ದೆಹಲಿ:ದೇಶದ ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಟಿಕೆಟ್​​ ಬೆಲೆಯನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.ಕಡಿಮೆ ಪ್ರಯಾಣಿಕರಿರುವ ವಂದೇ ಭಾರತ್ ರೈಲುಗಳ ಪರಿಶೀಲನೆಯನ್ನು ರೈಲ್ವೆ ಕೈಗೊಳ್ಳುತ್ತಿದ್ದು, ಈ ಸೇವೆಯನ್ನು ಹೆಚ್ಚಿನ ಜನರು ಬಳಸಿಕೊಳ್ಳಬೇಕು. ಹಾಗಾಗಿ ರೈಲುಗಳ ದರವನ್ನು ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಪಿಟಿಐ ವರದಿ ಮಾಡಿದೆ.ಇದನ್ನೂ ಓದಿ:ಕುಡುಕನಿಗೆ ಸಹಾಯ ಮಾಡಲು ಹೋಗಿ, ಆತನ ಜತೆ ಪ್ರಾಣ ಕಳೆದುಕೊಂಡ ಪೊಲೀಸ್​..!ಜೂನ್​ ತಿಂಗಳ ಪ್ರಕಾರ, ಭೋಪಾಲ್-ಜಬಲ್‌ಪುರ್ ವಂದೇ ಭಾರತ್ ರೈಲಿನಲ್ಲಿ ಶೇಕಡಾ 29ರಷ್ಟು, ಇಂದೋರ್-ಭೋಪಾಲ್ ಮಾರ್ಗದ ರೈಲಿನ ಶೇಕಡಾ 21ರಷ್ಟು ಸೀಟುಗಳು ಮಾತ್ರ ಭರ್ತಿಯಾಗಿವೆ. ಟಿಕೆಟ್​ ದರ ಜಾಸ್ತಿಯಿರುವ ಪ್ರಯಾಣಿಕರು ಇದರತ್ತ ಸುಳಿಯುತ್ತಿಲ್ಲ. ಈ ಹಿನ್ನಲೆ ರೈಲ್ವೇ ಪರಿಶೀಲನೆಯ ನಂತರ, ಹೆಚ್ಚಿನ ಜನರು ರೈಲು ಸೇವೆಯನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಲು ಈ ವಂದೇ ಭಾರತ್ ಸೇವೆಯ ದರವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ.ಇಲ್ಲಿಯವರೆಗೆ 46 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು, ದೇಶದ ಎಲ್ಲಾ ರೈಲು-ವಿದ್ಯುದ್ದೀಕೃತ ರಾಜ್ಯಗಳನ್ನು ತಲುಪಿವೆ.ಹೆಚ್ಚಿನ ಪ್ರಯಾಣಿಕರನ್ನು ಹೊಂದಿರುವ ರೈಲುಗಳೆಂದರೆ ಕಾಸರಗೋಡಿನಿಂದ ತಿರುವನಂತಪುರ ರೈಲು(ಶೇ 183), ತಿರುವನಂತಪುರದಿಂದ ಕಾಸರಗೋಡಿಗೆ (ಶೇ 176), ಗಾಂಧಿನಗರ-ಮುಂಬೈ ಸೆಂಟ್ರಲ್​ (ಶೇ 134) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅತ್ಯಧಿಕ ಪ್ರಯಾಣಿಕರನ್ನು ಹೊಂದಿವೆ.(ಏಜೆನ್ಸೀಸ್​​​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
