ರಾಜಮಂಡ್ರಿ:ನಿಶ್ಚಿತಾರ್ಥ ನೆರವೇರಿ ಮದುವೆಗೆ ಇನ್ನು 15 ದಿನ ಬಾಕಿ ಇರುವಾಗಲೇ ಅಪಘಾತದಲ್ಲಿ ನವಜೋಡಿಯೊಂದು ದುರಂತ ಸಾವಿಗೀಡಾಗಿರುವ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ.
ಮೃತರನ್ನು ಮನೆಪಲ್ಲಿ ರಾಜ್​ಕುಮಾರ್​ (25) ಮತ್ತು ಮಲಿರೆಡ್ಡಿ ದುರ್ಗಾಭವಾನಿ (18) ಎಂದು ಗುರುತಿಸಲಾಗಿದೆ. ರಾಜ್​ಕುಮಾರ್​ ಕಾಕಿನಾಡ ಜಿಲ್ಲೆಯ ಜಗ್ಗಂಪೇಟ ಮಂಡಲದ ನಿವಾಸಿ. ದುರ್ಗಾಭವಾನಿ ಅದೇ ಜಿಲ್ಲೆಯ ಕಿರ್ಲಂಪುಡಿ ಮಂಡಲದ ನಿವಾಸಿ. ಇಬ್ಬರ ಮದುವೆ ಮುಂದಿನ ತಿಂಗಳು 10ಕ್ಕೆ ನಿಗದಿಯಾಗಿತ್ತು.
ಇದನ್ನೂ ಓದಿ:ಮಾದಕ ವಸ್ತು ಸೇವಿಸಲು ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಖತರ್ನಾಕ್ ಜೋಡಿ ಅಂದರ್!
ಮಂಗಳವಾರ ಇಬ್ಬರು ಪಶ್ಚಿಮ ಗೋದಾವರಿ ಜಿಲ್ಲೆಯ ಗೌರಿಪಟ್ಟಣದ ಮೇರಿ ಮಾತಾ ದೇವಸ್ಥಾನಕ್ಕೆ ಬೈಕ್​ನಲ್ಲಿ ತೆರಳುತ್ತಿದ್ದರು. ರಾಜಮಂಡ್ರಿಯ ಕೊವ್ವೂರು ಬಳಿ ಹಿಂದಿನಿಂದ ಬಂದ ಲಾರಿಯೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನವಜೋಡಿ ದುರಂತ ಸಾವಿಗೀಡಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ರಾಜಮಂಡ್ರಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
1997ರಲ್ಲಿ ಮೃತ ರಾಜ್​​ಕುಮಾರ್ ಅವರ ತಾಯಿ ವೇಣಮ್ಮ ನಿಧನರಾದರು. ಬಳಿಕ ತಂದೆ ವೆಂಕಟೇಶ್ವರಲು ಎರಡನೇ ಮದುವೆಯಾದರು. ರಾಜ್‌ಕುಮಾರ್‌ಗೆ ಒಬ್ಬ ಅಕ್ಕ ಇದ್ದಾರೆ. ಅವರಿಗೂ ಮದುವೆಯಾಗಿದೆ. ರಾಜ್‌ಕುಮಾರ್ ಇಟ್ಟಿಗೆ ಕೆಲಸ ಮಾಡುತ್ತಿದ್ದು, ತಂದೆಯೊಂದಿಗೆ ವಾಸಿಸುತ್ತಿದ್ದರು. ದುರ್ಗಾಭವಾನಿ ಅವರದ್ದು ಕೂಡ ಬಡ ಕುಟುಂಬ. ತಂದೆ ಕೂಲಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದಾರೆ.
ದುರ್ಗಾಭವಾನಿ ಅವರ ಪಾಲಕರು, ಸಂಬಂಧಿಕರ ಮನೆಗಳಿಗೆ ತೆರಳಿ ಮದುವೆ ಆಮಂತ್ರಣ ಪತ್ರಿಕೆ ವಿತರಿಸುತ್ತಿದ್ದರು. ಈ ಅವಘಡದ ವಿಚಾರ ತಿಳಿಯದ ಕಾರಣ ಮಂಗಳವಾರ ರಾತ್ರಿಯವರೆಗೂ ಆಮಂತ್ರಣ ಪತ್ರಗಳನ್ನು ಹಂಚಿದ್ದಾರೆ. ಬಳಿಕ ಇಬ್ಬರ ಸಾವಿನ ವಿಚಾರವನ್ನು ಕುಟುಂಬಸ್ಥರು ಪಾಲಕರಿಗೆ ಹೇಳಿದಾಗ ಒಂದು ಕ್ಷಣ ಅವರು ನಂಬಲು ಆಗಲಿಲ್ಲ. ಬಳಿಕ ಸತ್ಯ ತಿಳಿದಾಗ ಪಾಲಕರು ಆಘಾತಕ್ಕೀಡಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವುದಕ್ಕೆ ಈ ಫೋಟೋ ಸೂಕ್ತ ಉದಾಹರಣೆ!
ಎರಡು ಕುಟುಂಬದಲ್ಲಿ ದುಃಖದ ಕಾರ್ಮೋಡ ಆವರಿಸಿದೆ. ಇನ್ನೂ ಕೆಲವೇ ದಿನಗಳಲ್ಲಿ ವಿವಾಹವಾಗಬೇಕಿದ್ದ ಜೋಡಿಯೊಂದು ಪ್ರಾಣ ಕಳೆದುಕೊಂಡಿದ್ದು, ಸ್ಥಳೀಯರಲ್ಲಿಯೂ ತುಂಬಾ ಬೇಸರ ಮೂಡಿಸಿದೆ.(ಏಜೆನ್ಸೀಸ್​)
ನಾನು ಬಂದ ಮೇಲೆ ಡಿ.ಕೆ. ಶಿವಕುಮಾರ್​​ಗೆ ಸೋಲಿನ ಭಯ ಕಾಡುತ್ತಿದೆ: ಆರ್​. ಅಶೋಕ್​

ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವುದಕ್ಕೆ ಈ ಫೋಟೋ ಸೂಕ್ತ ಉದಾಹರಣೆ!

ಹೋಟೆಲ್​ ರೂಮಲ್ಲಿ ಸಿಕ್ಕಿಬಿದ್ದ ನಟಿ ಆರತಿಗೆ ಬಾಲಿವುಡ್ ಲಿಂಕ್​ ಹಿಂದಿರುವ ಕರಾಳತೆ ಬಯಲು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − seventeen =
Remember me
