ನವದೆಹಲಿ:ಭಾರತದಲ್ಲಿ ಚೀನಾ ವಿರುದ್ಧ ಸಮರ ಜೋರಾಗಿಯೇ ನಡೆದಿದೆ. ಇದೀಗ ಕರೊನಾ ವೈರಸ್‌ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ದೇಹದ ಉಷ್ಣತೆ ತಿಳಿಯುವ ಥರ್ಮಲ್‌ ಕ್ಯಾಮೆರಾಗಳಿಗೆ  ಕರೆದಿರುವ ಟೆಂಡರ್‌ ಅನ್ನು ರೈಲ್ವೆ ಇಲಾಖೆ ರದ್ದುಗೊಳಿಸಿದೆ. ಇದಕ್ಕೆ ಕಾರಣ ಚೀನಾದ ಸಂಸ್ಥೆ ಹಿಕ್ವಿಷನ್ ಪರವಾಗಿ ಈ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.ರೈಲ್ವೆಯ ಟೆಲಿಕಾಂ ಆರ್ಮ್ ರೈಲ್ಟೆಲ್ ಕಾರ್ಪ್ ಆಫ್ ಇಂಡಿಯಾ ಲಿಮಿಟೆಡ್ (ಆರ್‌ಐಎಲ್) ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಆಧಾರಿತ ಕಣ್ಗಾವಲು ಕ್ಯಾಮೆರಾಗಳಿಗಾಗಿ ಟೆಂಡರ್‌ ಕರೆಯಲಾಗಿತ್ತು. ಇದು ಚೀನಾ ಕಂಪನಿಯ ಪರವಾಗಿದೆ ಎಂಬ ಆರೋಪ ಕೆಳಿಬಂದಿರುವ ಹಿನ್ನೆಲೆಯಲ್ಲಿ ಇದನ್ನೀಗ ರದ್ದು ಮಾಡಲಾಗಿದೆ.ಇದನ್ನೂ ಓದಿ:ರಾಜಕೀಯ, ಮಿಲಿಟರಿ ಬಳಕೆಗೆ ಮಾಹಿತಿ ಕಳವು ತಡೆಯಲು ಆ್ಯಪ್​ಗಳಿಗೆ ನಿರ್ಬಂಧಡೇಟಾ ಸುರಕ್ಷತೆ ಮತ್ತು ಗೌಪ್ಯತೆ ಸಮಸ್ಯೆಗಳನ್ನು ಉಲ್ಲೇಖಿಸಿ ಭಾರತ ಸರ್ಕಾರವು 59 ಚೈನೀಸ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ, ಚೀನಾದ ಪರವಾಗಿರುವಂಥ ಟೆಂಡರ್‌ ಇದಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸದ್ಯ ಟೆಂಡರ್‌ ರದ್ದು ಮಾಡಲಾಗಿದೆ. ಹೊಸದಾಗಿ ಟೆಂಡರ್‌ ಕರೆಯಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ – ಡೀಪ್ಇನ್‌ಮೈಂಡ್ ಅನ್ನು ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಲಾಗಿದೆ ಎಂದು ಭಾರತೀಯ ಸಂಸ್ಥೆಗಳು ಆರೋಪಿಸಿದ್ದವು. ಇದು ಚೀನಾದ ಸಂಸ್ಥೆಯಾದ ಹಿಕ್ವಿಷನ್‌ಗೆ ಸಂಬಂಧಿಸಿದ್ದು, ಚೀನಾದ ಸರ್ಕಾರದ ಒಡೆತನದ ಕಂಪನಿಯ ಭಾಗವಾಗಿದೆ. ಆದ್ದರಿಂದ ಈ ಟೆಂಡರ್‌ ರದ್ದು ಮಾಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ.ಇದೇ ವೇಳೆ, ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚುತ್ತಿರುವ ಅಪರಾಧಿಕ ಚಟುವಟಿಕೆಗಳ ನಿಗ್ರಹಕ್ಕೆ ಹಾಗೂ ರೈಲುಗಳಿಗೆ ಹೋಗಿ ಬರುವ ಪ್ರಯಾಣಿಕರ ಕಡೆ ಗಮನ ಹರಿಸುವ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸ್ಥಾಪಿಸಲು ಇದೇ ವೇಳೆ ರೈಲ್ವೆ ಇಲಾಖೆ ನಿರ್ಧರಿಸಿದೆ. ಪ್ರಯಾಣಿಕರು ಮುಖ ಗುರುತು ಪತ್ತೆಹಚ್ಚುವಿಕೆ ಸೇರಿದಂತೆ ಅವರ ಸಂಪೂರ್ಣ ವಿವರಗಳನ್ನು ತಿಳಿಸಬಲ್ಲ ತಂತ್ರಜ್ಞಾನ ಇದಾಗಿದೆ.(ಏಜೆನ್ಸೀಸ್‌)

₹705 ಕೋಟಿ ಗುಳುಂ ಆರೋಪ: ಸಿಬಿಐ ಬಲೆಗೆ ಜಿವಿಕೆ ಒಡೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
