ನವದೆಹಲಿ:ಭಾರತೀಯ ರೈಲ್ವೆ ಮುಂದಿನ ವಾರದಿಂದ 45 ಜೋಡಿ ರೈಲುಗಳನ್ನು ಅಂದರೆ 90 ಹೊಸ ವಿಶೇಷ ರೈಲುಗಳನ್ನು ಪ್ರಾರಂಭಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.ಈ ಉದ್ದೇಶಿತ ವಿಶೇಷ ರೈಲುಗಳ ಮೊದಲ ಪಟ್ಟಿಯನ್ನು ಗೃಹ ಸಚಿವಾಲಯಕ್ಕೆ ಅನುಮೋದನೆಗಾಗಿ ಕಳುಹಿಸಲಾಗಿದೆ.ಅಗತ್ಯ ಅನುಮತಿ ಸಿಕ್ಕ ನಂತರ ಮುಂದಿನ ವಾರದಲ್ಲಿ ಹೊಸ ವಿಶೇಷ ರೈಲುಗಳು ಪ್ರಾರಂಭಗೊಳ್ಳಲಿವೆ ಎಂದು ತಿಳಿದುಬಂದಿದೆ.
ಇದನ್ನು ಓದಿ:ಮಹಾರಾಷ್ಟ್ರದಲ್ಲಿ ಸಮುದಾಯ ಹರಡುವಿಕೆ ಇಲ್ಲ :ಆರೋಗ್ಯ ಸಚಿವ ರಾಜೇಶ್ ಟೋಪೆ ಸ್ಪಷ್ಟನೆ
ಈ ರೈಲುಗಳಲ್ಲಿ ಪ್ರಯಾಣಿಸಲು, ಪ್ರಯಾಣದ ದಿನಾಂಕದಿಂದ 120 ದಿನಗಳ ಮುಂಚಿತವಾಗಿ ಐಆರ್​​​​ಸಿಟಿಸಿಯಲ್ಲಿ ಟಿಕೆಟ್ ಕಾಯ್ದಿರಿಸಬಹುದು. ಈ ರೈಲುಗಳಲ್ಲಿನ ಕೆಲವು ಆಸನಗಳನ್ನು ತತ್ಕಾಲ್ ಕೋಟಾ ಅಡಿ ಕಾಯ್ದಿರಿಸಲು ಅನುಮತಿ ಇದೆ. ಅಂದರೆ ಈ ವಿಶೇಷ ರೈಲುಗಳಲ್ಲಿ ತುರ್ತು ಬುಕಿಂಗ್ ಸೌಲಭ್ಯವೂ ಇರುತ್ತದೆ.ಕರೊನಾವೈರಸ್ ತಡೆಗಟ್ಟುವಿಕೆಗಾಗಿ ರೈಲ್ವೆ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳನ್ನು ಈ ರೈಲು ಪ್ರಯಾಣದ ವೇಳೆ ಕಟ್ಟುನಿಟ್ಟಾಗಿ ಅನುಸರಿಸಲಾಗುವುದು.
ಇದನ್ನೂ ಓದಿ:ರಾಜೀನಾಮೆ ತೂಗುಗತ್ತಿಯಿಂದ ತಪ್ಪಿಸಿಕೊಳ್ಳಲು ಅಧಿವೇಶವನ್ನೇ ಮುಂದೂಡಿದ ಓಲಿ
ತತ್ಕಾಲ್ ಅಡಿ ಟಿಕೆಟ್ ಕಾಯ್ದಿರಿಸಲು, ಪ್ರಯಾಣಿಕರು ಎಸಿ ಬುಕಿಂಗ್​​ಗಾಗಿ ನಿಗದಿತ ಪ್ರಯಾಣದ ದಿನಕ್ಕೆ ಒಂದು ದಿನ ಮೊದಲು ಬೆಳಗ್ಗೆ 10 ಗಂಟೆ ನಂತರ ಹಾಗೂ ಸ್ಲೀಪರ್ ಕ್ಲಾಸ್​​​​ಗೆ ಬೆಳಗ್ಗೆ 11 ಗಂಟೆಯ ನಂತರ ಟಿಕೆಟ್ ಕಾಯ್ದಿರಿಸಬೇಕು.
ಕರೊನಾದಿಂದ ಗುಣಮುಖನಾದರೂ ರೈಲಿಗೆ ತಲೆ ಕೊಟ್ಟು ಸಾವಿಗೆ ಶರಣಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 4 =
Remember me
