ದೆಹಲಿ:ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿಯೊಂದನ್ನು ನೀಡಿದ್ದು, ಟಿಕೆಟ್​​ ದರವನ್ನು ಶೇ.25ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ.ಇದನ್ನೂ ಓದಿ:VIDEO| ಮತದಾನ ನಡೆಯುವಾಗಲೇ ಮತಪೆಟ್ಟಿಗೆಯೊಂದಿಗೆ ಓಡಿಹೋದ ಭೂಪಈ ಕುರಿತು ಆದೇಶವನ್ನು ಹೊರಡಿಸಿರುವ ರೈಲ್ವೆ ಇಲಾಖೆಯು, ಎಸಿ ಆಸನ ವ್ಯವಸ್ಥೆ ಹೊಂದಿರುವ ಎಲ್ಲ ರೈಲು ಮತ್ತು ಎಕ್ಸಿಕ್ಯೂಟಿವ್ ಬೋಗಿಗಳ ಸೀಟಿನ ದರವನ್ನು ಶೇಕಡಾ 25 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿದೆ. ಈ ಕ್ರಮವು ವಂದೇ ಭಾರತ್ ರೈಲಿಗೂ ಅನ್ವಯವಾಗಲಿದ್ದು, ಇದರಿಂದಾಗಿ ಪ್ರಯಾಣಿಕರಿಗೂ ಪ್ರಯೋಜನವಾಗಲಿದೆ.
ರೈಲುಗಳಲ್ಲಿನ ವಸತಿ ಸೌಕರ್ಯಗಳ ಬಳಕೆಯನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಈ ಕ್ರಮಕೈಗೊಳ್ಳಲಾಗಿದೆ. ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಎಸಿ ಆಸನ ವ್ಯವಸ್ಥೆ ಹೊಂದಿರುವ ರೈಲುಗಳಲ್ಲಿ ರಿಯಾಯಿತಿ ದರದ ಯೋಜನೆಯನ್ನು ಪರಿಚಯಿಸಲು ವಲಯ ರೈಲ್ವೆಗಳಿಗೆ ಅಧಿಕಾರವನ್ನು ನೀಡಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ.ಇದನ್ನೂ ಓದಿ:ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶೀಘ್ರವೇ ಸಿಎಂ ಬದಲಾವಣೆ ಎಂದ ಆದಿತ್ಯ ಠಾಕ್ರೆ
ರಿಯಾಯಿತಿಯ ಪ್ರಮಾಣವು ಮೂಲ ದರದ ಗರಿಷ್ಠ 25 ಪ್ರತಿಶತದವರೆಗೆ ಇದ್ದು, ಮೀಸಲಾತಿ ಶುಲ್ಕ, ಸೂಪರ್ ಫಾಸ್ಟ್ ಸರ್ಚಾರ್ಜ್, ಜಿಎಸ್ಟಿ , ಇತ್ಯಾದಿಗಳಂತಹ ಇತರ ಶುಲ್ಕಗಳನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ಈ ದರಗಳು ಸಹ ಸ್ಪರ್ಧಾತ್ಮಕ ಸಾರಿಗೆ ವಿಧಾನಗಳ ಮೇಲೆ ಅವಲಂಬಿತವಾಗಿರುತ್ತದೆಎಂದು ಆದೇಶದಲ್ಲಿ ತಿಳಿಸಿದೆ. ಈ ವಿನಾಯಿತಿಯನ್ನು ತಕ್ಷಣವೇ ಜಾರಿಗೆ ತರಲಾಗುವುದು. ಆದರೆ, ಈಗಾಗಲೇ ಬುಕಿಂಗ್​​ ಮಾಡಿದ ಪ್ರಯಾಣಿಕರಿಗೆ ಯಾವುದೇ ಶುಲ್ಕವನ್ನು ಮರುಪಾವತಿ ಮಾಡಲಾಗುವುದಿಲ್ಲ ಎಂದು ತಿಳಿಸಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 19 =
Remember me
