ನವದೆಹಲಿ:ಅನೇಕ ಮದುವೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲವು ತಮಾಷೆಯಾಗಿವೆ ಮತ್ತು ಕೆಲವು ಭಾವನಾತ್ಮಕವಾಗಿವೆ. ಈಗ ವೈರಲ್​​ ಆಗಿರುವ ವಿಡಿಯೋದಲ್ಲಿ ಮದುವೆ ವೇಳೆ ಮಳೆ  ಬಂದ್ರೆ ಹೇಗೆ ಇರುತ್ತದೆ ಎನ್ನುವುದನ್ನು ನೋಡಬಹುದಾಗಿದೆ.
ಮದುವೆ ವೇಳೆ ಜೋರಾಗಿ ಮಳೆ ಬಂದಿದೆ. ವೇದಿಕೆಯ ಬಳಿ ಯಾರೂ ಕಾಣಿಸುತ್ತಿಲ್ಲ. ಆದರೆ ವರನು ವೇದಿಕೆಯಲ್ಲಿ ಒಬ್ಬನೇ ನಿಂತಿರುವುದು ಕಂಡುಬರುತ್ತದೆ. ಯಾವುದೇ ವಧು ಅಥವಾ ಯಾವುದೇ ಸಂಬಂಧಿಕರು ಅವನ ಹತ್ತಿರ ನಿಂತಿಲ್ಲ.
A post shared by Dilip Prajapati (@dk_official_143)

ಮಳೆಯಿಂದಾಗಿ ಮದುವೆಯ ಅದ್ದೂರಿತನವೇ ಹಾಳಾಗಿದ್ದು, ವರ ಈಗ ಅಸಹಾಯಕನಾಗಿ ಕಾಣುವಂತಾಗಿದೆ. ವೇದಿಕೆಯ ಮುಂದೆ ಒದ್ದೆಯಾದ ಕುರ್ಚಿಗಳು ಮತ್ತು ಕೆಲವು ಜನರು ಮಾತ್ರ ಗೋಚರಿಸುತ್ತಾರೆ. ಇನ್ನು ವಿಡಿಯೋದಲ್ಲಿ ಅತಿಥಿಯೊಬ್ಬರು ಸಾಮಾನು ಸರಂಜಾಮುಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ.
ಈ ವೀಡಿಯೊವನ್ನು ದಿಲೀಪ್ ಪ್ರಜಾಪತಿ ಎಂಬ ವ್ಯಕ್ತಿ ತನ್ನ ಖಾತೆ @dk_official_143 ನಿಂದ Instagram ನಲ್ಲಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಬರೆಯುವ ತನಕ 1 ಕೋಟಿ 16 ಲಕ್ಷ ಜನ ನೋಡಿದ್ದಾರೆ.  ವಿಡಿಯೋ ನೋಡಿದ ಜನ ಕಮೆಂಟ್ ಕೂಡ ಮಾಡುತ್ತಿದ್ದಾರೆ. ಈ ಸನ್ನಿವೇಶದ ಬಗ್ಗೆ ಹಲವರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದರೆ, ಹಲವರು ವರನ ಮೇಲೆ ಕರುಣೆ ತೋರಿದ್ದಾರೆ ಮತ್ತು ಈ ಪರಿಸ್ಥಿತಿಯನ್ನು ಗೇಲಿ ಮಾಡಬೇಡಿ ಎಂದು ಕೇಳಿದ್ದಾರೆ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fourteen + nine =
Remember me
