ಜೈಪುರ:ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿ ರುವ ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಭವಿಷ್ಯ ಶುಕ್ರವಾರ ಹೊರಬೀಳಲಿದೆ. ಕಾಂಗ್ರೆಸ್​ನ ಬಂಡಾಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಅವರ ಬಣದ 18 ಶಾಸಕರಿಗೆ ಸ್ಪೀಕರ್ ಸಿ.ಪಿ.ಜೋಶಿ ನೀಡಿರುವ ಅನರ್ಹತೆ ನೋಟಿಸ್ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಶುಕ್ರವಾರಕ್ಕೆ ತೀರ್ಪು ಕಾಯ್ದಿರಿಸಿದೆ. ಅಲ್ಲಿಯವರೆಗೂ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸ್ಪೀಕರ್​ಗೆ ಸೂಚನೆ ನೀಡಿದೆ.
ಸೋಮವಾರ ಮುಂದೂಡಲಾಗಿದ್ದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಇಂದ್ರಜಿತ್ ಮಹಂತಿ ಹಾಗೂ ಪ್ರಕಾಶ್ ಗುಪ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ ಮಂಗಳವಾರ ನಡೆಸಿತು. ಪೈಲಟ್ ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿ, ತಮ್ಮ ಕಕ್ಷಿದಾರರಿಗೆ ನೋಟಿಸ್ ಜಾರಿ ಮಾಡುವ ಮುನ್ನ ಸ್ಪೀಕರ್ ಬುದ್ಧಿ ಉಪಯೋಗಿಸಿಲ್ಲ. ಈ ವಿಚಾರದಲ್ಲಿ ಅವರು ಆತುರ ತೋರಿದ್ದಾರೆೆ. ಜತೆಗೆ ನೋಟಿಸ್​ನಲ್ಲಿ ಅನರ್ಹತೆಗೆ ಯಾವುದೇ ಕಾರಣಗಳನ್ನು ಉಲ್ಲೇಖಿಸಿಲ್ಲ ಎಂದರು. ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಸ್ಪೀಕರ್ ನಿರ್ಧಾರ ಕೈಗೊಳ್ಳದೆಯೇ ಬಂಡಾಯ ಶಾಸಕರಿಗೆ ನ್ಯಾಯಾಲಯದ ಮೆಟ್ಟಿಲೇರಲು ಅವಕಾಶವಿಲ್ಲ ಎಂದು ವಾದಿಸಿದರು. ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ ತೀರ್ಪನ್ನು ಶುಕ್ರವಾರಕ್ಕೆ ಕಾಯ್ದರಿಸಿತು.
ರಾಹುಲ್ ಗಾಂಧಿ ಟೀಕೆ
ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ವಿಚಾರದಲ್ಲಿ ಮೌನ ಮುರಿದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮಸ್ತೇ ಟ್ರಂಪ್, ಮಧ್ಯಪ್ರದೇಶ ಸರ್ಕಾರ ಕೆಡವಿದ್ದು, ರಾಜಸ್ಥಾನದಲ್ಲಿ ಸರ್ಕಾರ ಉರುಳಿಸುವ ಪ್ರಯತ್ನ ಸೇರಿದಂತೆ ಮೋದಿ ಸರ್ಕಾರದ ಒಟ್ಟು 6 ಸಾಧನೆಗಳನ್ನು ಪಟ್ಟಿ ಮಾಡಿ ವ್ಯಂಗ್ಯವಾಡಿದ್ದಾರೆ. ಅತ್ತ ಬಿಜೆಪಿ ಕೂಡ ರಾಹುಲ್​ಗೆ ತಿರುಗೇಟು ನೀಡಿದ್ದು, ಕಾಂಗ್ರೆಸ್ಸನ್ನು ಟ್ವೀಟ್ ಪಾರ್ಟಿ ಎಂದು ಹರಿಹಾಯ್ದಿದೆ.
