ನವದೆಹಲಿ:ಕಾಂಗ್ರೆಸ್ ವರಿಷ್ಠರ ಭರವಸೆಯ ನಂತರ ಸಚಿನ್ ಪೈಲಟ್ ಮರಳಿ ಗೂಡಿಗೆ ಸೇರಿರುವುದರ ಬೆನ್ನಿಗೆ ಮುಖ್ಯಮಂತ್ರಿ ಆಶೋಕ್ ಗೆಹ್ಲೋಟ್ ತಮ್ಮ ವರಸೆ ಬದಲಿಸಿದ್ದು, ಸಚಿನ್ ಮತ್ತು ಅವರ ಬೆಂಬಲಿಗರನ್ನು ಸ್ವಾಗತಿಸಿದ್ದಾರೆ. ಪೈಲಟ್ ಬಣ ಒಪ್ಪಿದರೆ ಸರ್ಕಾರದಲ್ಲಿ ಸೇರ್ಪಡೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಪಕ್ಷದ ನಾಯಕತ್ವವು ಬಂಡಾಯ ಶಾಸಕರನ್ನು ಕ್ಷಮಿಸಲು ನಿರ್ಧರಿಸಿದರೆ ತಾವೂ ಅವರನ್ನು ಆತ್ಮೀಯ ಅಪ್ಪುಗೆಯಿಂದ ಬರಮಾಡಿಕೊಳ್ಳುವೆ ಎಂದು ಹಿಂದೆಯೇ ಹೇಳಿದ್ದೆ ಎಂದಿದ್ದಾರೆ.
ಶಾಸಕರು ಬಂಡಾಯವೆದ್ದಿದ್ದು ಏಕೆ? ಅವರಿಗೆ ಏನು ಭರವಸೆ ನೀಡಲಾಗಿದೆ ಎಂಬುದನ್ನು ನಾನು ತಿಳಿಯಬಯಸುತ್ತೇನೆ. ಯಾವುದೇ ಶಾಸಕರು ನನ್ನ ಬಳಿ ಸಮಸ್ಯೆ ಹೇಳಿಕೊಂಡಿದ್ದರೆ ಅದನ್ನು ಬಗೆಹರಿಸುವುದು ನನ್ನ ಹೊಣೆ. ಅದನ್ನು ಹಿಂದೆಯೂ ಮಾಡಿದ್ದೇನೆ, ಈಗಲೂ ಮಾಡುತ್ತೇನೆ ಎಂದಿದ್ದಾರೆ. ಪೈಲಟ್ ಮತ್ತು ಅವರ ಬೆಂಬಲಿಗರ ಅಹವಾಲು ಆಲಿಸಲು ಹೈಕಮಾಂಡ್ ರಚಿಸಲಾಗಿರುವ ಮೂವರು ಸದಸ್ಯರ ಸಮಿತಿ ಎಲ್ಲ ವಿವಾದಗಳನ್ನು ಬಗೆಹರಿಸುತ್ತದೆ ಎಂದೂ ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಸಚಿನ್ ಪೈಲಟ್ ವಿರುದ್ಧ ಹರಿಹಾಯ್ದಿದ್ದ ಗೆಹ್ಲೋಟ್ ಈಗ ವಾಗ್ಬಾಣವನ್ನು ಏಕಾಏಕಿ ಬಿಜೆಪಿಯೆಡೆಗೆ ತಿರುಗಿಸಿದ್ದು, ಬಿಜೆಪಿ ಎಲ್ಲ ತಂತ್ರಗಳನ್ನು ಪ್ರಯತ್ನಿಸಿದರೂ ನಮ್ಮನ್ನು ಒಡೆಯುವಲ್ಲಿ ವಿಫಲವಾಯಿತು. ಅಧಿಕಾರ ಪಡೆಯಲು ಬಿಜೆಪಿ ನಾಚಿಕೆಯಿಲ್ಲದೆ ಕೊಳಕು ರಾಜಕೀಯದಲ್ಲಿ ತೊಡಗಿದೆ. ಅವರಿಗೆ ಪಾಠ ಕಲಿಸುವ ಸಮಯ ಈಗ ಬಂದಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಜತೆಗೆ ತಮ್ಮ ಶಾಸಕರಿಗೆ ಹಣ, ಹುದ್ದೆಗಳ ಆಮಿಷವೊಡ್ಡಿದರೂ ಅವರು ಪಕ್ಷ ತೊರೆಯ ಲಿಲ್ಲ ಎಂದಿದ್ದಾರೆ. ಪೈಲಟ್ ಮತ್ತು ಅವರ ಬೆಂಬಲಿಗರ ಅಹವಾಲು ಆಲಿಸಲು ಹೈಕಮಾಂಡ್ ರಚಿಸಿರುವ ಮೂವರು ಸದಸ್ಯರ ಸಮಿತಿ ಎಲ್ಲ ವಿವಾದ ಗಳನ್ನು ಬಗೆಹರಿಸುತ್ತದೆ ಎಂದೂ ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಡಾಯ ಶಮನದ ಬಳಿಕ ಉದ್ಭವಿಸಿದ 5 ಪ್ರಶ್ನೆ
ಲಕ್ಷ್ಮಣರೇಖೆ ದಾಟಿಲ್ಲ
ಅಶೋಕ್ ಗೆಹ್ಲೋಟ್ ಹಿರಿಯರು ಮತ್ತು ಅವರನ್ನು ನಾನು ಗೌರವಿಸುತ್ತೇನೆ. ಆದರೆ ಸಮಸ್ಯೆಗಳನ್ನು ಎತ್ತುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಸಚಿನ್ ಪೈಲಟ್ ಹೇಳಿಕೆ ನೀಡಿದ್ದಾರೆ. ನಮ್ಮ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ರಾಹುಲ್ ಮತ್ತು ಪ್ರಿಯಾಂಕಾ ಭರವಸೆ ನೀಡಿದ್ದಾರೆ. ನಾನು ಯಾವುದೇ ಸ್ಥಾನವನ್ನು ಕೋರಿಲ್ಲ, ಪಕ್ಷ ನನಗೆ ನೀಡುವ ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಪೈಲಟ್ ಹೇಳಿದ್ದಾರೆ. ನನ್ನ ಕುಟುಂಬದಿಂದ ಕೆಲವು ಮೌಲ್ಯಗಳನ್ನು ಕಲಿತಿದ್ದೇನೆ. ಸಾರ್ವಜನಿಕವಾಗಿ ಮಾತನಾಡುವಾಗ ಲಕ್ಷ್ಮಣ ರೇಖೆ ಇರಬೇಕಾಗುತ್ತದೆ. ನಾನು ಆ ಲಕ್ಷ್ಮಣ ರೇಖೆ ದಾಟಿಲ್ಲ. ರಾಜಕೀಯದಲ್ಲಿ ವೈಯಕ್ತಿಕ ದ್ವೇಷಕ್ಕೆ ಸ್ಥಾನವಿಲ್ಲ. ಪಕ್ಷದ ಕಾರ್ಯಕರ್ತರ ಗೌರವ ಮತ್ತು ಕಾರ್ಯವೈಖರಿಗೆ ಸಂಬಂಧಿಸಿದ ವಿಷಯಗಳನ್ನು ನಾನು ಎತ್ತಿದ್ದೆ ಎಂದು ಪೈಲಟ್ ತಮ್ಮ ಬಂಡಾಯದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೇ ಪಕ್ಷ ದ್ರೋಹದ ನೋಟಿಸ್ ನೀಡಿದ ರೀತಿ ನೋವುಂಟು ಮಾಡಿತು. ಆದರೆ ಪಕ್ಷದ ಸಿದ್ಧಾಂತ, ಸರ್ಕಾರ ಮತ್ತು ಪಕ್ಷದ ನಾಯಕತ್ವದ ವಿರುದ್ಧ ನಾವು ಎಂದಿಗೂ ಮಾತನಾಡಲಿಲ್ಲ. ಅದು ಕಾರ್ಯನಿರ್ವಹಿಸುವ ವಿಧಾನವನ್ನು ಮಾತ್ರ ನಾವು ಪ್ರಶ್ನಿಸಿದ್ದೇವೆ ಎಂದು ಪೈಲಟ್ ಹೇಳಿದ್ದಾರೆ.
ಬಂಡಾಯ ಮುಗಿದರೂ ಆಪತ್ತು ತಪ್ಪಿಲ್ಲ!
ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ಜತೆಗಿನ ಸಭೆ ಬಳಿಕ ಸಚಿನ್ ಪೈಲಟ್ ಬಂಡಾಯ ಶಮನವಾಗಿದೆಯಾದರೂ ಸರ್ಕಾರಕ್ಕಿರುವ ಆಪತ್ತು ಇನ್ನೂ ಹಾಗೇ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಗೆಹ್ಲೋಟ್ ಹಾಗೂ ಪೈಲಟ್ ನಡುವಿನ ವೈಮನಸ್ಸು ತೀವ್ರ ಮಟ್ಟಕ್ಕೆ ತಲುಪಿದ್ದರಿಂದ ಈ ಬಿರುಕು ಕೇವಲ ಹೈಕಮಾಂಡ್ ಸಭೆಯಿಂದಾಗಿ ಮುಚ್ಚಿಹೋಗುತ್ತದೆ ಎನ್ನಲಾಗುವುದಿಲ್ಲ. ಸರ್ಕಾರಕ್ಕೆ ಕಂಟಕ ತಂದಿದ್ದ ಪೈಲಟ್ ವಿರುದ್ಧ ಬಹಿರಂಗವಾಗಿ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಪೈಲಟ್ ನಿಷ್ಪ್ರಯೋಜಕ, ಕೇವಲ ನೋಟ ಮತ್ತು ಉತ್ತಮ ಇಂಗ್ಲಿಷ್​ನಿಂದ ಮಾಧ್ಯಮಗಳ ಮೇಲೆ ಪ್ರಭಾವ ಬೀರಿದ ರಾಜಕಾರಣಿ ಎಂದು ಲೇವಡಿ ಮಾಡಿದ್ದರು. ಇದನ್ನೆಲ್ಲ ಮರೆತು ಪೈಲಟ್ ಮೊದಲಿನಂತೆ ಒಂದಾಗಿರುತ್ತಾರೆಯೇ ಎಂಬ ಅನುಮಾನ ಇದೆ. ಜತೆಗೆ ಎರಡು ಬಣದ ಶಾಸಕರೂ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಹೀಗಾಗಿ ಭವಿಷ್ಯದಲ್ಲಿ ಮತ್ತೆ ಭಿನ್ನಮತಗಳು ಉದ್ಭವಿಸುವ ಸಾಧ್ಯತೆ ಇಲ್ಲ ಎನ್ನಲಾಗದು.
ಮಣಿಪುರದಲ್ಲಿ 6 ಕಾಂಗ್ರೆಸ್ ಶಾಸಕರ ರಾಜೀನಾಮೆ
ಇಂಫಾಲ್: ಮಣಿಪುರದ ಕಾಂಗ್ರೆಸ್​ನ ಆರು ಶಾಸಕರು ಪಕ್ಷಕ್ಕೆ ಮತ್ತು ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಈಶಾನ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇನ್ನೊಂದು ಬಿಕ್ಕಟ್ಟಿಗೆ ಜಾರಿದೆ. ಆರೂ ಶಾಸಕರು ಸ್ಪೀಕರ್ ಯುಮ್ನಂ ಖೇಮಚಂದ್ ಸಿಂಗ್​ರಿಗೆ ತ್ಯಾಗಪತ್ರ ಸಲ್ಲಿಸಿದ್ದಾರೆ. ಪಕ್ಷ ಬಿಡುವ ಬಗ್ಗೆ ಅವರು ಸೋಮವಾರ ರಾತ್ರಿಯೇ ಕಾಂಗ್ರೆಸ್ ನಾಯಕರಿಗೆ ಮಾಹಿತಿ ನೀಡಿದ್ದರು. ಪಕ್ಷದ ಸದಸ್ಯತ್ವ ತೊರೆದಿರುವುದನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹರೇಶ್ವರ ಗೋಸ್ವಾಮಿ ದೃಢಪಡಿಸಿದ್ದಾರೆ. ಸೋಮವಾರ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಗೈರಾಗಿದ್ದ ಎಂಟು ಕಾಂಗ್ರೆಸ್ ಶಾಸಕರಲ್ಲಿ ಈ ಆರು ಜನರೂ ಸೇರಿದ್ದರು. ವಿಶ್ವಾಸ ಮತ ಗೊತ್ತುವಳಿಯಲ್ಲಿ ಎನ್. ಬೀರೇನ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರ ಗೆಲುವು ಸಾಧಿಸಿತ್ತು. ಐದು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕ ರಿಸಿದ್ದಾರೆ. ಇನ್ನೊಬ್ಬ ಶಾಸಕನ ಅನರ್ಹತೆ ಅರ್ಜಿ ಬಾಕಿ ಇರುವ ಕಾರಣ ರಾಜೀ ನಾಮೆ ವಿಷಯವನ್ನು ಇತ್ಯರ್ಥ ಪಡಿಸಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + four =
Remember me
