ನವದೆಹಲಿ:ಕೋವಿಡ್ -19 ರೋಗಿಗಳ ಆರೈಕೆ ಕೇಂದ್ರಗಳಾಗಿ ದೇಶದ 215 ರೈಲ್ವೆ ಕೇಂದ್ರಗಳನ್ನು ಗುರುತಿಸಿರುವ ಭಾರತೀಯ ರೈಲ್ವೆ, ಆ ಕೇಂದ್ರಗಳಲ್ಲಿ ವೈದ್ಯರು, ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸುವುದಾಗಿ ಗುರುವಾರ ತಿಳಿಸಿದೆ.ಕೋವಿಡ್ ರೋಗಿಗಳ ಆರೈಕೆ ಕೇಂದ್ರಗಳಾಗಿ ಪರಿವರ್ತಿತ ರೈಲ್ವೆ ಬೋಗಿಗಳಲ್ಲಿ 2500 ವೈದ್ಯರು ಹಾಗೂ 35 ಸಾವಿರ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಈ ಬೋಗಿಗಳಿಗೆ ನಿಯೋಜಿಸಲಾಗುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ:ಊರು ಸೇರಲು ಹೊರಟ ವಲಸೆ ಕಾರ್ಮಿಕ ದಂಪತಿ ಹೋದದ್ದು ಮಸಣಕ್ಕೆ…!
ವಿವಿಧ ವಲಯಗಳು ತಾತ್ಕಾಲಿಕ ಆಧಾರದ ಮೇಲೆ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನೇಮಕಗೊಳಿಸುತ್ತಿವೆ. ಕೋವಿಡ್- 19 ಆಸ್ಪತ್ರೆಗಳಿಗೆ ಹತ್ತಿರದಲ್ಲೇ ಈ ರೈಲ್ವೆ ವ್ಯವಸ್ಥೆ ಮಾಡಲಾಗಿದೆ.ರೋಗಿಗಳ ಆರೈಕೆಗಾಗಿ 17 ಕೋವಿಡ್ ಆಸ್ಪತ್ರೆಗಳಲ್ಲಿ 5,000 ಹಾಸಿಗೆಗಳು ಮತ್ತು ರೈಲ್ವೆ ಆಸ್ಪತ್ರೆಗಳಲ್ಲಿ 33 ಹಾಸ್ಪಿಟಲ್ ಬ್ಲಾಕ್​ಗಳಿದ್ದು ಯಾವುದೇ ತುರ್ತು ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಲು ಸಿದ್ಧವಿರುವುದಾಗಿ ಹೇಳಿದೆ.ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ, ರಾಜ್ಯಗಳು ಕೋರಿದಲ್ಲಿ ಈ ಸೌಲಭ್ಯವನ್ನು ರಾಜ್ಯಗಳು ಹಾಗೂ ಕೇಂದ್ರ ಸರ್ಕಾರಗಳಿಗೆ ಹಂಚಿಕೆ ಮಾಡಲಾಗುತ್ತದೆ. ಭಾರತದ ಪ್ರಮುಖ ಕೋವಿಡ್ ಹಾಟ್​ಸ್ಪಾಟ್ ಪ್ರದೇಶಗಳು, ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೂ ಈ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ರೈಲ್ವೆ ತಿಳಿಸಿದೆ.
ಪಂಜಾಬ್​ ಬಳಿ ಭಾರತೀಯ ವಾಯುಪಡೆ ಯುದ್ಧವಿಮಾನ ಪತನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 4 =
Remember me
