ಜೈಪುರ:ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​​ ನೇತೃತ್ವದ ಕಾಂಗ್ರೆಸ್​ ಸರ್ಕಾರವು ಗುರುವಾರ ಇಂದಿರಾ ಗಾಂಧಿ ಸ್ಮಾರ್ಟ್​ಪೋಣ್​ ಯೋಜನೆಗೆ ಚಾಲನೆ ನೀಡಿದೆ. ಈ ವರ್ಷದ ಬಜೆಟ್​ನಲ್ಲಿ ಮಹಿಳೆಯರಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಸ್ಮಾರ್ಟ್​ಪೋನ್​ ವಿತರಿಸಲಾಗುವುದು ಎಂದು ಸಿಎಂ ಘೋಷಿಸಿದ್ದರು.
ಈ ಯೋಜನೆ ಅಡಿಯಲ್ಲಿ ಸರ್ಕಾರದ ವತಿಯಿಂದ ಮಹಿಳೆಯರಿಗೆ ಉಚಿತ ಡೇಟಾದೊಂದಿಗೆ ಸ್ಮಾರ್ಟ್​ಪೋನ್​ಗಳನ್ನೂ ವಿತರಿಸಲಾಗುತ್ತಿದೆ. 1 ಕೋಟಿ 40 ಲಕ್ಷ ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಲಿದ್ದು, ಮೊದಲ ಹಂತದಲ್ಲಿ 40 ಲಕ್ಷ ಮಹಿಳೆಯರಿಗೆ ಸ್ಮಾರ್ಟ್​ಪೋನ್ ಸಿಗಲಿದೆ. ಜೈಪುರದ ಬಿರ್ಲಾ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​​ ಫಲಾನುಭವಿಗಳಿಗೆ ಸ್ಮಾರ್ಟ್​​ಪೋನ್​ಗಳನ್ನೂ ವಿತರಿಸಿದರು.
बेटियों को आशीर्वादस्मार्टफोन सबके हाथआज इंदिरा गांधी स्मार्टफोन योजना के प्रथम चरण का शुभारंभ करते हुए बहनों व बेटियों को फ्री स्मार्टफोन व इंटरनेट का वितरण किया।हमें विश्वास है कि यह कदम महिला सशक्तीकरण की दिशा में मील का पत्थर सिद्ध होगा।pic.twitter.com/NC1pjmhk0X
ಇದನ್ನೂ ಓದಿ:ದುರುದ್ದೇಶವಿಲ್ಲದೆ ಮಹಿಳೆಯರನ್ನು ತಬ್ಬಿಕೊಳ್ಳುವುದು, ಮುಟ್ಟುವುದು ಅಪರಾಧವಲ್ಲ: ಬ್ರಿಜ್​ ಭೂಷಣ್​ ಶರಣ್​ ಸಿಂಗ್​
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ ಅಶೋಕ್​ ಗೆಹ್ಲೋಟ್​​ ಜ್ಞಾನವೇ ಶಕ್ತಿ ಎಂಬ ಘೋಷವಾಕ್ಯದೊಂದಿಗೆ ಮಹಿಳೆಯರಿಗೆ ಸ್ಮಾರ್ಟ್​ಪೋನ್​ಗಳನ್ನೂ ವಿತರಿಸಲಾಗುತ್ತಿದೆ. ಈ ಯೋಜನೆ ಮಹಿಳೆಯರ ಸಬಲೀಕರಣಕ್ಕಾಗಿ ಜಾರಿ ಮಾಡಲಾಗಿದೆ. ಮೊದಲ ಹಂತದಲ್ಲಿ ವಿಧವೆಯರು, ಪಿಂಚಣಿ ಪಡೆಯುವ ಒಂಟಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿರುವ ಕುಟುಂಬಗಳಿಗೆ ಸ್ಮಾರ್ಟ್​ಫೋನ್​ಗಳನ್ನೂ ವಿತರಿಸಲಾಗುತ್ತಿದೆ.
ಅರ್ಜಿ ಹಾಕುವ ವೇಳೆ ಫಲಾನುಭವಿಗಳು ತಮ್ಮಗೆ ಬೇಕಾದ ಸ್ಮಾರ್ಟ್​ಫೋನ್​ ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ. ನಾವೇ ಫೋನ್ ಖರೀದಿಸುತ್ತೇವೆ ಎನ್ನುವವರಿಗೆ ನೇರ ವರ್ಗಾವಣೆ(DBT) ಮೂಲಕ 6,800 ರೂಪಾಯಿಗಳನ್ನೂ ಅವರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಯೋಜನೆಯ ಮೊದಲ ಹಂತದಲ್ಲಿ 40 ಲಕ್ಷ ಮಹಿಳೆಯರಿಗೆ ಸ್ಮಾರ್ಟ್​ಫೋನ್​ ಪಡೆಯಲಿದ್ದಾರೆ ಎಂದು ಸಿಎಂ ಅಶೋಕ್​ ಗೆಹ್ಲೋಟ್​ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 1 =
Remember me
