ಪಾಲಿ:ಪತ್ನಿಯ ಪ್ರಿಯಕರನೊಬ್ಬ ಆಕೆಯ ಗಂಡನನ್ನು ಕೊಲೆ ಮಾಡಿ ಶವವನ್ನು ಆರು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಹೂತಿಟ್ಟು ಅದರ ಮೇಲೆ ಗಿಡ ನೆಟ್ಟಿರುವ ರಾಜಸ್ಥಾನದ ಪಾಲಿಯಲ್ಲಿ ನಡೆದಿದೆ.ಇದನ್ನೂ ಓದಿ:ತನಿಖೆ ವೇಳೆ ರೋಚಕ ಸಂಗತಿಗಳ ಬಗ್ಗೆ ಬಾಯ್ಬಿಟ್ಟ ಶಂಕಿತ ಉಗ್ರರು..ಘಟನೆಗೆ ಸಂಬಂಧಿಸಿದಂತೆ ಮದನಲಾಲ್ ಎಂಬಾತನನ್ನು ಬಂಧಿಸಲಾಗಿದ್ದು, ಆತ 33 ವರ್ಷದ ಜೋಗೇಂದ್ರ ಎಂಬಾತನನ್ನು ಕೊಂದು ಮುಂಡವನ್ನು ಸಮೀಪದ ಕಾಡಿನಲ್ಲಿ ಹಾಗೂ ಮನೆಯಿಂದ 100 ಮೀಟರ್ ದೂರದಲ್ಲಿರುವ ತೋಟದಲ್ಲಿ ತಲೆ, ಕೈ ಮತ್ತು ಕಾಲುಗಳನ್ನು ಹೂತಿಟ್ಟಿದ್ದನು.ಘಟನೆ ಹಿನ್ನೆಲೆ:ಜೋಗೇಂದ್ರ ಎಂಬಾತ ಜುಲೈ 11ರಂದು ಮನೆಯಿಂದ ಹೋದವನು ವಾಪಾಸ್ಸು ಬಂದಿರಲಿಲ್ಲ. ಆತನ ಬಗ್ಗೆ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ಎರಡು ದಿನಗಳ ಕಾಲ ವಿಚಾರಿಸಿದ ಆತನ ತಂದೆ ಮಿಶ್ರಾಲಾಲ್ ಮೇಘವಾಲ್ ಕೊನೆಗೆ ಜುಲೈ 13 ರಂದು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದನು.ಅಲ್ಲದೇ ತನ್ನ ಮಗನ ಸಾವಿನ ಬಗ್ಗೆ ಮದನ್‌ಲಾಲ್‌ ಕೈವಾಡ ಇರಬಹುದೆಂದು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದ. ಈ ಬಗ್ಗೆ ತನಿಖೆ ಆರಂಭಿಸಿದ್ದ ಪೊಲೀಸರು ಅನುಮಾನದ ಮೇಲೆ ಮದನ್‌ಲಾಲ್‌ ಎಂಬಾತನನ್ನು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಯು ಜೋಗೇಂದ್ರನ ಪತ್ನಿಯೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಹಾಗೂ ಆತನ ಕೊಲೆ ತಾನೇ ಮಾಡಿ ಸಮಾಧಿ ಸ್ಥಳದ ಮೇಲೆ ಮಾವಿನ ಸಸಿ ನೆಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
