ನವದೆಹಲಿ:ರೈಲ್ವೆ ಇಲಾಖೆಯಲ್ಲೀಗ ಅಧುನೀಕರಣದ ಗಾಳಿ ಬೀಸುತ್ತಿದೆ. ಹೊಸ ಹೊಸ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳುತ್ತಿದೆ. ಅಂತೆಯೇ, ಶತಮಾನಗಳ ಹಳೆಯ ಸಂಪ್ರದಾಯವೊಂದಕ್ಕೆ ತಿಲಾಂಜಲಿ ನೀಡಿದೆ.
ಈವರೆಗೂ ಹಿರಿಯ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡಲೆಂದೇ ಟೆಲಿಫೋನ್​ ಅಟೆಂಡೆಂಟ್​ ಕಮ್ ಡಾಖ್​ ಕಲಾಸಿ ಅಥವಾ ಬಂಗ್ಲೆ ಪ್ಯೂನ್​ ಹೆಸರಿನಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿತ್ತು. ಮೇಲಧಿಕಾರಿಗಳ ಮನೆಯ ಚಾಕರಿಗೆಂದೇ ಇರುತ್ತಿದ್ದವರನ್ನು ಈ ಹೆಸರಿನಿಂದ ಕರೆಯತ್ತಿದ್ದರು ಎನ್ನಬಹುದೇನೋ.
ಇದನ್ನೂ ಓದಿ;ಎರಡು ಮದುವೆಗಳಿಂದ 1.5 ಕೋಟಿ ರೂ. ಕಮಾಯಿ; ಮೂರನೇ ಮದುವೆಯಾಗಿ ವಿದೇಶಕ್ಕೆ ಹಾರಬೇಕಿದ್ದ ವಧುವಿಗೆ ಕೈಕೊಟ್ಟಿದ್ದೇನು ?
ಬ್ರಿಟಿಷರ ಕಾಲದಲ್ಲಿ ಇಂಥದ್ದೊಂದು ಪದ್ಧತಿ ಪ್ರಾರಂಭವಾಗಿತ್ತು. ಇಂದಿನವರೆಗೂ ಈ ವಸಾಹತುಶಾಹಿ ಉಳಿಗ ಮುಂದುವರಿದಿತ್ತು. ಇದೀಗ ಈ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳದಂತೆ ರೈಲ್ವೆ ಮಂಡಳಿ ಆದೇಶ ಹೊರಡಿಸಿದೆ.
ಈ ನೇಮಕಾತಿ ಮಂಡಳಿಯ ಪರಿಶೀಲನೆಯಲ್ಲಿತ್ತು. 2020ರ ಜುಲೈ 1ರಿಂದ ಅನ್ವಯವಾಗುವಂತೆ ಅಂಥ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹುದ್ದೆಗಳಿಗೆ ನೇಮಕವಾಗುತ್ತಿದ್ದವರು ಮೂರು ವರ್ಷಗಳ ಬಳಿಕ ಮತ್ತೊಮ್ಮೆ ಪರೀಕ್ಷೆಗೆ ಒಳಪಟ್ಟು ಡಿ ಗ್ರೂಪ್​ ಹುದ್ದೆಗಳ ಸಮಾನ ಸ್ಥಾನಮಾನ ಪಡೆಯುತ್ತಿದ್ದರು.
ಸೆ.1ರಿಂದ ಶಾಲಾ- ಕಾಲೇಜು ಆರಂಭ ಪ್ರಕ್ರಿಯೆ; ಅರ್ಧದಷ್ಟು ಮಕ್ಕಳು, ಶಿಕ್ಷಕರಿಗಷ್ಟೇ ಅವಕಾಶ; ಹೀಗಿರಲಿದೆ ಮಾರ್ಗಸೂಚಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − five =
Remember me
