ಭರತ್​ಪುರ್:ಬಾಯ್​ಫ್ರೆಂಡ್​ ಜತೆ ಮಾತನಾಡುತ್ತಿದ್ದ ಯುವತಿಯ ಮೇಲೆ ಕೆಲವು ಗೂಂಡಾಗಳು ಹಲ್ಲೆ ಮಾಡಿರುವ ಆತಂಕಕಾರಿ ಘಟನೆ ರಾಜಸ್ಥಾನದ ಭರತ್​ಪುರ್​ ಜಿಲ್ಲೆಯಲ್ಲಿ ಭಾನುವಾರ (ಮಾರ್ಚ್​ 14) ಬೆಳಕಿಗೆ ಬಂದಿದೆ.
ಇದಕ್ಕೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆದಾಗ್ಯು ಆರೋಪಿಗಳ ಮೇಲೆ ಪೊಲೀಸರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಘಟನೆ ಯಾವಾಗ ನಡೆದಿದೆ ಎಂಬುದರ ಖಚಿತ ಮಾಹಿತಿ ಇಲ್ಲ.
ಇದನ್ನೂ ಓದಿರಿ:ಬಿಹಾರದಲ್ಲಿ ಹೆಂಡತಿ, ದೆಹಲಿಯಲ್ಲಿ ಗರ್ಲ್​ಫ್ರೆಂಡ್​! 20ರ ಯುವತಿಯೊಂದಿಗೆ 40ರ ಡ್ರೈವರ್​ ರಿಲೇಷನ್​ಶಿಪ್​!
ಬಾಯ್​ಫ್ರೆಂಡ್​ ಜತೆ ಮಾತನಾಡುತ್ತಾ ನಿಂತಿದ್ದ ಯುವತಿಯನ್ನು ಎಳೆದುಕೊಂಡ ಸ್ಥಳೀಯ ಗೂಂಡಾಗಳು ಆಕೆಯ ದುಪ್ಪಟ್ಟವನ್ನು ಕಿತ್ತೆಸೆದು ಅಮಾನವೀಯವಾಗಿ ವರ್ತಿಸಿದ್ದಾರೆ. ಯುವತಿ ನೆರವಿಗಾಗಿ ಕೂಗಿಕೊಂಡರು ಯಾರೊಬ್ಬರು ಸಹ ಸಹಾಯಕ್ಕೆ ಮುಂದೆ ಬರಲಿಲ್ಲ. ಹಲ್ಲೆ ನಡೆಸುವ ಮುನ್ನ ಯುವತಿ ಮತ್ತು ಬಾಯ್​ಫ್ರೆಂಡ್​ ಏಕಾಂತದ ಸ್ಥಳದಲ್ಲಿ ಕುಳಿತಿದ್ದರು. ಹಲ್ಲೆ ನಡೆಸುತ್ತಿದ್ದಂತೆ ಬಾಯ್​ಫ್ರೆಂಡ್​ ಆಕೆಯನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಬಗ್ಗೆ ಮಾತನಾಡಿರುವ ಪೊಲೀಸರು ಘಟನೆಯ ತನಿಖೆ ನಡೆಸಿ, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ. ಘಟನೆ ನಡೆದ ಏರಿಯಾದ ಪೊಲೀಸ್​ ಮುಖ್ಯಸ್ಥರು ಸಹ ಪ್ರಕರಣವನ್ನು ಆದಷ್ಟು ಬೇಗ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ.(ಏಜೆನ್ಸೀಸ್​)
ಪ್ರೇಕ್ಷಾ ಆತ್ಮಹತ್ಯೆ ಕೇಸ್​: ಲವ್ವರ್​ ಜತೆಗಿನ ಸಂಭಾಷಣೆ ಆಡಿಯೋದಲ್ಲಿದೆ ಸ್ಫೋಟಕ ಮಾಹಿತಿ!

ಪ್ರಿಯಕರನೊಂದಿಗೆ ಓಡಿ ಬಂದಿದ್ದ ಯುವತಿಯ ದುರಂತ ಅಂತ್ಯ: ನಿಗೂಢ ಸ್ಥಿತಿಯಲ್ಲಿ ಮೃತದೇಹ ಪತ್ತೆ!

ಬಾಯ್​ಫ್ರೆಂಡ್​ ಮುಖವಾಡ ಕಳಚಿಬಿದ್ದ ಬೆನ್ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವತಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 12 =
Remember me
