ಜೈಪುರ:ಮಗನ ಜತೆ ಮದುವೆಯಾಗಿದ್ದ ಸೊಸೆ ಬೇರೊಬ್ಬ ಹುಡುಗನನ್ನು ಮದುವೆಯಾಗಿದ್ದಕ್ಕೆ, ಮಗನ ಕುಟುಂಬಸ್ಥರು ಮಾಡಬಾರದ ಕೆಲಸ ಮಾಡಿರುವ ಘಟನೆ ರಾಜಸ್ಥಾನ ನಾಗೌರ್​ನಲ್ಲಿ ನಡೆದಿದೆ. ಇದರಿಂದಾಗಿ ಯುವಕನ ಜೀವನವೇ ಅಂತ್ಯವಾಗಿದೆ.
ಆ ಮಹಿಳೆಗೆ ಮದುವೆಯಾಗಿ ಒಬ್ಬ ಮಗ ಮತ್ತು ಮಗಳಿದ್ದಾಳೆ. ಆದರೆ ಇತ್ತೀಚೆಗೆ ಆಕೆಗೆ ಇಂಧ್ರಚಂದ್ರ ಹೆಸರಿನ ಯುವಕನೊಂದಿಗೆ ಪ್ರೀತಿ ಹುಟ್ಟಿದೆ. ಈ ವಿಚಾರ ತಿಳಿದ ಗಂಡ ಆಕೆಯನ್ನು ಎಚ್ಚರಿಸಿದರೂ ಕೇಳದ ಆಕೆ, ಕಳೆದ 20 ದಿನಗಳಿಂದ ಆ ಯುವಕನೊಂದಿಗೆ ಲಿವ್​ ಇನ್​ ರಿಲೇಷನ್​ಶಿಪ್​ ಆರಂಭಿಸಿದ್ದಾಳೆ. ಅದನ್ನು ಮನಗಂಡ ಕುಟುಂಬ ಒಂದು ನಿರ್ಧಾರಕ್ಕೆ ಬಂದಿದೆ.
ಇಂದ್ರಚಂದ್ರ ಒಬ್ಬಂಟಿಯಾಗಿ ಹೋಗುತ್ತಿದ್ದಾಗ ಆತನ ಮೇಲೆ ಅಟ್ಯಾಕ್​ ಮಾಡಲಾಗಿದೆ. ಕಾಲು ಮತ್ತು ಕೈಗಳ ಮೂಳೆಗಳನ್ನು ಮುರಿಯಲಾಗಿದೆ. ನಂತರ ಆತನನ್ನು ಅಲ್ಲಿಯೇ ಬಿಟ್ಟ ಕುಟುಂಬಸ್ಥರು ಅಲ್ಲಿಂದ ಪರಾರಿಯಾಗಿದ್ದಾರೆ. ದಾರಿಹೋಕರು ಇಂದ್ರಚಂದ್ರನನ್ನು ನೋಡಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಆತ ಕೊನೆಯುಸಿರೆಳೆದಿದ್ದಾನೆ.
ತನಗೂ ಪ್ರಾಣಾ ಬೆದರಿಕೆಯಿದ್ದು, ರಕ್ಷಣೆ ಕೋರಿ ಮಹಿಳೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಳಂತೆ. ಆದರೆ ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಆಕೆ ದೂರಿದ್ದಾಳೆ. ಆಕೆಯ ಗಂಡನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. (ಏಜೆನ್ಸೀಸ್)
ಪೆರ್ಡೂರು ಮೇಳದ ಹೆಸರಾಂತ ಯಕ್ಷಗಾನ ಕಲಾವಿದ ನಾಪತ್ತೆ

ನಾದಿನಿ ಜತೆ ಭಾವನ ಅಕ್ರಮ ಸಂಬಂಧ! ಅವಳಿ ಮಕ್ಕಳನ್ನು ಗರ್ಭದಲ್ಲಿ ಹೊತ್ತಿದ್ದ ಹೆಂಡತಿಯನ್ನೇ ಕೊಂದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 8 =
Remember me
