ನವದೆಹಲಿ:ಮಾಜಿ ಪ್ರಧಾನ ಮಂತ್ರಿ ಎಚ್​.ಡಿ.ದೇವೇಗೌಡರ ಕುರಿತು ಲಘುವಾಗಿ ಮಾತನಾಡಿರುವ ಮಾಜಿ ಶಾಸಕ ಕೆ.ಎನ್. ರಾಜಣ್ಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಸಮಾಧಾನಗೊಂಡಿದ್ದು, ರಾಜಣ್ಣ ದೇವೇಗೌಡರ ಕ್ಷಮೆ ಕೋರುವಂತೆ ಸೂಚಿಸುವುದಾಗಿ ತಿಳಿಸಿದ್ದಾರೆ.
ದೇವೇಗೌಡರ ಕುರಿತು ರಾಜಣ್ಣ ಆಡಿರುವ ಮಾತನ್ನು ನಾನು ವೈಯಕ್ತಿಕವಾಗಿ ಮಾತ್ರವಲ್ಲದೆ ಪಕ್ಷದ ನಾಯಕನಾಗಿಯೂ ಖಂಡಿಸುತ್ತಿದ್ದು, ರಾಜಣ್ಣ ಹೇಳಿಕೆಯನ್ನು ಕಾಂಗ್ರೆಸ್ ಕೂಡ ಖಂಡಿಸುತ್ತದೆ ಎಂದು ಡಿಕೆಶಿ ಹೇಳಿದ್ದಾರೆ.
ದೇವೇಗೌಡರನ್ನು ನಾವು ತುಂಬ ಗೌರವಯುತವಾಗಿ ನೋಡುತ್ತಿದ್ದೇವೆ. ಅವರ ಆರೋಗ್ಯದ ಬಗ್ಗೆ ಆ ರೀತಿ ಮಾತನಾಡುವುದು ಸರಿಯಲ್ಲ. ನಾನು ರಾಜಣ್ಣಗೆ ದೂರವಾಣಿ ಕರೆ ಮಾಡಿ ಕ್ಷಮೆ ಯಾಚಿಸುವಂತೆ ಸೂಚನೆ ನೀಡುತ್ತೇನೆ ಎಂದು ಶಿವಕುಮಾರ್ ಹೇಳಿದ್ದಾರೆ.
ಅಲ್ಲದೆ ಡಿ.ಕೆ.ಶಿವಕುಮಾರ್ ಸಹೋದರ ಸಂಸದ ಡಿ.ಕೆ. ಸುರೇಶ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಎಲ್ಲರೂ ದೇವೇಗೌಡರ ಹಿರಿತನಕ್ಕೆ ತಲೆಬಾಗಬೇಕು. ರಾಜಣ್ಣ ಹೇಳಿಕೆ ವೈಯಕ್ತಿಕವಾಗಿದ್ದರೂ ಅದು ಅವರ ಘನತೆಗೆ ತಕ್ಕುದಲ್ಲ, ಅವರು ಕ್ಷಮೆ ಕೇಳದಿದ್ದರೆ ಸಮಾಜ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆಯ ದನಿಯಲ್ಲಿ ಹೇಳಿದ್ದಾರೆ.
ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಕೂಡ ಕೆ.ಎನ್.ರಾಜಣ್ಣರ ಹೇಳಿಕೆಯನ್ನು ಖಂಡಿಸಿದ್ದಾರೆ. ದೇವೇಗೌಡರು ಹಿರಿಯರು, ಅವರ ಮೇಲೆ ನಮಗೆ ಬಹಳ ಗೌರವ ಮತ್ತು ಪ್ರೀತಿ ಇದೆ. ಅವರ ಬಗ್ಗೆ ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಕೂಡಲೇ ರಾಜಣ್ಣ ದೇವೇಗೌಡರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
2 ಬಸ್​ಗಳ ಮಧ್ಯೆ ಭೀಕರ ಅಪಘಾತ: ಒಬ್ಬ ಚಾಲಕನಿಗೆ ಗಂಭೀರ ಗಾಯ, 50ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು..

ಕನ್ಹಯ್ಯ ಲಾಲ್​ ಭೀಕರ ಹತ್ಯೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಬಂಧನ..

‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

Sign in to your account
Please enter an answer in digits:four × two =
Remember me
