ಜೈಪುರ: ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಅವರ ಪುತ್ರ ದುಶ್ಯನ್​ ಸಿಂಗ್​ ಕ್ವಾರಂಟೈನ್​ನಲ್ಲಿ ಉಳಿಯುವುದಾಗಿ ತಿಳಿಸಿದ್ದಾರೆ.
ಗಾಯಕಿ ಕನಿಕಾ ಕಪೂರ್ ಅವರು ನೀಡಿದ ಪಾರ್ಟಿಯಲ್ಲಿ ವಸುಂಧರಾ ರಾಜೆ ಹಾಗೂ ಅವರ ಪುತ್ರ ದುಶ್ಯನ್​ ಸಿಂಗ್​ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ಗಾಯಕಿ ಕನಿಕಾ ಕಪೂರ್​ ಅವರಿಗೆ ಕರೊನಾ ವೈರಸ್​ ಸೋಂಕು ಹರಡಿರುವುದು ದೃಢವಾಗುತ್ತಿದ್ದಂತೆ ರಾಜೆ ಹಾಗೂ ಅವರ ಪುತ್ರ ಪ್ರತ್ಯೇಕವಾಗಿ ಇರುವುದಾಗಿ ತಿಳಿಸಿದ್ದಾರೆ.
ಲಕ್ನೋದಲ್ಲಿ ನಡೆದ ಔತಣಕೂಟದಲ್ಲಿ ನಾನು, ನನ್ನಪುತ್ರ ಹಾಗೂ ಅಳಿಯನೊಂದಿಗೆ ಪಾಲ್ಗೊಂಡಿದ್ದೆ. ಈ ವೇಳೆ ಸೋಂಕು ಹರಡಿರಬಹುದು ಎಂದು ಅನಿಸುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಗಾಯಕಿ ಕನಿಕಾ ಕಪೂರ್​ ಅವರು, ಲಂಡನ್​ಗೆ ತೆರಳಿದ್ದರು. ಮಾ.15ರಂದು ಅವರು ರಾಷ್ಟ್ರಕ್ಕೆ ಆಗಮಿಸಿದ್ದರು. ಅವರು ಲಂಡನ್​ನಿಂದ ಬಂದಿರುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸದೆ ಮುಚ್ಚಿಟ್ಟಿದ್ದರು. ಅಲ್ಲದೆ ಅವರು ಔತಣಕೂಟ ಏರ್ಪಡಿಸಿದ್ದರು ಎಂದು ತಿಳಿದು ಬಂದಿದೆ.
ರಾಜಸ್ತಾನದಲ್ಲಿ ರಾಜೆ ಹಾಗೂ ಅವರ ಪುತ್ರನೊಂದಿಗೆ ಸಂಪರ್ಕಕ್ಕೆ ಬಂದವರ ಬಗ್ಗೆ ಅಧಿಕಾರಿಗಳು ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)
ಕರೊನಾ ವೈರಸ್​ ಸೋಂಕು ಹರಡುವಿಕೆ ತಪ್ಪಿಸಲು ಶೃಂಗೇರಿಯಲ್ಲಿ ವಸತಿ ಸೌಕರ್ಯಕ್ಕೆ ತಾತ್ಕಾಲಿಕ ತಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − three =
Remember me
