ಜೈಪುರ:ಆ ಯುವಕ-ಯುವತಿ ಪರಸ್ಪರ ಪ್ರೀತಿಸಿದ್ರು. ಅವರಿಬ್ಬರ ಮದುವೆಗೆ ಯುವತಿಯ ಕಡೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ರು. ಇದರಿಂದಾಗಿ, ಪೋಷಕರ ವಿರೋಧ ಲೆಕ್ಕಿಸದೆ ಮನೆಯಿಂದ ಓಡಿಹೋಗಿ ಪ್ರೇಮಿಗಳು ಮದುವೆ ಮಾಡಿಕೊಂಡಿದ್ದಾರೆ. ಆದ್ರೆ ಈಗ ಪ್ರಾಣಭಯದಿಂದ ಎಸ್ಪಿ ಕಚೇರಿಗೆ ಓಡಿ ಬಂದ ಪ್ರಸಂಗ ನಡೆದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ!!
ಇದನ್ನೂ ಓದಿ:ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಕೇಸ್: ಸೂರಜ್ ರೇವಣ್ಣ ಜಾಮೀನು ಅರ್ಜಿ ವಜಾ
ರಾಜಸ್ಥಾನದ ಜಲೋರ್‌ನಲ್ಲಿ ನವವಿವಾಹಿತ ದಂಪತಿ ತಮ್ಮ ಮನೆಯವರಿಂದ ಜೀವವನ್ನು ಉಳಿಸಲು ಎಸ್‍ಪಿ ಕಚೇರಿಗೆ ಓಡಿ ಬಂದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಯುವಕನೋರ್ನ ಯುವತಿಯ ಕೈ ಹಿಡಿದುಕೊಂಡು ಓಡುತ್ತಿದ್ದು, ಆಕೆಯ ಹಿಂದೆ ಇಬ್ಬರು ವ್ಯಕ್ತಿಗಳು ಅಟ್ಟಿಸಿಕೊಂಡು ಹೋಗುತ್ತಿರುವುದು ಕಾಣಬಹುದು. ಹಿಂದೆ ಬರುತ್ತಿದ್ದ ವ್ಯಕ್ತಿಯೋರ್ವ ಈ ದೃಶ್ಯಗಳನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.
Filmy style marriage In Jalore, uttar pradesh, a loving couple got married and ran away to the SP office.#Uttarprdesh#Meerut#jalore#Lovestorypic.twitter.com/gFioeCmdm1
— Priyathosh Agnihamsa (@priyathosh6447)July 8, 2024

ವರದಿಗಳ ಪ್ರಕಾರ, ಹುಡುಗ ಮತ್ತು ಹುಡುಗಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರು ಮದುವೆಯಾಗಲು ಬಯಸಿದ್ದರೂ ಕೂಡ ಅವರ ಕುಟುಂಬ ಸದಸ್ಯರು ಅದನ್ನು ವಿರೋಧಿಸಿದ್ದರು. ಇಬ್ಬರ ಕುಟುಂಬಗಳು ಅವರ ಇಚ್ಛೆಗೆ ವಿರುದ್ಧವಾಗಿ ಬೇರೆಯವರೊಂದಿಗೆ ನಿಶ್ಚಿತಾರ್ಥವನ್ನು ಏರ್ಪಡಿಸಿದ್ದರು. ಇದರಿಂದ ಬೇಸರಗೊಂಡ ಹುಡುಗ ಮತ್ತು ಹುಡುಗಿ ಮನೆಯಿಂದ ಓಡಿಹೋಗಿ ಮದುವೆಯಾಗಿದ್ದಾರೆ.ಪ್ರೇಮ ವಿವಾಹವಾದ ಬಳಿಕ ಅವರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದರು. ಇದನ್ನು ತಿಳಿದ ಯುವತಿಯ ಪೋಷಕರು ಕೂಡಲೇ ಎಸ್ಪಿ ಕಚೇರಿ ಆವರಣಕ್ಕೆ ಬಂದಿದ್ದಾರೆ. ಹುಡುಗ ಮತ್ತು ಹುಡುಗಿಯನ್ನು ಸುತ್ತುವರೆದ ಅವರು ಹುಡುಗಿಯನ್ನು ಬಲವಂತವಾಗಿ ತಮ್ಮೊಂದಿಗೆ ಕರೆದೊಯ್ಯಲು ಪ್ರಯತ್ನಿಸಿದರು. ಇದನ್ನು ಕಂಡ ಪೊಲೀಸರು ಕುಟುಂಬಸ್ಥರನ್ನು ತಡೆಯಲು ಯತ್ನಿಸಿದರು. ಮನೆಯವರನ್ನು ತಡೆಯುವ ಯತ್ನದ ನಡುವೆ, ಹುಡುಗ ಮತ್ತು ಹುಡುಗಿ ಅವಕಾಶ ಸಿಕ್ಕಿತು ಮತ್ತು ಎಸ್ಪಿ ಕಚೇರಿಯತ್ತ ಓಡಿದರು.
परिजनों द्वारा पुलिस थाना कोतवाली जालौर पर प्रस्तुत रिपोर्ट पर वयस्क बालिका की गुमशुदगी दर्ज कर तलाश की जा रही थी। लड़का व लड़की आज पुलिस अधीक्षक कार्यालय में उपस्थित हुए। लड़की स्वेच्छा से अपने माता-पिता के साथ घर गई।
— Jalore Police (@JalorePolice)July 8, 2024

ಇದನ್ನು ತಕ್ಷಣ ಅರಿತುಕೊಂಡ ಕುಟುಂಬಸ್ಥರು ಅವರನ್ನು ಹಿಂಬಾಲಿಸಿ ತಡೆಯಲು ಯತ್ನಿಸಿದ್ದಾರೆ. ಆದರೆ, ಓಡುತ್ತಲೇ ಎಸ್ಪಿ ಕಚೇರಿ ತಲುಪಿದ ನವ ವಿವಾಹಿತರು ಒಟ್ಟಿಗೆ ಇರಲು ಬಯಸಿದ್ದಾರೆ. ಮದುವೆಗೆ ತೀವ್ರ ವಿರೋಧವ್ಯಕ್ತವಾಗಿದ್ದು, ಈಗ ಜೋಡಿ ಎಸ್ಪಿ ಸೇರಿದಂತೆ ಪೊಲೀಸರ ಸಮ್ಮುಖದಲ್ಲಿ ರಕ್ಷಣೆಗೆ ಮನವಿ ಮಾಡಿದ್ದಾರೆ.
ಇದೀಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಬಗ್ಗೆ ವಿಚಾರಣೆ ನಡೆಸಿದ ಬಳಿಕ ಹುಡುಗಿ ಸ್ವಯಂಪ್ರೇರಣೆಯಿಂದ ತನ್ನ ಹೆತ್ತವರೊಂದಿಗೆ ಮನೆಗೆ ಹೋದಳು ಎಂಬುದಾಗಿ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಜಲೋರ್ ಪೊಲೀಸರು ದೃಢಪಡಿಸಿದ್ದಾರೆ. ಪ್ರೇಮಿ ಈಗ ಆ ಹುಡುಗಿಯನ್ನು ಪಡೆಯುವ ಪ್ರಯತ್ನ ಮುಂದುವರಿಸಿದ್ದಾನೆ ಎಂದು ತಿಳಿದುಬಂದಿದೆ.
ಮುಡಾ ಹಗರಣ: ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 5 =
Remember me
