ನವದೆಹಲಿ:ವಿವಿಧ ರಾಜ್ಯಗಳಿಗೆ ವಲಸೆ ಕಾರ್ಮಿಕರನ್ನು ಕಳುಹಿಸಲು ರೈಲ್ವೆ ಇಲಾಖೆ ಈಗಾಗಲೇ ಶ್ರಮಿಕ್​ ಎಕ್ಸ್​ಪ್ರೆಸ್​ ರೈಲುಗಳನ್ನು ಓಡಿಸುತ್ತಿದೆ. ಇದೀಗ ಸಾಮಾನ್ಯ ಪ್ರಯಾಣಿಕರಿಗಾಗಿಯೂ ಪ್ಯಾಸೆಂಜರ್​ ರೈಲುಗಳ ಸಂಚಾರವನ್ನು ಹಂತಹಂತವಾಗಿ ಏಪ್ರಿಲ್​ 12ರಿಂದ (ಮಂಗಳವಾರ) ಆರಂಭಿಸಲು ಮುಂದಾಗಿದೆ.
ಇದಕ್ಕಾಗಿ ಸೋಮವಾರ (ಮೇ11) ಸಂಜೆ ನಾಲ್ಕು ಗಂಟೆಯಿಂದ ಬುಕಿಂಗ್​ ಆರಂಭಿಸಲಿದೆ. ಪ್ರಯಾಣಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಈ ನಡುವೆ, ಬೇರೆ ಬೇರೆ ರಾಜ್ಯಗಳಲ್ಲಿರುವ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕರೆಯಿಸಿಕೊಳ್ಳಲು ಎಲ್ಲ ರಾಜ್ಯ ಸರ್ಕಾರಗಳು ಅನುವು ಮಾಡಿಕೊಡಬೇಕೆಂದು ರೈಲ್ವೆ ಇಲಾಖೆ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ;ಹೊರ ರಾಜ್ಯ, ವಿದೇಶದಿಂದ ರಾಜ್ಯಕ್ಕೆ ಬರುವವರಿಗೆ ಕಡ್ಡಾಯ ಕ್ವಾರಂಟೈನ್​
ಈವರೆಗೆ 350ಕ್ಕೂ ಅಧಿಕ ಶ್ರಮಿಕ್​ ಎಕ್ಸ್​ಪ್ರೆಸ್​ ರೈಲುಗಳು 3.5 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಆವರವರ ರಾಜ್ಯಗಳಿಗೆ ತಲುಪಿಸಿವೆ ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್​ ಗೌಬಾ ಮಾಹಿತಿ ನೀಡಿದ್ದಾರೆ.
ಮಾಲ್ಡೀವ್ಸ್​ ರಾಜಧಾನಿ ಮಾಲೆಗೆ ನೌಕಾಪಡೆಯ ಮತ್ತೊಂದು ಹಡಗು ಐಎನ್​ಎಸ್​ ಮಘರ್​ ತಲುಪಿದೆ. ಅಂತೆಯೇ ರಿಯಾದ್​ನಿಂದ 139 ಭಾರತೀಯರನ್ನು ಹೊತ್ತ ಏರ್​ ಇಂಡಿಯಾ ವಿಮಾನ ಪ್ರಯಾಣ ಆರಂಭಿಸಿದೆ.
ಕಾರ್ಮಿಕರನ್ನು ಬೆಂಗಳೂರಿಗೆ ಕರೆತರಲು ಜಿಲ್ಲೆಗಳಿಂದ ಹೊರಡುತ್ತಿವೆ ವಿಶೇಷ ಬಸ್​ಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − nine =
Remember me
