ಅಲ್ವಾರ್​:ಹುಟ್ಟುಹಬ್ಬದ ಮೋಜಿನಲ್ಲಿದ್ದ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಹಾವನ್ನು ಕೈಯಲ್ಲಿ ಹಿಡಿದು ಕಚ್ಚಿಸಿಕೊಂಡಿರುವ ಘಟನೆ ರಾಜಸ್ಥಾನದ ಅಲ್ವಾರ್​ ಬಳಿ ನಡೆದಿದೆ.
ಜಿಲ್ಲೆಯ ಬನ್ಸೂರ್ ಪಟ್ಟಣಕ್ಕೆ ಸೇರಿದ ದೀಪಕ್ ಮೇಘವಾಲ್ ಎಂಬ ಯುವಕ ತನ್ನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಡಿಜೆಯಲ್ಲಿ ನಾಗಿನ್ ನೃತ್ಯವನ್ನು ಪ್ರದರ್ಶಿಸುತ್ತಿದ್ದನು. ಈ ವೇಳೆ ನಿಜವಾದ ನಾಗರಹಾವು ಅಲ್ಲಿಗೆ ಬಂದಿದ್ದು, ಕೈಯಲ್ಲಿ ಹಾವನ್ನು ಹಿಡಿದುಕೊಂಡು ನೃತ್ಯ ಮಾಡಲು ಆತ ಶುರು ಮಾಡಿದ್ದಾನೆ.
ಇದನ್ನೂ ಓದಿ:ಹುಡುಗಿ ಜತೆಗೆ ಪ್ರೀತಿ, ಪ್ರಣಯ: ಕೋಪಗೊಂಡ ಮನೆಯವರು ಯುವಕನಿಗೆ ಮಾಡಿದ್ದಿಷ್ಟು..ಆದರೆ ಯುವಕನ ಈ ಕೃತ್ಯದಿಂದ ಕೋಪಗೊಂಡ ನಾಗರಾಜ ಕೋಪದಿಂದ ಯುವಕನಿಗೆ ಕಚ್ಚಿದ್ದಾನೆ. ಆತ ಅದನ್ನು ಕೈಯಲ್ಲಿ ಹಿಡಿದು ಡ್ಯಾನ್ಸ್ ಮಾಡಲು ಆರಂಭಿಸಿದಾಗ ಹಾವು ಕಚ್ಚಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಜನರು ದೀಪಕ್ ನನ್ನು ಬೈಕ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಅಲ್ಲದೇ, ಆಸ್ಪತ್ರೆಗೆ ಹೋಗಬೇಕಾದರೂ ಸಹ ಆತನ ಕೈಯಲ್ಲಿ ಹಾವನ್ನು ಸಹ ನೋಡಬಹುದಾಗಿದೆ.
ಈ ಕುರಿತು ಮಾತನಾಡಿರುವ ಆತನ ಸಂಬಂಧಿಕರು, ಹುಟ್ಟುಹಬ್ಬ ಆಚರಿಸಿಕೊಂಡಿದ್ದ ದೀಪಕ್ ಕುಡಿದ ಅಮಲಿನಲ್ಲಿ ಹಾವನ್ನು ಹಿಡಿದಿದ್ದಾನೆ. ಅವರು ಬಹಳಷ್ಟು ನಿರಾಕರಿಸಿದರೂ ಆತ ಒಪ್ಪಲಿಲ್ಲ. ರಾತ್ರಿಯೇ ಆತನನ್ನು ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + ten =
Remember me
