ನವದೆಹಲಿ:ಇಡೀ ದೇಶಾದ್ಯಂತ ಕರೊನಾ ಬಿಕ್ಕಟ್ಟು ಎದುರಾಗಿದೆ. ಜನರೆಲ್ಲ ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಕಾಂಗ್ರೆಸ್​ ಪಕ್ಷ ರಾಜಸ್ಥಾನದಲ್ಲಿ ತನ್ನ ಸರ್ಕಾರ ಉಳಿಸಿಕೊಳ್ಳುವದರಲ್ಲೇ ಮಗ್ನವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಕೈಲಾಶ್​ ಚೌಧರಿ ಟೀಕಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯ ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ಶಾಸಕರು ಐಷಾರಾಮಿ ಹೋಟೆಲ್ ಸೇರಿ ಮಜಾ ಮಾಡುತ್ತಿದ್ದಾರೆ. ಸ್ವಿಮ್ಮಿಂಗ್​ ಪೂಲ್​, ಅಡುಗೆ ಎನ್ನುತ್ತ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಇದೆಲ್ಲದರ ಪರಿಣಾಮವನ್ನೂ ಕಾಂಗ್ರೆಸ್ ಅನುಭವಿಸುತ್ತದೆ. ಕೊನೆಗೆ ಖಂಡಿತ ಈ ಸರ್ಕಾರ ಉರುಳುತ್ತದೆ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಫೋನ್​ ಟ್ಯಾಪಿಂಗ್​ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೈಲಾಶ್​ ಚೌಧರಿ ಅವರು, ಕಾಂಗ್ರೆಸ್​ನವರಿಗೆ ಫೋನ್​ ಕದ್ದಾಲಿಕೆ ಮಾಡಲು ಏನು ಅಧಿಕಾರವಿದೆ? ಕಾಂಗ್ರೆಸ್​ ಒಳಗಿನ ಕಲಹಕ್ಕೆ ಬಿಜೆಪಿ ಕಾರಣವಲ್ಲ. ಆಡಿಯೋ ಕ್ಲಿಪ್​​ನಲ್ಲಿರುವುದು ಗಜೇಂದ್ರ ಜಿ ಅವರ ಧ್ವನಿಯಲ್ಲ. ಫೋನ್​ ಟ್ಯಾಪಿಂಗ್​ ಬಗ್ಗೆ ಕಾಂಗ್ರೆಸ್​ ಸ್ಪಷ್ಟ ವಿವರಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್​)
ಐಸೋಲೇಶನ್​ ಕೋಣೆಯ ಕಿಟಕಿಯಿಂದ ಹಾರಿ ಸೂಸೈಡ್ ಮಾಡಿಕೊಂಡ ಕೊವಿಡ್​-19 ಸೋಂಕಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + fourteen =
Remember me
