ರಾಜಸ್ಥಾನ:ಕರ್ನಾಟಕದಲ್ಲಿ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ 200 ಯೂನಿಟ್ ವಿದ್ಯುತ್ ಉಚಿತ ಎಂದು ಗ್ಯಾರೆಂಟಿ ಕಾರ್ಡ್ ಹಂಚಿದ್ದು ಇದೀಗ ರಾಜಸ್ಥಾನ ಸರ್ಕಾರ ಕೂಡ 100 ಯೂನಿಟ್​ವರೆಗೆ ವಿದ್ಯುತ್​ಅನ್ನು ಉಚಿತವಾಗಿ ನೀಡಲು ಮುಂದಾಗಿದೆ. ಈ ಬಗ್ಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಲವ್​ನಲ್ಲಿ ಜಿಹಾದ್​ಗೆ ಜಾಗವೇ ಇಲ್ಲ – ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್ ‘ಪ್ರೇಮ’ ಪಾಠ !
ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅಶೋಕ್ ಗೆಹ್ಲೋಟ್, “ಹಣದುಬ್ಬರ ಪರಿಹಾರ ಶಿಬಿರಗಳನ್ನು ವೀಕ್ಷಿಸಿ ಸಾರ್ವಜನಿಕರೊಂದಿಗೆ ಮಾತನಾಡಿದಾಗ, ವಿದ್ಯುತ್ ಬಿಲ್ ನಲ್ಲಿ ಸ್ಲ್ಯಾಬ್​ವಾರು ವಿನಾಯಿತಿಯಲ್ಲಿ ಸ್ವಲ್ಪ ಬದಲಾವಣೆ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.
आज 10.45 PM पर प्रदेशवासियों के लिए एक बड़ी राहत की घोषणा करूंगा।
— Ashok Gehlot (@ashokgehlot51)May 31, 2023

ಮೇ ತಿಂಗಳಿನಲ್ಲಿ ವಿದ್ಯುತ್ ಬಿಲ್‌ಗಳಲ್ಲಿ ಇಂಧನ ಹೆಚ್ಚುವರಿ ಶುಲ್ಕದ ಬಗ್ಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದ್ದು, ಅದರ ಆಧಾರದ ಮೇಲೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಹಿನ್ನೆಲೆಯನ್ನು ನೀಡಿದ್ದಾರೆ.
ಇದನ್ನೂ ಓದಿ:ಸಿಎಂ ಅಶೋಕ್​ ಗೆಹ್ಲೋಟ್​ ಎದುರು ಮೂರು ಬೇಡಿಕೆ ಇಟ್ಟ ಸಚಿನ್​ ಪೈಲಟ್​; ಷರತ್ತಿಗೆ ಒಪ್ಪಿದರೆ ವಾಪಸ್​
ನಂತರ ನಿರ್ಧಾರವನ್ನು ಘೋಷಿಸಿರುವ ರಾಜಸ್ಥಾನ ಸಿಎಂ, “ತಿಂಗಳಿಗೆ 100 ಯೂನಿಟ್​ವರೆಗೆ ವಿದ್ಯುತ್ ಸೇವಿಸುವವರ ವಿದ್ಯುತ್ ಬಿಲ್ ಶೂನ್ಯವಾಗಿರುತ್ತದೆ. ಅವರು ಮುಂಗಡವಾಗಿ ಯಾವುದೇ ಬಿಲ್ ಪಾವತಿಸಬೇಕಾಗಿಲ್ಲ. ತಿಂಗಳಿಗೆ 100 ಯೂನಿಟ್‌ಗಿಂತ ಹೆಚ್ಚು ಬಳಕೆ ಮಾಡುವ ಕುಟುಂಬಗಳಿಗೆ ಮೊದಲ 100 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುವುದು, ಅಂದರೆ, ಎಷ್ಟೇ ಬಿಲ್ ಬಂದರೂ ಮೊದಲ 100 ಯೂನಿಟ್‌ಗೆ ಯಾವುದೇ ವಿದ್ಯುತ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ” ಎಂದು ಬರೆದಿದ್ದಾರೆ.
महंगाई राहत शिविरों के अवलोकन व जनता से बात करने पर फीडबैक आया कि बिजली बिलों में मिलने वाली स्लैबवार छूट में थोड़ा बदलाव किया जाए.
– मई महीने में बिजली बिलों में आए फ्यूल सरचार्ज को लेकर भी जनता से फीडबैक मिला जिसके आधार पर बड़ा फैसला किया है.–– 100 यूनिट प्रतिमाह तक बिजली…pic.twitter.com/z27tJRuyaf
— Ashok Gehlot (@ashokgehlot51)May 31, 2023

ಜನರಿಗೆ ಇನ್ನಷ್ಟು ಖುಷಿ ನೀಡುವ ಸುದ್ದಿ ನೀಡಿದ ಅಶೋಕ್ ಗೆಹ್ಲೋಟ್ “ವಿಶೇಷವಾಗಿ ಮಧ್ಯಮ ವರ್ಗದ ಜನರು, ತಿಂಗಳಿಗೆ 200 ಯೂನಿಟ್‌ವರೆಗೆ ವಿದ್ಯುತ್ ಬಳಸುವ ಗ್ರಾಹಕರಿಗೆ, ಮೊದಲ 100 ಯೂನಿಟ್ ವಿದ್ಯುತ್ ಉಚಿತ, ಜೊತೆಗೆ 200 ಯೂನಿಟ್‌ಗಳವರೆಗೆ ಸ್ಥಿರ ಶುಲ್ಕಗಳು, ಇಂಧನ ಹೆಚ್ಚುವರಿ ಶುಲ್ಕ ಮತ್ತು ಇತರ ಎಲ್ಲಾ ಶುಲ್ಕಗಳನ್ನು ಮನ್ನಾ ಮಾಡಲಾಗುತ್ತದೆ. ಅದನ್ನು ರಾಜ್ಯ ಸರ್ಕಾರದಿಂದ ಪಾವತಿಸಲಾಗಿದೆ” ಎಂದು ಘೋಷಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + eight =
Remember me
