
ಈ ಸಂವತ್ಸರದ ತುದಿಗೆ ಬಂದು ತಲುಪಿದ್ದೇವೆ. ದೀಪಾವಳಿಯಿಂದ ಆರು ತಿಂಗಳ ಕಾಲ ಮತ್ತೆ ಈ ರೋಗ ಭೀತಿ ಇರುವುದಿಲ್ಲ, ಬೇಜವಾಬ್ದಾರಿತನ ಮಾಡಿದರೆ ಬೇರೆ ಯಾವುದೇ ರೀತಿಯಲ್ಲಿ ಸಾಂಕ್ರಾಮಿಕ ರೋಗ ಬರಬಹುದು ಎನಿಸುತ್ತದೆ. ಸದ್ಯಕ್ಕೆ ಜನ ಎಚ್ಚರಿಕೆಯಿಂದಲೇ ಹೋಗಬೇಕಾಗುತ್ತದೆ. ಸಮೃದ್ಧ ಬೆಳೆಯಾಗುತ್ತದೆ, ಬೆಳೆಗೆ ತೊಂದರೆಯಾಗುವುದಿಲ್ಲ. ಮಕರ ಮತ್ತು ಕುಂಭ ಎರಡೂ ಶನಿಯ ಮನೆಗಳು. ನವೆಂಬರ್ 20ರಂದು ಕುಂಭದಲ್ಲೇ ಗುರು ಹೋಗುತ್ತಾನೆ. ಆದ್ದರಿಂದ ಆ ಸಂದರ್ಭದಲ್ಲಿ ಇಡೀ ರಾಷ್ಟ್ರದಲ್ಲಿ ಕುಂಭದ್ರೋಣ ಮಳೆಯಾಗುತ್ತದೆ. ಅರ್ಧ ಉತ್ತರ ಭಾರತವೇ ನಲುಗಿ ಹೋಗುತ್ತದೆ. ದಕ್ಷಿಣ ಭಾರತದಲ್ಲಿ ಕೇರಳ, ತಮಿಳುನಾಡು, ಮಹಾರಾಷ್ಟ್ರದ ಒಂದು ಭಾಗ ಏಟು ತಿನ್ನುತ್ತದೆ. ಕೊಲ್ಕೊತ್ತಾದಲ್ಲಿ ನದಿ ಉಕ್ಕಬಹುದು. ಯಾವುದೇ ರೋಗ ಬರಬೇಕಾದರೆ ನೀರು ಕಲ್ಮಷವಾದರೆ ಸಾಕು, ಹಾಗಾಗಿ ಜನ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಬಿರುಗಾಳಿ ಎದ್ದು, ಸಮುದ್ರ ಉಕ್ಕುತ್ತದೆ, ಭೂಕಂಪನ ಆಗುತ್ತದೆ. ಉತ್ತರ ಭಾರತ ತುಂಬ ಕಷ್ಟ ನಷ್ಟ ಅನುಭವಿಸುತ್ತದೆ. ಶನಿ ಮಕರದಲ್ಲಿದ್ದು ಏಪ್ರಿಲ್​ನಲ್ಲಿ ಕುಂಭ ರಾಶಿಗೆ ಬರುತ್ತಾನೆ. ಇಂತಹ ಸಂದರ್ಭದಲ್ಲಿ ಆಳುವವರೂ ಎಚ್ಚರಿಕೆ ವಹಿಸಬೇಕಾಗುತ್ತದೆ. ರಾಷ್ಟ್ರ ಆಳುವವರಿಗೆ ಭ್ರಮೆ ಬೇಡ. ಜನತೆ ರಾಷ್ಟ್ರದ ಹಿತ ಕಾಪಾಡಲು ಅವಕಾಶ ಕೊಟ್ಟಿದ್ದಾರೆ. ಪ್ರತಿ ರಾಜ್ಯವನ್ನೂ ಗೆಲ್ಲಲೇಬೇಕೆಂದು ಬೇಕಾದ್ದು ಮಾಡಿ ಯುದ್ಧದ ರೀತಿ ಚುನಾವಣೆ ಮಾಡುವುದು ಸೂಕ್ತವಾಗಲಿಕ್ಕಿಲ್ಲ. ಮುಂದಿನ ಒಂದು ವರ್ಷ ನಿರೀಕ್ಷಿತ ಫಲವೂ ಸಿಗುವುದಿಲ್ಲ. ಎಲ್ಲ ಕಡೆ ಚುನಾವಣೆ ಗೆಲ್ಲಲಾಗದು. ಗ್ರಹಗಳನ್ನು ದಾಟಿ ಅವುಗಳ ವಿರುದ್ಧ ಸಾಮ್ರಾಜ್ಯ ಕಟ್ಟಿದರೆ ಬಿಡಲ್ಲ. ಇದಕ್ಕೆ ರಾವಣನ ಕತೆಯೇ ಸಾಕ್ಷಿ. ರಾಷ್ಟ್ರದ ಚಿತ್ರಣದಿಂದ ನೋಡುವುದಾದರೆ ದೊಡ್ಡ ವ್ಯಕ್ತಿ ನವೆಂಬರ್​ನಲ್ಲಿ ಕಣ್ಮರೆ ಆಗುತ್ತಾರೆ. ಯಾರೆಂದು ನಾವು ಊಹಿಸುವುದು ಸರಿಯಲ್ಲ. ಏಪ್ರಿಲ್ 3ರಿಂದ ಮುಂದಿನ ಹತ್ತು ತಿಂಗಳು ಬಹಳ ಮುಖ್ಯಘಟ್ಟ. ದೇಶ, ಪ್ರಜೆಗಳನ್ನು ಕಾಪಾಡುವುದು ಪಾಲಕರ ಜವಾಬ್ದಾರಿ. 2023ರ ಜನವರಿ 17ರ ನಂತರ ಇಡೀ ಭರತ ಖಂಡ ರೋಗಮುಕ್ತ, ಋಣಮುಕ್ತ, ದಾರಿದ್ರ್ಯುುಕ್ತವಾಗುವುದರಲ್ಲಿ ಅನುಮಾನವಿಲ್ಲ. ರಾಜ್ಯಗಳಲ್ಲಿ ಒಂದಾದ ಮೇಲೆ ಒಂದರಂತೆ ಮತಾಂತರ, ಸ್ತ್ರೀ ಹತ್ಯೆಗಳು, ಲೂಟಿ, ಶಾಂತಿ ಭಂಗ ಕಾಣಿಸುತ್ತಿರುತ್ತದೆ. ಗ್ರಹಲಕ್ಷಣಗಳು ಇದನ್ನು ತೋರುತ್ತಿವೆ.
ಕರ್ನಾಟಕ ರಾಜ್ಯದ ವಿಚಾರ ಹೇಳಬೇಕೆಂದರೆ, 2018ರಿಂದ ಇವತ್ತಿನವರೆಗೂ ರಾಜ್ಯವನ್ನು ಸಂರಕ್ಷಣೆ ಮಾಡುವ ಸೂಕ್ತ ರಾಜನನ್ನೇ ದೇವರು ಕೊಟ್ಟಿಲ್ಲ ಎನ್ನಬಹುದು. ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆಂದು ನಾನು ಅಂದು ಹೇಳಿದ್ದೆ, ಸಿಎಂ ಆದರು. ಅಧಿಕಾರ ಮುಂದುವರಿಯಲಿಲ್ಲ. ಬಳಿಕ ಬಿಎಸ್​ವೈ ಬಂದರು. ಅವರಿಗೂ ಅವಕಾಶ ಪೂರ್ಣ ಸಿಗಲಿಲ್ಲ. ಈಗ ಬಸವರಾಜ ಬೊಮ್ಮಾಯಿ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ರೀತಿ ರಾಜನಲ್ಲಿ ಅಸ್ಥಿರ ಅಥವಾ ಭಯ ಇದ್ದಾಗ ಪ್ರಜೆಗಳನ್ನು ಕಾಪಾಡಲು ಆಗುವುದಿಲ್ಲ. ಶನಿ ರಾಹು ಕೇತು ಸಂಚಾರ ದೇಶಕ್ಕೆ ಎಲ್ಲಾ ರಾಜ್ಯಗಳಿಗೂ ಉಪದ್ರವ ಕೊಟ್ಟಿದ್ದಾರೆ, ಇದೊಂದೇ ಅಲ್ಲ. ಕೂತವರನ್ನು ಏಳಿಸೋದು, ಎದ್ದವರನ್ನು ಕೂರಿಸೋದು. ಇದು ಗ್ರಹ ಸಂಚಾರದ ಪರಿಣಾಮ. ರಾಜ್ಯದಲ್ಲಿ ಕಾಣಿಸಿದ ಅಸ್ಥಿರತೆಗೆ ರಾಹು- ಕೇತುಗಳ ಚಲನೆ, ಗುರು ಶನಿಯ ಸ್ಥಾನ ಪಲ್ಲಟಗಳು ಪ್ರಮುಖ ಕಾರಣ. ಸದ್ಯದ ಪರಿಸ್ಥಿತಿ ನೋಡಿದರೆ ಸರ್ಕಾರ ನಡೆಯುತ್ತಿದೆ ಎಂದು ಹೇಳಲು ಸಾಧ್ಯವೇ? ಇದು ರಾಜಲಕ್ಷಣವೇ? ಮುಂದೆ ಅತಂತ್ರ ಸ್ಥಿತಿ ನಿರ್ಮಾಣ ಆಗುತ್ತದೆ ಎಂದು ಈಗ ಹೇಳಲ್ಲ. ಆದರೆ ರಾಜನಾದವನು ಪ್ರಜಾಸುಖ ಕೊಡದೇ ಇರುವುದು ಅತಂತ್ರ ಎಂದೇ ಹೇಳಬೇಕಾಗುತ್ತದೆ. ಈಗಿರುವ ಸಿಎಂ ಕೂಡ ಪ್ರಜಾಸುಖ ಕೊಡಲು ಕಷ್ಟವಾಗುತ್ತದೆ. ಯಾವುದನ್ನೂ ಮಾಡಲು ಆಗಲ್ಲ. ಏನೂ ಕೆಲಸ ಮಾಡಲು ಆಗಲ್ಲ ಎಂದಾಗ ಬದಲಾವಣೆಯ ಕೂಗು ಏಳಬಹುದು. ಪಕ್ಷದಲ್ಲಿ ಅಸಂತೋಷ, ಅತೃಪ್ತಿ ಇರುತ್ತದೆ. ಇದು ಮುಖ್ಯಮಂತ್ರಿಗೆ ಮಾರಕವಾಗುತ್ತದೆ. ಮುಖ್ಯಮಂತ್ರಿಯವರು ಜಂಟಲ್​ವುನ್. ಜನಸಾಮಾನ್ಯರೂ ಒಪ್ಪುತ್ತಾರೆ. ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೇ ಪಕ್ಷದ ಕಡೆಯಿಂದ ಬೆಂಬಲ ನೀಡಿದರೆ ಸಹಜವಾಗಿ ಪ್ರಜೆಗಳಿಗೆ ಒಳ್ಳೆ ಕೆಲಸವಾಗುತ್ತದೆ; ಪಕ್ಷಕ್ಕೂ ಲಾಭವಾಗುತ್ತದೆ. ಮುಂದಿನ ನಾಲ್ಕು ತಿಂಗಳಲ್ಲಿ ಗುರು ಮುಂದಿನ ಮನೆ ಪ್ರವೇಶಿಸುತ್ತಾನೆ. ಈ ವೇಳೆ ಪಕ್ಷದಲ್ಲಿ ಯಾವುದೇ ಬೆಂಬಲ ಸಿಗದೇ ಇದ್ದರೆ ಅವರೇ ಸಾಕೆಂದು ಸುಮ್ಮನಾಗಿಬಿಡುವ ಸಾಧ್ಯತೆ ಇರುತ್ತದೆ. ಇನ್ನೊಂದು ಸಂವತ್ಸರದಲ್ಲಿ ಧರ್ಮನಿಷ್ಠೆ ಪಾಲಿಸಿದರೆ ಆಡಳಿತ ಪಕ್ಷಕ್ಕೆ ಉಳಿಗಾಲ; ಇಲ್ಲವಾದರೆ ಅಧಿಕಾರದಿಂದ ನಿರ್ಗಮಿಸುತ್ತಾರೆ.
