ರಾಜಸ್ಥಾನ:ಜೈಪುರ ಪೊಲೀಸ್​ ಅಧಿಕಾರಿಯೊಬ್ಬರು ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಮೂತ್ರ ವಿಸರ್ಜಿಸಿ, ಶಾಸಕನ ಶೂ ನೆಕ್ಕುವಂತೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ಶಾಸಕ ಗೋಪಾಲ್ ಮೀನಾ ಮತ್ತು ಹಿರಿಯ ಪೊಲೀಸ್ ಅಧಿಕಾರಿ ವಿರುದ್ಧ ಇದೀಗ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಚೀನಾದಲ್ಲಿ ಕೈದಿಗಳನ್ನು ಹೇಗೆ ನೋಡಿಕೊಳ್ಳುತ್ತಾರೆ ಗೊತ್ತಾ? ಬಂಧಿತ ಪತ್ರಕರ್ತೆ ಬರೆದ ಪತ್ರದಿಂದ ಬಯಲಾಯ್ತು ಶಾಕಿಂಗ್ ಅಂಶಗಳು!
ಈ ಘಟನೆ ಜೂನ್ 30 ರಂದು ಸಂಭವಿಸಿದ್ದು, ಸಂತ್ರಸ್ತ ಭಯದಿಂದ ಘಟನೆಯ ಬಗ್ಗೆ ಎಲ್ಲಿಯೂ ಹೇಳದೆ ಇದ್ದರು ಎಂದು ತಿಳಿಸಿದ್ದು, ಇದೀಗ ಪೊಲೀಸ್​ ಠಾಣೆಯಲ್ಲಿ ಜುಲೈ 27 ರಂದು ದೂರು ದಾಖಲಿಸಿದ್ದಾರೆ. ದೂರಿನಲ್ಲಿ, “ಜೂನ್ 30 ರಂದು ತಾನು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ, ಪೊಲೀಸ್ ಅಧಿಕಾರಿಗಳು ಬಂದು ನನಗೆ ಥಳಿಸಿ, ಕೋಣೆಗೆ ಕರೆದೊಯ್ದರು. ಉಪ ಪೊಲೀಸ್ ವರಿಷ್ಠಾಧಿಕಾರಿ (DSP) ಶಿವಕುಮಾರ್ ಭಾರದ್ವಾಜ್ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಮೂತ್ರ ವಿಸರ್ಜನೆ ಮಾಡಿದರು” ಎಂದು ತಿಳಿಸಿದ್ದಾರೆ.
“ಪೊಲೀಸ್ ಅಧಿಕಾರಿ ಕಾಂಗ್ರೆಸ್ ಶಾಸಕ ಗೋಪಾಲ್ ಮೀನಾ ಅವರ ಹೆಸರನ್ನು ಬಳಸಿ ನನಗೆ ಬೆದರಿಕೆ ಹಾಕಿದರು. ಶಾಸಕ ತನ್ನ ಶೂಗಳನ್ನು ನೆಕ್ಕುವಂತೆ ಒತ್ತಾಯಿಸಿದರು ಎಂದು ದಲಿತ ವ್ಯಕ್ತಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಶಾಸಕರು ಮತ್ತು ಪೊಲೀಸ್​ ಆಫೀಸರ್​ ತಮ್ಮ ಮೊಬೈಲ್ ಫೋನ್ ಕಸಿದುಕೊಂಡರು ಮತ್ತು ಗಂಭೀರ ಪರಿಣಾಮ ಬೀರುವುದಾಗಿ ಬೆದರಿಕೆ ಹಾಕಿದರು” ಎಂದು ವ್ಯಕ್ತಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಶೇ.78ರಷ್ಟು ಪೋಷಕರು ತಮ್ಮ ಹೆಣ್ಣುಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಪಡೆಯಬೇಕೆಂದು ಬಯಸುತ್ತಾರೆ: ಶಿಕ್ಷಣ ಸಚಿವಾಲಯದಿಂದ ವರದಿ ಬಿಡುಗಡೆ
“ಪೊಲೀಸರು ಆರಂಭದಲ್ಲಿ ನನ್ನ ದೂರನ್ನು ದಾಖಲಿಸಲು ನಿರಾಕರಿಸಿದರು. ನಂತರ ನಾನು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದೆ. ಆದರೆ ಆ ನಂತರವೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ” ಎಂದು ಸಂತ್ರಸ್ತ ಹೇಳಿದ್ದಾರೆ. ಈ ವಿಚಾರವಾಗಿ ನ್ಯಾಯಾಲಯದ ಮೊರೆ ಹೋದಾಗ, ಕೋರ್ಟ್​ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದೆ. ಎಫ್‌ಐಆರ್‌ನಲ್ಲಿ ಶಾಸಕ ಗೋಪಾಲ್ ಮೀನಾ ಮತ್ತು ಡಿಎಸ್‌ಪಿ ಶಿವಕುಮಾರ್ ಭಾರದ್ವಾಜ್ ಅವರ ಹೆಸರನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ದೂರು ದಾಖಲಾದಾಗಿನಿಂದ ತನಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ. ಈ ಪ್ರಕರಣವನ್ನು ಈಗ ಅಪರಾಧ ವಿಭಾಗ, ಅಪರಾಧ ತನಿಖಾ ಇಲಾಖೆ (ಸಿಬಿ-ಸಿಐಡಿ) ತನಿಖೆ ನಡೆಸುತ್ತಿದೆ,(ಏಜೆನ್ಸೀಸ್).
VIDEO | ನೋಡ ನೋಡುತ್ತಿದ್ದಂತೆ ರಸ್ತೆಯ ಮೇಲೆ ಕುಸಿದ ಗುಡ್ಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
