ಮಥುರಾ:1985ರಲ್ಲಿ ರಾಜಸ್ಥಾನದ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ, ಅಂದಿನ ಮುಖ್ಯಮಂತ್ರಿಯ ರಾಜೀನಾಮೆಗೆ ಕಾರಣವಾಗಿದ್ದ ರಾಜಮನೆತನ ರಾಜಾ ಮಾನ್‌ಸಿಂಗ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿ ಪೊಲೀಸರಿಗೆ ಸ್ಥಳೀಯ ಕೋರ್ಟ್‌ ಜೀವಾವಧಿ ಶಿಕ್ಷೆ ನೀಡಿದೆ.1985ರಲ್ಲಿ ನಡೆದಿರುವ ಈ ಕೊಲೆ ಪ್ರಕರಣದ ತೀರ್ಪು ಇಂದು ಅಂದರೆ 35 ವರ್ಷಗಳ ಬಳಿಕ ಪ್ರಕಟವಾಗಿದೆ.
1985ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ರಾಜಸ್ಥಾನದ ಭರತಪುರ್ ರಾಜಪ್ರಭುತ್ವದ ರಾಜಾ ಮಾನ್‌ಸಿಂಗ್ ಅವರ ಹತ್ಯೆ ಪ್ರಕರಣ ಇದಾಗಿದೆ. ಚುನಾವಣಾ ಸಮಯದಲ್ಲಿನ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಲಾಗಿತ್ತು. ಈ ಕುರಿತು ಇಂದು ತೀರ್ಪು ಪ್ರಕಟಿಸಿರುವ ಮಥುರಾ ಸಿಬಿಐ ವಿಶೇಷ ನ್ಯಾಯಾಲಯ,11 ಪೊಲೀಸರನ್ನು ದೋಷಿಗಳೆಂದು ನಿನ್ನೆ ಘೋಷಿಸಿತ್ತು. ಇಂದು ಶಿಕ್ಷೆಯ ಪ್ರಮಾಣ ನಿಗದಿ ಮಾಡಲಾಗಿದೆ.
ಅಂದು ನಡೆದಿದ್ದ ಚುನಾವಣೆಯಲ್ಲಿ ಡೀಗ್ ವಿಧಾನಸಭಾ ಕ್ಷೇತ್ರದಿಂದ ರಾಜಾ ಮಾನ್‌ಸಿಂಗ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ನಿವೃತ್ತ ಐಎಎಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ಅವರನ್ನು ಕಣಕ್ಕೆ ಇಳಿಸಿತ್ತು.
ಇದನ್ನೂ ಓದಿ:‘ಮೂಳೆ ನಡುಗಿಸುವ ಚಳಿ’ ಎದುರಿಸಲು ಲಡಾಖ್‌ನಲ್ಲಿ ಸೇನೆಯ ತಯಾರಿ ನೋಡಿ…
ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭರತಪುರ್ ರಾಜಮನೆತನದ ಧ್ವಜಕ್ಕೆ ಅಪಮಾನ ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡಿದ್ದ ಮಾನ್‌ಸಿಂಗ್ ಅವರು, 1985ರ ಫೆಬ್ರವರಿ 20ರಂದು ಅಂದಿನ ಮುಖ್ಯಮಂತ್ರಿ ಶಿವಚರಣ್ ಮಾಥುರ್ ಅವರ ಚುನಾವಣಾ ಪ್ರಚಾರ ಸಭೆಗೆ ತಮ್ಮ ಜೀಪ್ ನುಗ್ಗಿಸಿದ್ದರು, ಮಾತ್ರವಲ್ಲದೇ ಅವರ ಹೆಲಿಕಾಪ್ಟರ್‌ಗೆ ಹಾನಿ ಮಾಡಿದ್ದರು.
ಘಟನೆ ನಡೆದ ಮಾರನೆಯ ದಿನ (ಫೆಬ್ರವರಿ 21) ರಾಜಾ ಮಾನ್‌ಸಿಂಗ್ ತಾವು ಮಾಡಿದ ತಪ್ಪಿಗಾಗಿ ತಮ್ಮ ಬೆಂಬಲಿಗರೊಂದಿಗೆ ಪೊಲೀಸ್ ಠಾಣೆಗೆ ಶರಣಾಗಲು ತೆರಳಿದ್ದರು. ಆದರೆ ಉಪಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಖಾನ್ ಸಿಂಗ್ ಭಾಟಿ ನೇತೃತ್ವದ ಪೊಲೀಸ್ ತಂಡ ಗುಂಡು ಹಾರಿಸಿತ್ತು. ಇದರ ಪರಿಣಾಮ ರಾಜಾ ಮಾನ್‌ಸಿಂಗ್ ಮತ್ತು ಇಬ್ಬರು ಬೆಂಬಲಿಗರು ಸ್ಥಳದಲ್ಲೇ ಮೃತಪಟ್ಟಿದ್ದರು.
ಪ್ರತಿಭಟನೆ ಉಗ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಶಿವಚರಣ್ ಮಾಥುರ್ ರಾಜೀನಾಮೆ ನೀಡಿದ್ದರು. ಪ್ರಕರಣದ ತನಿಖೆಯನ್ನು ಉತ್ತರಪ್ರದೇಶದ ಮಥುರಾದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು.
ಘಟನೆ ನಡೆದು 35 ವರ್ಷಗಳ ಬಳಿಕ ಇದೀಗ ಮಥುರಾ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಶರಣಾಗಲು ಬಂದಿದ್ದ ರಾಜಾ ಮಾನ್‌ಸಿಂಗ್ ಹಾಗೂ ಅವರ ಬೆಂಬಲಿಗರನ್ನು ಗುಂಡು ಹಾರಿಸಿ ಕೊಂದ ಆರೋಪದ ಮೇಲೆ ಉಪ ಪೊಲೀಸ್ ವರಿಷ್ಠಾಧಿಕಾರಿ ಖನ್ ಸಿಂಗ್ ಭಾಟಿ ಸೇರಿದಂತೆ ಒಟ್ಟು 11 ಪೊಲೀಸರಿಗೆ ಈಗ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.
ಇನ್ನು ಸದ್ಯ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನಲ್ಲಿ ಸಚಿನ್ ಪೈಲಟ್ ಅವರಿಗೆ ಬೆಂಬಲ ಘೋಷಿಸಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ವಿಶ್ವೇಂದ್ರ ಸಿಂಗ್, ರಾಜಾ ಮಾನ್‌ಸಿಂಗ್ ಅವರ ಸಂಬಂಧಿ ಎಂಬುದು ಉಲ್ಲೇಖಾರ್ಹ.(ಏಜೆನ್ಸೀಸ್‌)
‘ಥ್ರಿಲ್ಲಿಂಗ್‌ ಸ್ಟೋರಿ’ ಖ್ಯಾತಿಯ ಪತ್ರಕರ್ತೆ ಅಪಘಾತಕ್ಕೆ ಬಲಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 4 =
Remember me