ಅನಿತ್ಯಾನಿ ಶರೀರಾಣಿ ವಿಭವೋ ನೈವ ಶಾಶ್ವತಃ
ನಿತ್ಯಂ ಸನ್ನಿಹಿತೋ ಮೃತ್ಯುಃ ಕರ್ತವೋ› ಧರ್ಮಸಂಗ್ರಹಃ
ಶರೀರವು ಅನಿತ್ಯವಾಗಿದೆ. ಅಶಾಶ್ವತವದೆ. ವೈಭವವು ಸ್ಥಿರವಾಗಿ ಉಳಿಯುವಂಥದು ಅಲ್ಲ. ಮೃತ್ಯುವು ಯಾವಾಗಲೂ ಬೆನ್ನ ಹಿಂದೆ ಇರುತ್ತದೆ. ಆದ ಕಾರಣ ಸತ್ಕರ್ಮ ಮಾಡುವುದೇ ಮನುಷ್ಯನ ಧ್ಯೇಯವಾಗಿರಬೇಕು. ದೇಹವು ಕ್ಷಣ ಭಂಗುರವಾಗಿದೆ. ಈ ಜಗತ್ತಿನಲ್ಲಿ ಯಾರೂ ಸ್ಥಿರವಾಗಿ ಬದುಕಿ ಬಾಳಿಲ್ಲ. ದೃಢಕಾಯ ಇರುವ ತನಕ ಪುಣ್ಯ ಸಂಗ್ರಹ ಮಾಡಬೇಕು. ಸೂರ್ಯ ರಥ ಪ್ರತಿ ನಿಮಿಷಕ್ಕೆ ಇಪ್ಪತ್ತೆರಡು ಸಹಸ್ರ ಗಾವುದ ಚಲಿಸುವಂತೆ ಆಯುಷ್ಯವು ಕ್ಷೀಣವಾಗುತ್ತದೆ. ಮಳೆಯು ಬೀಳಲು ಗಿಡಗಳ ಮೇಲೆ ಕ್ಷಣಕಾಲ ನೀರು ನಿಲ್ಲುತ್ತದೆ. ಅದು ಸ್ಥಿರವಾಗಿ ಉಳಿಯುವುದಿಲ್ಲ. ಅದರಂತೆ ಶರೀರವು ಸ್ಥಿರವಾಗಿ ಇರುವುದಿಲ್ಲ.
ಭರವಸೆಯ ಮಾತು:ಈಗಿನ ಪರಿಸ್ಥಿತಿಯಲ್ಲಿ ಗ್ರಹಗಳ ಚಲನೆಯ ಆಧಾರದಲ್ಲಿ ಹೇಳುವುದಾದರೆ, ರಾಷ್ಟ್ರಮಟ್ಟದಲ್ಲಿ ಆಳುವ ಬಯಕೆ ಇದ್ದೇ ಇರುತ್ತದೆ, ಆ ಬಯಕೆಗೆ ಪೂರಕವಾಗಿ ಯಾರೂ ಸವಾಲು ಎದುರಿಸಲು ತಯಾರಿಲ್ಲ. ಸ್ವಾರ್ಥ, ಅಸೂಯೆ, ಅಧಿಕಾರದ ಆಸೆ, ಮೆರೆಯುವ ಆಸೆ. ಜನರನ್ನು ಸಂಕಷ್ಟದಿಂದ ಪಾರು ಮಾಡಲು ರಾಜಕೀಯ ನಾಯಕರು ವಿಫಲರಾಗುತ್ತಾರೆ. ಆದರೆ, ಮುಂದೆ ಗುರು ಮೇಷ ರಾಶಿಗೆ ಹೋಗುತ್ತಾನೆ. ಸತ್ಯಕಾಲ ಬರುತ್ತದೆ, ಅಂದು ಭಾರತ ಮುಂಚೂಣಿಯಲ್ಲಿರಲಿದೆ. ಶನಿ ಮತ್ತು ಗುರು ಸಂಪರ್ಕದಿಂದ ಚಳಿಗಾಲದಲ್ಲಿ ಬಿಸಿಲು, ಬಿಸಿಲಲ್ಲಿ ಚಳಿಯಾಗುತ್ತದೆ. ಮಳೆಗಾಲದಲ್ಲಿ ಭೂಮಿ ಒಣಗುತ್ತದೆ. ಹೀಗಿದ್ದರೂ ನಾವು ತಪ್ಪು ಮಾಡದಂತೆ ನಡೆದುಕೊಂಡರೆ ಭಗವಂತ ಕಾಪಾಡುತ್ತಾನೆ ಎಂಬ ಅಚಲ ವಿಶ್ವಾಸವಿದೆ. ಪ್ರಧಾನಿಯಿಂದ ಭ್ರಷ್ಟಾಚಾರ ಇಲ್ಲ. ಜಾಗತಿಕವಾಗಿ ಅವರಿಂದ ಒಂದಷ್ಟು ಸ್ಥಾನಮಾನ ಬಂದಿದೆ. ಆದರೂ ಅವರು ತಮ್ಮ ಸರ್ಕಾರ ಏನು ಮಾಡಿದೆ ಎಂದು ಯೋಚನೆ ಮಾಡಬೇಕಾಗುತ್ತದೆ. ಹಾಗೆಯೇ ಅವರಿಗೆ ಜೀವಭಯ ಸಮಸ್ಯೆ ಬರಬಹುದು, ಇಷ್ಟಾದರೂ 2024ರಲ್ಲೂ ಭಾರತವನ್ನು ಆಳುತ್ತಾರೆ ಎಂಬ ಮಾಹಿತಿ ನಮಗೆ ಪಂಚಾಂಗ ಮುಖಾಂತರ ಸಿಗುತ್ತದೆ. 2024ರಲ್ಲಿ ಗುರುವು ಶನಿ ಮನೆ ಬಿಟ್ಟು ಮುಂದಕ್ಕೆ ಹೋಗುತ್ತಿದ್ದಂತೆ ಭಾರತ ವಿಶ್ವದಲ್ಲೇ ಮುಂದಿರುತ್ತದೆ. ಗುರು ಮೀನ ರಾಶಿಗೆ ಬಂದಾಗ ವಿವೇಕಿಗಳು, ಸತ್ಯವಂತರು. ನ್ಯಾಯಮಾರ್ಗಿಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಕಾಲಾಯ ತಸ್ಮೈ ನಮಃ. ಭಾರತಕ್ಕೆ ದುರ್ಗತಿ ಇಲ್ಲ, ಇನ್ನೂ ಪ್ರಗತಿ ಕಾಲ ಕಾಣುತ್ತೇವೆ.
ರಾಷ್ಟ್ರ ನಾಯಕ ಗುರು ಇದ್ದಂತೆ…:ನ್ಯಾಯಾಂಗ ಹಾಗೂ ಬೇಹುಗಾರಿಕೆ ದೇಶದ ಕಣ್ಣು. ಈ ಕಣ್ಣಲ್ಲಿ ಕೈ ಹಾಕಿದರೆ ಕಣ್ಣು ಉಳಿಯುತ್ತದೆಯೇ? ರಾಷ್ಟ್ರವನ್ನು ಆಳುವವರು ಈ ವಿಚಾರದಲ್ಲಿ ಎಂದೆಂದಿಗೂ ದೂರವಿರಬೇಕು. ನ್ಯಾಯವನ್ನು ಕೊಡುವವರಿಗೆ ಸ್ವಾತಂತ್ರ್ಯ ಕೊಡಬೇಕು. ಸರ್ಕಾರ ಅತಿ ಮುಖ್ಯವಾದ ಆದ್ಯತೆಯಾದ ಉದ್ಯೋಗಗಳನ್ನು ಸೃಷ್ಟಿಸಬೇಕು. ಹೆಣ್ಣಿನ ರಕ್ಷಣೆಗೆ ಆದ್ಯತೆ ನೀಡಬೇಕು, ಚುನಾವಣಾ ಸಂಹಿತೆಯಲ್ಲಿ ಶೇ. 30ರಷ್ಟು ಮೀಸಲಾತಿ ತರುವುದು ಸೂಕ್ತವಾದೀತು. ರಾಷ್ಟ್ರ ನಾಯಕ ಗುರುವಿದ್ದಂತೆ. ಮೋದಿಯವರ ಬದುಕು ಸೊಗಸಾಗಿರಲಿ. ಭಾರತದ ಪ್ರಜಾ ಸಮೂಹಕ್ಕೆ ಗುರುವಾಗಿ ಭಾರತವನ್ನು ಮುನ್ನಡೆಸಲಿ.
