ಮುಂಬೈ:ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರು ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಇದೀಗ ಅದೇ ಘಟನೆಯನ್ನು ಸಿನಿಮಾವೊಂದು ಆಗುತ್ತಿದೆ ಎನ್ನುವ ಸುದ್ದಿಯೊಂದು ಬಾಲಿವುಡ್​​ ಅಂಗಳದಲ್ಲಿ ಹರಿದಾಡುತ್ತಿದೆ.

ಖಾಸಗಿ ವಾಹಿನಿಯ ವರದಿಯ ಪ್ರಕಾರ, ರಾಜ್ ಅವರ ಬಂಧನ ಮತ್ತು ಅವರು ಜೈಲಿನಲ್ಲಿರುವ ಸಮಯದ ಕುರಿತು ಸಿನಿಮಾ ಕೆಲಸದಲ್ಲಿದೆ. ಕುಂದ್ರಾ ಅವರೇ ಚಿತ್ರದಲ್ಲಿ ನಟಿಸಲಿದ್ದಾರೆ.ನಿರ್ದೇಶಕರ ಯಾರು ಎನ್ನುವುದು ಖಾತ್ರಿಯಾಗಿಲ್ಲ. ಆದರೆ ರಾಜ್ ಕುಂದ್ರಾ ಅವರು ನಿರ್ಮಾಣದಿಂದ ಸ್ಕ್ರಿಪ್ಟ್‌ವರೆಗೆ ಎಲ್ಲಾ ಅಂಶಗಳಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ತಂಡ ಶೀಘ್ರವೇ ಘೋಷಣೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಉದ್ಯಮಿ ರಾಜ್ ಕುಂದ್ರಾ ಪ್ರಕರಣ:ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಕಳೆದ ವರ್ಷ ಜೂನ್ ತಿಂಗಳಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಅದೂ ಸಾಮಾನ್ಯ ಪ್ರಕರಣವಲ್ಲ, ಅಶ್ಲೀಲ ವಿಡಿಯೋ ನಿರ್ಮಾಣ ಹಾಗೂ ಮಾರಾಟ ಪ್ರಕರಣದಲ್ಲಿ. ತನಿಖೆ ನಡೆಸಿದ್ದ ಪೊಲೀಸರು ರಾಜ್ ಕುಂದ್ರಾ ವಿರುದ್ಧ ಸಾಕಷ್ಟು ಸಾಕ್ಷ್ಯಗಳನ್ನು ಒಟ್ಟು ಮಾಡಿದ್ದರು. ಕೆಲವು ನಟಿಯರು ಬಹಿರಂಗವಾಗಿ ಕುಂದ್ರಾ ವಿರುದ್ಧ ಆರೋಪಗಳನ್ನೂ ಮಾಡಿದರು. ಇನ್ನು ಕೆಲವರು ತನಿಖಾಧಿಕಾರಿಗಳ ಬಳಿಕ ಹೇಳಿಕೆ ನೀಡಿದ್ದರು. 63 ದಿನಗಳ ಬಳಿಕ ಜಾಮೀನಿನ ಮೇಲೆ ಕುಂದ್ರಾ ಜೈಲಿನಿಂದ ಹೊರಬಂದರು. ಪ್ರಕರಣ ಈಗಲೂ ವಿಚಾರಣೆ ಹಂತದಲ್ಲಿದೆ. ಇದರ ನಡುವೆ ರಾಜ್ ಕುಂದ್ರಾ ತಮ್ಮದೇ ಪ್ರಕರಣವನ್ನು ಸಿನಿಮಾ ಆಗಿಸಲು ಮುಂದಾಗಿದ್ದಾರೆ.

ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿ ಪ್ರಕರಣದಲ್ಲ ಜೈಲು ಪಾಲಾಗಿದ್ದ ಸಂಜಯ್ ದತ್, ಆ ಪ್ರಕರಣವನ್ನು ತಮ್ಮದೇ ಮೂಗಿನ ನೇರಕ್ಕೆ ರಾಜ್​ಕುಮಾರ್ ಹಿರಾನಿ ಕೈಯಿಂದ ‘ಸಂಜು’ ಸಿನಿಮಾ ಮಾಡಿಸಿದರು. ಜನಗಳ ದೃಷ್ಟಿಯಲ್ಲಿ ‘ಅಮಾಯಕ’ ಎನಿಸಿಕೊಂಡರು. ಇತ್ತೀಚೆಗೆ ಬಂದ ನರೇಶ್ ಹಾಗೂ ಪವಿತ್ರಾ ಲೋಕೇಶ್​ರ ‘ಮತ್ತೆ ಮದುವೆ’ ಸಿನಿಮಾ ಸಹ ಇದಕ್ಕೆ ಉದಾಹರಣೆ. ಅಂತೆ ಈಗ ರಾಜ್​ ಕುಂದ್ರಾ ಅವರ ಸಿನಿಮಾ ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಈ ಕುರಿತಾಗಿ ಅಧಿಕೃತ ಮಾಹಿತಿ ಬರುವವರೆಗೂ ಕಾಯಬೇಕಿದೆ.
ಮಾಜಿ ಪ್ರಿಯಕರನಿಗೆ ಕಸದ ಚೀಲ ಗಿಫ್ಟ್ ಮಾಡಿದ ಗೆಳತಿ; ಮುಂದೇನಾಯ್ತು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
