ಜೈಪುರ:ಬಂಡಾಯ ಕಾಂಗ್ರೆಸ್​ ಶಾಸಕರು ಪಕ್ಷಕ್ಕೆ ಮರಳಿದ ಹೊರತಾಗಿಯೂ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಲು ಸಿಎಂ ಅಶೋಕ್​ ಗೆಹ್ಲೋಟ್​ ಮುಂದಾಗಿದ್ದಾರೆ.
ಈಗ ವಿಶ್ವಾಸ ಮತ ಯಾಚನೆ ನಡೆದಲ್ಲಿ ಇನ್ನಾರು ತಿಂಗಳವರೆಗೆ ಮತ್ತೊಮ್ಮೆ ಯಾರೂ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಿಲ್ಲ. ಇದರಿಂದಾಗಿ ಕೊಂಚ ನೆಮ್ಮದಿ ದೊರೆಯಲಿದೆ. ಇದಲ್ಲದೇ ಪಕ್ಷದೊಳಗಿನ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಬಹುದು ಎಂಬುದು ಸಿಎಂ ಉದ್ದೇಶ ಎಂದು ಹೇಳಲಾಗಿದೆ.
ಇದನ್ನೂ ಓದಿ;ಹುದ್ದೆ ಬಯಸಿಲ್ಲ, ರಾಜಕೀಯ ಕಲಹಕ್ಕೂ ಅವಕಾಶವಿಲ್ಲ; ತಿಂಗಳ ಬಳಿಕ ಜೈಪುರ್​ಗೆ ಮರಳಿದ ಸಚಿನ್​ ಪೈಲಟ್​
ಆಗಸ್ಟ್​ 14ರಂದು ವಿಧಾನಸಭೆ ಕಲಾಪ ಆರಂಭವಾದ ಬಳಿಕವಷ್ಟೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಅಲ್ಲದೇ, ಇನ್ನಷ್ಟು ಸಮಯದವರೆಗೆ ಶಾಸಕರನ್ನು ರೆಸಾರ್ಟ್​ನಲ್ಲಿ ಹಿಡಿದಿಡಲು ಸಾಧ್ಯವಾಗದು ಎಂಬ ಅಂಶವೂ ಕೂಡ ಇದಕ್ಕೆ ಕಾರಣವೆನ್ನಲಾಗಿದೆ.
ಕಾಂಗ್ರೆಸ್​ ಕೇಂದ್ರ ಪರಿವೀಕ್ಷಕರಾದ ರಣ್​ದೀಪ್​ ಸಿಂಗ್ ಸುರ್ಜೇವಾಲಾ ಹಾಗೂ ಅಜಯ್​ ಮಾಕನ್​ ಕಳೆದ ಒಂದು ತಿಂಗಳಿನಿಂದ ಜೈಪುರ್​ನಲ್ಲಿಯೇ ಬೀಡುಬಿಟ್ಟಿದ್ದಾರೆ. ಎಲ್ಲ ಬೆಳವಣಿಗೆಗಳ ಮೇಲೂ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ;ರಾಜಸ್ಥಾನದಲ್ಲಿ ತೇಪೆ ಹಚ್ಚಿದ್ರು, ಮಣಿಪುರದಲ್ಲಿ ಹೋಳಾಯ್ತು; 6 ಕಾಂಗ್ರೆಸ್​ ಶಾಸಕರ ರಾಜೀನಾಮೆ, ಪಕ್ಷಕ್ಕೂ ಗುಡ್​ಬೈ
ಸಚಿನ್​ ಪೈಲಟ್​ ಸೇರಿ ಬಂಡಾಯವೆದ್ದಿದ್ದ 19 ಶಾಸಕರು ಪಕ್ಷಕ್ಕೆ ಮರಳಿರುವುದರಿಂದ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಪಕ್ಷೇತರರು ಹಾಗೂ ಇತರ ಪಕ್ಷಗಳ ಸಹಕಾರದೊಂದಿಗೆ ಕಾಂಗ್ರೆಸ್​ ಒಟ್ಟು 125ಕ್ಕೂ ಅಧಿಕ ಶಾಸಕರ ಬೆಂಬಲ ಹೊಂದಿದಂತಾಗಲಿದೆ.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಮೋದಿ ಸಜ್ಜು; ಭೌತಿಕ ತರಗತಿಗಳೇ ಇರಲ್ಲ, ಆನ್​ಲೈನ್​ ಕ್ಲಾಸ್​ಗಳೇ ಎಲ್ಲ….!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + seven =
Remember me
