ಜೈಪುರ:ರಾಜಸ್ಥಾನದಲ್ಲಿ ಪೈಲಟ್​ ಮತ್ತು ಬೆಂಬಲಿಗರನ್ನು ಪಕ್ಷದ ಪ್ರಮುಖ ಹೊಣೆಗಾರಿಕೆಗಳಿಂದ ಬಿಡುಗಡೆಗೊಳಿಸುವ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದ ಬೆನ್ನಿಗೆ, ರಾಜ್ಯ ಬಿಜೆಪಿ ನಾಯಕರು ಮಂಗಳವಾರ ತುರ್ತುಸಭೆ ಸೇರಿದ್ದಾರೆ. ಬಿಜೆಪಿ ರಾಜ್ಯ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ಪಕ್ಷದ ನ್ಯಾಷನಲ್ ಜಾಯಿಂಟ್ ಜನರಲ್ ಸೆಕ್ರೆಟರಿ ವಿ.ಸತೀಶ್​, ರಾಜ್ಯ ಅಧ್ಯಕ್ಷ ಸತೀಶ್ ಪೂನಿಯಾ, ವಿಪಕ್ಷ ನಾಯಕ ಗುಲಾಬ್​ ಚಾಂದ್ ಕಟಾರಿಯಾ, ವಿಪಕ್ಷ ಉಪನಾಯಕ ರಾಜೇಂದ್ರ ರಾಥೋಡ್ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯೇ ಸಭೆಯ ಚರ್ಚಾ ಕಾರ್ಯಸೂಚಿಯ ಪ್ರಮುಖ ಅಂಶ. ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಈಗ ಭಿನ್ನಮತೀಯ ನಾಯಕ ಸಚಿನ್ ಪೈಲಟ್ ಮತ್ತು ಬೆಂಬಲಿಗ ಶಾಸಕರನ್ನು ಸಮಾಧಾನಗೊಳಿಸುವುದೇ ಸವಾಲು. 2018ರ ಡಿಸೆಂಬರ್ ತಿಂಗಳು ನಡೆದ ವಿಧಾನಸಭಾ ಚುನಾವಣೆಯ ನಂತರ ಪೈಲಟ್​ಗೆ ಮುಖ್ಯಮಂತ್ರಿ ಸ್ಥಾನ ನೀಡದೇ ಅಶೋಕ್ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದು ಭಾರಿ ಅಸಮಾಧಾನ ತಂದಿತ್ತು.
ಇದನ್ನೂ ಓದಿ:ರಾಜಸ್ಥಾನ ರಾಜಕೀಯ ನಾಟಕದಲ್ಲಿ ಕ್ಷಣಕ್ಕೊಂದು ತಿರುವು; ಪತನದ ಅಂಚಿನಲ್ಲಿ ಗೆಹ್ಲೋಟ್​ ಸರ್ಕಾರ
ಸದ್ಯ ಸಚಿನ್ ಪೈಲಟ್ ಬಣ 30 ಶಾಸಕರು ತಮ್ಮ ಜತೆಗಿದ್ದಾರೆ ಎಂದು ಪ್ರತಿಪಾದಿಸಿದೆ. ಮುಖ್ಯಮಂತ್ರಿ ಗೆಹ್ಲೋಟ್ ತಮ್ಮೊಂದಿಗೆ 109 ಶಾಸಕರಿದ್ದಾರೆ ಎಂದು ಹೇಳಿಕೊಂಡಿದ್ದಾರೆ. 200 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಲ 107 ಆಗಿತ್ತು. ಈಗ ಬಣ ಜಗಳ ಉಲ್ಬಣವಾದ ಪರಿಸ್ಥಿತಿಯಲ್ಲಿ ಚಿತ್ರಣ ಬದಲಾಗಬಹುದು. (ಏಜೆನ್ಸೀಸ್)
ರಾಜಸ್ಥಾನ ರಾಜಕೀಯ: ವಿಶ್ವಾಸಮತ ಯಾಚನೆಗೆ ಆಗ್ರಹಿಸಿದ ಪೈಲಟ್​ ಬೆಂಬಲಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
