ; ವೈರಲ್​ ಆಗುತ್ತಿದೆ ಆದಿಪುರುಷ್​ ನಿರ್ದೇಶಕನ ಹಳೆಯ ಟ್ವೀಟ್​
ರೈಲು ಹಾದುಹೋಗುವ ವೇಳೆ ಕಬ್ಬಿಣ ಕರಗಿದ ವಾಸನೆಯನ್ನು ಗ್ರಹಿಸಿದ ಲೋಕೋ ಪೈಲಟ್​ ಕೂಡಲೇ ರೈಲನ್ನು ನಿಲ್ಲಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ಧಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳ ತಂಡ ಹಳಿಗಳ ದುರಸ್ಥಿ ಕಾರ್ಯದಲ್ಲಿ ತೊಡಗಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿ ಒಬ್ಬರು ಕಳಪೆ ಟ್ರ್ಯಾಕ್​ ನಿರ್ವಹಣೆಯಿಂದಾಗಿ ಈ ರೀತಿ ಆಗಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಪ್ರಕರಣ ಸಂಬಂಧ ಲಖನೌ ರೈಲ್ವೇ ವಿಭಾಗೀಯ ಮ್ಯಾನೇಜರ್​ ಸುರೇಶ್​ ಸಪ್ರಾ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + sixteen =
Remember me
