ನವದೆಹಲಿ:ಭಾರತೀಯ ರೈಲುಗಳು 2024ರ ವೇಳೆಗೆ ಶೇ.100 ವಿದ್ಯುದೀಕರಣಗೊಳ್ಳಲಿವೆ ಎಂದು ಕೇಂದ್ರ ಸಚಿವ ಪಿಯೂಷ್​ ಗೋಯಲ್​ ತಿಳಿಸಿದ್ದಾರೆ.
ಪರಿಸರ ಸಂರಕ್ಷಣೆ ಬಗ್ಗೆ ನಮಗೆ ಕಾಳಜಿ ಇದೆ. ಆದ್ದರಿಂದಲೇ 2030ರೊಳಗೆ ರೈಲುಗಳನ್ನು ಹೊಗೆ ರಹಿತ ಗಾಡಿಗಳನ್ನಾಗಿ ರೂಪಿಸಲಾಗುವುದು. 2024ರ ಹೊತ್ತಿಗೆ ಎಲ್ಲ ರೈಲುಗಳು ವಿದ್ಯುತ್​ ಚಾಲಿತವಾಗಲಿವೆ ಎಂದರು.
ಎಲ್ಲ ರೈಲುಗಳು ವಿದ್ಯುದ್ದೀಕರಣಗೊಳ್ಳುತ್ತಿರುವುದು ಭಾರತದಲ್ಲೇ ಮೊದಲು. ಈ ಯೋಜನೆಗಾಗಿ ಬ್ರೆಜಿಲ್​ನ ಸಹಯೋಗ ಪಡೆಯಲು ಯೋಜಿಸಲಾಗಿದೆ ಎಂದರು.
ಭಾರತೀಯ ರೈಲ್ವೇ ಮಂಡಳಿ ಕಾರ್ಬನ್​ ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಆರಂಭಿಸಿದೆ. ನೀತಿ ಆಯೋಗದ ಪ್ರಕಾರ 2014ರಲ್ಲಿ ರೈಲುಗಳಿಂದಾಗಿ 6.84 ಮಿಲಿಯನ್​ ಟನ್​ ಕಾರ್ಬನ್​ ಡಯಾಕ್ಸೈಡ್​ ಬಿಡುಗಡೆಯಾಗಿದೆ. ​
ಅಮೆರಿಕ, ರಷ್ಯಾ ಮತ್ತು ಚೀನಾ ಹೊರತುಪಡಿಸಿ ಭಾರತ ಅತಿದೊಡ್ಡ ರೈಲು ಸೌಲಭ್ಯವುಳ್ಳ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಇದು ದೇಶಾದ್ಯಂತ 67,368 ಕಿ.ಮೀ ಉದ್ದ ಹಾಗೂ 7,300 ನಿಲ್ದಾಣಗಳನ್ನು ಹೊಂದಿದೆ. ಪ್ರತಿನಿತ್ಯ 23 ಮಿಲಿಯನ್​ ಪ್ರಯಾಣಿಕರು 13 ಸಾವಿರ ರೈಲುಗಳಲ್ಲಿ ಪ್ರಯಾಣಿಸುತ್ತಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + fourteen =
Remember me
