ಹೊಸದಿಲ್ಲಿ:ಉತ್ತರ ಭಾರತದಲ್ಲಿ ಕಂಡುಬಂದ ಶೀತದ ವಾತಾವರಣ ಹಾಗೂ ಹಲವಾರು ರಾಜ್ಯಗಳಲ್ಲಿ ಆವರಿಸುತ್ತಿರುವ ದಟ್ಟವಾದ ಮಂಜಿನ ಕಾರಣದಿಂದ ಭಾರತೀಯ ರೈಲ್ವೆಯ ಮೊರಾದಾಬಾದ್ ವಿಭಾಗವು ಡಿಸೆಂಬರ್ 2023ರಲ್ಲಿ 20,000 ಕಾಯ್ದಿರಿಸಿದ ಟಿಕೆಟ್‌ಗಳ ರದ್ದತಿಯನ್ನು ದಾಖಲಿಸಿದ್ದು, ರೈಲ್ವೇ ಇಲಾಖೆಗೆ ಭಾರೀ ನಷ್ಟ ಉಂಟಾಗಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಇದನ್ನೂ ಓದಿ:ಸಂಕ್ರಾಂತಿಗೆ ರಿಲೀಸ್ ಆಗಲಿರುವ ಚಿತ್ರದಲ್ಲಿ ಬರಲಿದೆ ಬಹುನಿರೀಕ್ಷಿತ ‘ದೇವರ’ ಟೀಸರ್! ಯಾವ ಸಿನಿಮಾ ಅದು?
ಮೊರಾದಾಬಾದ್ ವಿಭಾಗದ ಡಿವಿಜನಲ್ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ರಾಜ್ ಕುಮಾರ್ ಸಿಂಗ್ ನೀಡಿದ ಮಾಹಿತಿ ಪ್ರಕಾರ, ರಿಸರ್ವೇ​ಶನ್ ಅಡಿಯಲ್ಲಿ​ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ರೈಲುಗಳ ವಿಳಂಬದಿಂದ ತಮ್ಮ ಟಿಕೆಟ್​ಗಳನ್ನು ರದ್ದುಪಡಿಸಿದ ಹಿನ್ನೆಲೆ ಇಲಾಖೆಗೆ ಸುಮಾರು 1.22 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿಸಿದ್ದಾರೆ.
ರದ್ದಾದ ಟಿಕೆಟ್ ವಿವರ ಹೀಗಿದೆ: ಒಟ್ಟು ರದ್ದಾದ ಕಾಯ್ದಿರಿಸಲಾದ ಟಿಕೆಟ್‌ಗಳಲ್ಲಿ 4,230 ಬರೇಲಿಯಲ್ಲಿ ರದ್ದುಗೊಳಿಸಲಾಗಿದ್ದು, 3,239 ಟಿಕೆಟ್‌ಗಳನ್ನು ಮೊರಾದಾಬಾದ್‌ನಲ್ಲಿ ರದ್ದುಗೊಳಿಸಲಾಗಿದೆ. 3917 ಟಿಕೆಟ್‌ಗಳು ಹರಿದ್ವಾರದಲ್ಲಿ ಮತ್ತು 2,448 ಟಿಕೆಟ್‌ಗಳನ್ನು ರದ್ದುಗೊಳಿಸಲಾಗಿದೆ ಮತ್ತು ಇತರವುಗಳಲ್ಲಿ 2,448 ರದ್ದಾಗಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಟಿ-20 ವಿಶ್ವಕಪ್ 2024: ಕ್ಯಾಪ್ಟನ್ ಯಾರು? ನೆಟ್ಟಿಗರಲ್ಲಿ ಶುರುವಾಯ್ತು ಗೊಂದಲ!
ಜನವರಿ 6 ರವರೆಗೆ ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಪೂರ್ವ ರಾಜಸ್ಥಾನದ ಕೆಲವು ಭಾಗಗಳಲ್ಲಿ ರಾತ್ರಿ ಮತ್ತು ಬೆಳಗ್ಗೆ ವೇಳೆ ದಟ್ಟವಾದ ಮಂಜಿನ ಪರಿಸ್ಥಿತಿಗಳು ಮುಂದುವರೆಯಲಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).
ಸಂಕ್ರಾಂತಿಗೆ ರಿಲೀಸ್ ಆಗಲಿರುವ ಚಿತ್ರದಲ್ಲಿ ಬರಲಿದೆ ಬಹುನಿರೀಕ್ಷಿತ ‘ದೇವರ’ ಟೀಸರ್! ಯಾವ ಸಿನಿಮಾ ಅದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 13 =
Remember me
