ಜೈಪುರ:ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಅವರು ತಮಗೆ 104 ಶಾಸಕರ ಬೆಂಬಲವಿದೆ ಎಂದು ಹೇಳಿದ್ದಾರೆ. ಅಲ್ಲದೆ, ಆ 104 ಜನರ ಹೆಸರಿನ ಪಟ್ಟಿಯಲ್ಲಿ ರಾಜ್ಯಪಾಲ ಕಲ್​ರಾಜ್​ ಮಿಶ್ರಾ ಅವರಿಗೆ ನೀಡಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಜು.16ರವರೆಗೆ ಸಮಯ ಕೇಳಿದ್ದಾರೆ.
ಅದಕ್ಕೂ ಮುಖ್ಯವಾಗಿ ಇಂದು ಸಂಜೆ 7.30ಕ್ಕೆ ಅಶೋಕ್​ ಗೆಹ್ಲೋಟ್​ ಅವರು ತಮ್ಮ ನಿವಾಸದಲ್ಲಿ ಸಚಿವ ಸಂಪುಟ ಸಭೆ ಕರೆದಿದ್ದಾರೆ.ರಾಜ್ಯದ ಡಿಸಿಎಂ ಆಗಿದ್ದ ಸಚಿನ್​ ಪೈಲಟ್​ರನ್ನು ಹುದ್ದೆಯಿಂದ ಉಚ್ಚಾಟನೆ ಮಾಡಲಾಗಿದೆ. ಅಲ್ಲದೆ, ಇಬ್ಬರು ಸಚಿವರನ್ನೂ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅದರ ಬೆನ್ನಲ್ಲೇ ಇಂದೇ ಸಂಜೆ ಮುಖ್ಯಮಂತ್ರಿ ತಮ್ಮ ನಿವಾಸದಲ್ಲಿ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಸಚಿವ ಸ್ಥಾನಗಳನ್ನು ಪುನಃರಚನೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿವೆ. ಸಚಿವ ಸಂಪುಟ ಸಭೆ ಮುಗಿದ ಬಳಿಕ 8 ಗಂಟೆಗೆ ಇನ್ನೊಂದು ಸಭೆ ನಡೆಯಲಿದೆ ಎನ್ನಲಾಗಿದೆ.ಇದನ್ನೂ ಓದಿ:ಏರಿಯಾ ಸ್ಯಾನಿಟೈಸ್ ಮಾಡಿಸಿದ್ದಕ್ಕೆ ಬಿಜೆಪಿ ಮುಖಂಡನಿಗೆ 41 ಸಲ ಇರಿತ!
ಸದ್ಯ ರಾಜಸ್ಥಾನ ಪಿಸಿಸಿ ಸ್ಥಾನಕ್ಕೆ ಗೋವಿಂದ್ ಸಿಂಗ್​ ದೋತಸ್ರಾ ಅವರನ್ನು ಕಾಂಗ್ರೆಸ್​ ನೇಮಕ ಮಾಡಿದೆ. ಡಿಸಿಎಂ ಸ್ಥಾನ ಬಾಕಿ ಇದೆ. (ಏಜೆನ್ಸೀಸ್​)
ಇಂದು ರಾತ್ರಿಯಿಂದಲೇ ಬೆಂಗಳೂರು ಸ್ತಬ್ಧ: ಲಾಕ್ ಡೌನ್ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 13 =
Remember me
