ಸಿರೋಹಿ (ರಾಜಸ್ಥಾನ):ಯುವಕ-ಯುವತಿಯರು ಪ್ರೇಮಪಾಶಕ್ಕೆ ಸಿಲುಕಿದ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಥಳಿಸುವ ಹಾಗೂ ತೀವ್ರ ಸ್ವರೂಪದಲ್ಲಿ ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಹಿಂದೆ ಕೂಡ ಇಂಥ ಘಟನೆಗಳು ನಡೆಯುತ್ತಿದ್ದರೂ, ಇದೀಗ ವಿಡಿಯೋದಿಂದ ಅಮಾನುಷ ಕೃತ್ಯಗಳು ಬಯಲಿಗೆ ಬರುತ್ತಿವೆ.
ಅಂಥದ್ದೇ ಒಂದು ಅಮಾನವೀಯ ಘಟನೆ ರಾಜಸ್ಥಾನದ ಸಿರೋಹಿ ಗ್ರಾಮದಲ್ಲಿ ನಡೆದಿದೆ. ಸುಮಾರು 20 ವರ್ಷದ ಯುವಕನೊಬ್ಬನನ್ನು ಅಪಹರಿಸಿರುವ ಗ್ರಾಮಸ್ಥರು ಆತನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ಮಾತ್ರವಲ್ಲದೇ ಬಲವಂತವಾಗಿ ಮೂತ್ರ ಕುಡಿಸಿದ್ದಾರೆ. ಮೂತ್ರ ಕುಡಿದ ನಂತರವೂ ಪುನಃ ಥಳಿಸಿದ್ದಾರೆ.
ಈ ಘಟನೆಗೆ ನಿಖರ ಕಾರಣಗಳು ತಿಳಿಯದಿದ್ದರೂ ಇದು ಯುವಕ ಗ್ರಾಮದ ಯುವತಿಯನ್ನು ಪ್ರೀತಿಸಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ:‘ಪುತ್ರ ಮಡಿದ ಸುದ್ದಿಯನ್ನು ಸೊಸೆಯೇ ತಿಳಿಸಿದಳು…ನೋವಿದೆ..ಅಷ್ಟೇ ಹೆಮ್ಮೆಯಿದೆ’: ಕರ್ನಲ್​ ತಾಯಿಯ ಕಣ್ಣೀರು
ಗ್ರಾಮಸ್ಥರು ಮೂತ್ರ ಕುಡಿಸಿ, ಥಳಿಸುತ್ತಿರುವ ವಿಡಿಯೋ ಸ್ಥಳೀಯರು ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.ವಿಡಿಯೋ ಆಧರಿಸಿ ಪೊಲೀಸರು ಗ್ರಾಮದ ಅಪ್ರಾಪ್ತರೂ ಸೇರಿದಂತೆ ಅನೇಕರ ವಿರುದ್ಧ ಎಫ್​ಐಆರ್​ ದಾಖಲು ಮಾಡಿದ್ದು, ದೂರಿನ ಆಧಾರದ ಮೇಲೆ ಲಕ್ಷ್ಮಣ್, ಜವನಾರಾಮ್, ಭೀಮರಾಮ್, ನವರಾಮ್ ಅಲಿಯಾಸ್ ನವೀನ್, ಮತ್ತು ದರ್ಗರಾಮ್ ಎಂಬ ಐವರನ್ನು ಬಂಧಿಸಲಾಗಿದೆ ಎಂದು ಸುಮೇರ್‌ಪುರ ಪೊಲೀಸ್ ಠಾಣೆ ಎಸ್‌ಎಚ್‌ಒ ರವೀಂದ್ರ ಸಿಂಗ್ ತಿಳಿಸಿದ್ದಾರೆ.
ವಿಡಿಯೋದಲ್ಲಿ ಗ್ರಾಮಸ್ಥರು ಬಳಸುತ್ತಿರುವ ಭಾಷೆ ಹಾಗೂ ಅವರ ವಸ್ತ್ರಗಳ ಆಧಾರದ ಮೇಲೆ ಇವರು ಸಿರೋಹಿ ಜಿಲ್ಲೆಯ ರೆಬಾರಿ ಸಮುದಾಯದವರು ಎಂದು ಗುರುತಿಸಲಾಗಿದೆ. ಹಲ್ಲೆಗೊಳಗಾದವನನ್ನು ಕಲುರಾಮ್ ದೇವಾಸಿ ಎಂದು ಗುರುತಿಸಲಾಗಿದೆ. ಇದು ಪ್ರೇಮಕ್ಕೆ ಸಂಬಂಧಿಸಿದ ವಿಷಯ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
Video of a man forced to drink urine goes viral. He is also being beaten up by several people. Language and clothes indicate it is from Sirohi district and Rebari community.@fpjindia@PoliceRajasthan#Rajasthan#Atrocitypic.twitter.com/cFwWUbfJNd
— Dr Sangeeta Pranvendra (@sangpran)June 16, 2020

ಈಕೆಯ ಗರ್ಭದಲ್ಲಿದೆ ವಿಸ್ಮಯ- ಕೆಲವೇ ತಿಂಗಳಲ್ಲಿ ಹುಟ್ಟಲಿದೆ ಮೊಮ್ಮಗು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 1 =
Remember me