200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ 101 ಶಾಸಕರ ಬೆಂಬಲ ಅಗತ್ಯವಿದೆ. ಸಿಎಂ ಅಶೋಕ್ ಗೆಹ್ಲೋಟ್ ತಮಗೆ 103 ಶಾಸಕರ ಬೆಂಬಲವಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಹೈಕೋರ್ಟ್ ತೀರ್ಪಿನ ಬಳಿಕ ಒಂದೊಮ್ಮೆ ಪೈಲಟ್ ಹಾಗೂ ಅವರ ಬಣದ 18 ಶಾಸಕರು ಅನರ್ಹಗೊಂಡಲ್ಲಿ ಸದನದ ಸಂಖ್ಯೆ ಕೂಡ 181ಕ್ಕೆ ಇಳಿಯಲಿದೆ. ಆಗ ಬಹುಮತ ಸಂಖ್ಯೆ ಕೂಡ 91ಕ್ಕೆ ಇಳಿಯಲಿದೆ. ಇಷ್ಟಾದರೆ ಗೆಹ್ಲೋಟ್ ಸುಲಭವಾಗಿ ಬಹುಮತ ಸಾಬೀತುಪಡಿಸಬಹುದು. ಆದರೆ, ಪೈಲಟ್ ಬಣ ಗೆದ್ದು ಸದನದಲ್ಲಿ ಮತ ಚಲಾಯಿಸುವ ಅವಕಾಶವೂ ಸಿಕ್ಕಲ್ಲಿ ಸರ್ಕಾರಕ್ಕೆ ಸಂಕಷ್ಟ ಎದುರಾಗಬಹುದು.
ಬಿಜೆಪಿಯ ಚಾರ್ಜ್​ಶೀಟ್
ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ಟ್ವೀಟ್ ಮಾಡುತ್ತಿರುವ ಕಾಂಗ್ರೆಸ್ ಟ್ವೀಟ್ ಪಾರ್ಟಿ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟೀಕಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ರಾಹುಲ್ ಗಾಂಧಿ ಮಾಡಿರುವ ನಿಷ್ಪ ›ಯೋಜಕ ಕಾರ್ಯಗಳ ಪಟ್ಟಿಯನ್ನು ನೀಡಿದ್ದಾರೆ.
ಸಿಎಲ್​ಪಿ ಸಭೆ ಸಸ್ಪೆನ್ಸ್
ಬಂಡಾಯ ಶಾಸಕರ ಅನರ್ಹತೆ ಪ್ರಕರಣವನ್ನು ರಾಜಸ್ಥಾನ ಹೈಕೋರ್ಟ್ ಶುಕ್ರವಾರಕ್ಕೆ ಕಾಯ್ದಿರಿಸಿದ ಬೆನ್ನಲ್ಲೇ ರಾಜಸ್ಥಾನ ಕಾಂಗ್ರೆಸ್ ಮಂಗಳವಾರ ಐಷಾರಾಮಿ ರೆಸಾರ್ಟ್​ವೊಂದರಲ್ಲಿ ಮತ್ತೊಂದು ಬಾರಿ ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಬೇಕೆಂಬುದು ಕಾಂಗ್ರೆಸ್ ಉದ್ದೇಶ ಅಲ್ಲ. ಅದನ್ನು ಬಯಸುವುದೂ ಇಲ್ಲ. ನಮ್ಮ ಹೋರಾಟವನ್ನು ಇಡೀ ದೇಶ ನೋಡುತ್ತಿದೆ. ನಿಮ್ಮ ಬಗೆಗಿನ ಗೌರವ ಮತ್ತಷ್ಟುಹೆಚ್ಚಾಗುತ್ತಿದೆ. ನಿಮ್ಮೆಲ್ಲರ ಬಳಿ ಫೋನ್ ಇದೆ. ಯಾರ ಮೇಲೂ ಒತ್ತಡವಿಲ್ಲ ಎಂದರು ಸಿಎಂ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಅಧಿವೇಶನಕ್ಕೆ ಸಿದ್ಧತೆ: ಹೈಕೋರ್ಟ್ ತೀರ್ಪು ಪ್ರಕಟವಾಗುವುದಕ್ಕೆ ಮೊದಲೇ ವಿಶ್ವಾಸಮತಯಾಚನೆಗೆ ಸಜ್ಜಾಗಲು ಗೆಹ್ಲೋಟ್ ಸರ್ಕಾರ ಶೀಘ್ರದಲ್ಲೇ ಸಂಪುಟ ಸಭೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಸಾವಾಗಿದೆ ಸ್ವಲ್ಪ ನಿಲ್ಲಿ ಎಂದ ದಲಿತನನ್ನು ಠಾಣೆಗೊಯ್ದು ತಲೆ ಬೋಳಿಸಿದರು…! ವೈಎಸ್​ಆರ್​ಸಿ ನಾಯಕನ ಪವರ್​ ಖದರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − five =
Remember me
