ಜೈಪುರ: ರಾಜಸ್ಥಾನ ರಾಜಕೀಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ಕೋರ್ಟ್ ಮೆಟ್ಟಿಲೇರಿದ್ದು, ಸಚಿನ್ ಪೈಲಟ್ ಮತ್ತು 18 ಶಾಸಕರ ಅನರ್ಹತೆ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ವಿಧಾನ ಸಭೆ ಸ್ಪೀಕರ್​ ಸಿಪಿ ಜೋಶಿ ಅವರಿಗೆ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ
ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿಪಿ ಜೋಶಿಯವರು ಜುಲೈ 14ರಂದು ನೀಡಿದ್ದ ಆದೇಶದ ಮೇಲೆ ಈಗ ಹೈಕೋರ್ಟ್​ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ. ಶಾಸಕ ಸ್ಥಾನದಲ್ಲಿ ಮುಂದುವರಿಯುವುದಕ್ಕೆ ಅವಕಾಶ ನೀಡಬೇಕು ಎಂದು ಕೋರಿದ್ದ ಸಚಿನ್ ಪಾಳಯದ ಶಾಸಕರ ಅರ್ಜಿ ವಿಚಾರಣೆ ವೇಳೆ ಈ ಆದೇಶ ನೀಡಿದೆ ಎಂದು ಸ್ಪೀಕರ್ ಪರ ವಕೀಲ ಪ್ರತೀಕ್ ಕಾಶಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ ರಾಜಕೀಯ: ಮೌನ ಮುರಿದ ರಾಹುಲ್ ಗಾಂಧಿ!
ಈ ಪ್ರಕರಣದ ಪೂರ್ಣ ವಿಚಾರಣೆ ನಂತರವೇ ಅಂತಿಮ ಹಿಯರಿಂಗ್​ ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿದೆ. ಈ ಪ್ರಕರಣದಲ್ಲಿ ಕೋರ್ಟ್​, ಸ್ಪೀಕರ್​ಗೆ ಸಂವಿಧಾನದ ಷೆಡ್ಯೂಲ್ 2(1)(ಎ) ಪ್ರಕಾರ ಅಧಿಕಅರ ಇದೆಯೋ ಇಲ್ಲವೋ ಎಂಬ ಬಗ್ಗೆ ಪರಿಶೀಲಿಸಿ ನಿರ್ಣಯ ಪ್ರಕಟಿಸಲಿದೆ ಎಂದು ಕಾಶಿವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ:ನಾನೆಲ್ಲಿ 35 ಕೋಟಿ ರೂಪಾಯಿ ತಗೊಂಡೆ- ಮಿಥ್ಯಾರೋಪಕ್ಕೆ ಕಾನೂನು ಕ್ರಮ ಖಚಿತ: ಎಚ್ಚರಿಸಿದ್ರು ಸಚಿನ್ ಪೈಲೆಟ್
ಇದಕ್ಕೂ ಮುನ್ನ ರಾಜಸ್ಥಾನ ವಿಧಾನಸಭೆ ಸ್ಪೀಕರ್ ಸಿಪಿ ಜೋಶಿಗೆ ಸಲ್ಲಿಸಲ್ಪಟ್ಟಿದ್ದ ಪೈಲಟ್ ಮತ್ತು 18 ಶಾಸಕರನ್ನು ಅನರ್ಹಗೊಳಿಸುವ ಅರ್ಜಿ ವಿಚಾರಣೆಯನ್ನು ತಡೆಯುವಂತೆ ಹೈಕೋರ್ಟ್​ ಸೂಚಿಸಿತ್ತು. ಜುಲೈ 24ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ, ಗುರುವಾರ ಸುಪ್ರೀಂ ಕೋರ್ಟ್​ ಈ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಹೈಕೋರ್ಟ್​ಗೆ ಸೂಚನೆ ನೀಡಿದ್ದು, ಸಚಿನ್ ಪೈಲಟ್​ ಮತ್ತು 18 ಶಾಸಕರು ಸ್ಪೀಕರ್ ವಿರುದ್ಧ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಬಹುದು ಎಂದು ಹೇಳಿತ್ತು.
ಇದರ ಬೆನ್ನಿಗೆ ರಾಜಸ್ಥಾನ ಹೈಕೋರ್ಟ್​ನ ಮಧ್ಯಂತರ ತೀರ್ಪು ಪ್ರಶ್ನಿಸಿ ಸ್ಪೀಕರ್ ಜೋಶಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. (ಏಜೆನ್ಸೀಸ್)
ಸುಪ್ರೀಂ ಮೆಟ್ಟಿಲೇರಿದ ರಾಜಸ್ಥಾನ ರಾಜಕೀಯ ಪ್ರಹಸನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × five =
Remember me