ಆಚರಣೆ- ನಂಬಿಕೆ- ಪ್ರಾರ್ಥನೆ:ಕಾರ್ತಿಕ ಮಾಸದಲ್ಲಿ ಶೃಂಗೇರಿಯಲ್ಲಿ ಶ್ರೀ ಮಲಹಾನಿಕೇಶ್ವರ ದೇವರಿಗೆ ಇಡೀ ರಾಷ್ಟ್ರದ ಕಲ್ಯಾಣಕ್ಕಾಗಿಯೇ ಬಿಲ್ವ ಪತ್ರದಲ್ಲಿ ಪೂಜಿಸಲಾಗುತ್ತದೆ. ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರು, ಶ್ರೀ ವಿಧುಶೇಖರ ಭಾರತಿ ಗುರುಗಳು ಸಹಸ್ರನಾಮ ಅಷ್ಟೋತ್ತರ ಕ್ರಮಾರ್ಚನೆ ಮಾಡುತ್ತಾರೆ. ಒಂದು ವರ್ಷ ಮನುಷ್ಯನನ್ನು ಕಾಪಾಡಿದ್ದಕ್ಕೆ ದೀಪ ಬೆಳಗಲಾಗುತ್ತದೆ. ನಾವೆಲ್ಲರೂ 138 ಕೋಟಿ ಜನರ ಪರವಾಗಿ ಭಗವಂತನನ್ನು ಪ್ರಾರ್ಥಿಸೋಣ. ದ್ವೇಷವಿಲ್ಲದ ಭಾರತ, ರೋಗಮುಕ್ತ ಭಾರತ, ದಾರಿದ್ರ್ಯಮುಕ್ತ ಭಾರತಕ್ಕಾಗಿ ಪ್ರಾರ್ಥನೆ ಮಾಡೋಣ. ಜ್ಞಾನಜ್ಯೋತಿಯನ್ನು ಪ್ರಕಾಶ ಮಾಡಿಕೊಂಡು ಜಗತ್ತಿಗೆ ಜ್ಞಾನಜ್ಯೋತಿ ಕೊಡು ಎಂದು ಸಂದೇಶ ಕೊಡುವ ಹಬ್ಬವೇ ದೀಪಾವಳಿ. ಎಲ್ಲರಿಗೂ ಶುಭವಾಗಲಿ.
ಜಾಗತಿಕ ಮಟ್ಟದಲ್ಲಿ ಏನೆಲ್ಲ ಆಗಬಹುದು…:ಭಾರತಕ್ಕೆ ಚೀನಾ ಶತ್ರುವಲ್ಲ, ಪಾಕಿಸ್ತಾನಕ್ಕೆ ಹೆದರಬೇಕಿಲ್ಲ. ಚೀನಾದ ಜತೆ ಸಮರ ಮಾಡಬೇಕಾಗಿಲ್ಲ. ಅಲ್ಲಿ ನಾಯಕತ್ವದ ದೊಡ್ಡ ಅಲೆ ಎದ್ದು ದೇಶ ಛಿದ್ರ ಆಗುವುದು. ಅವರಿಗೆ ಅವರೇ ಶತ್ರುಗಳಾಗುತ್ತಾರೆ. ಇನ್ನು ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಜನಾಂಗೀಯ ಗಲಭೆ ಆಗುತ್ತದೆ. ರಷ್ಯಾದಲ್ಲೂ ನಾಯಕತ್ವದ ಸಮಸ್ಯೆ ಉಂಟಾಗಬಹುದು. ಈ ಎಲ್ಲ ಬೆಳವಣಿಗೆಗೂ ಗ್ರಹಗತಿಗೂ ಯಾವ ರೀತಿ ಸಂಬಂಧ ಇದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಬಯಸುವೆ. ಅಫ್ಘಾನಿಸ್ತಾನ ಅಮೆರಿಕಾದ ಹಿಡಿತದಲ್ಲಿತ್ತು. ಆದರೆ, ಅದು ಅಮೆರಿಕಾ ನೆಲವಾಗಿರಲಿಲ್ಲ. ಗ್ರಹಗತಿ ಬದಲಾವಣೆಯಿಂದ ಅಮೆರಿಕಾ ಆ ನೆಲದಿಂದ ಕದಲಬೇಕಾಯಿತು, ಪರಿಣಾಮ ಜಗತ್ತಿಗೆ ತಿಳಿದಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 3 =
Remember me
