ಜೈಪುರ:ಮಹಿಳೆಯೊಬ್ಬರನ್ನು ಬೈಕ್​ಗೆ ಕಟ್ಟಿಹಾಕಿ ಗ್ರಾಮದಲ್ಲಿ ಎಳೆದಾಡಿರುವ ಘಟನೆ ರಾಜಸ್ಥಾನದ ನಾಗೌರ್​ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವಿಡಿಯೋದಲ್ಲಿನ ದೃಶ್ಯ ಮನಕಲಕುವಂತಿದೆ. ವ್ಯಕ್ತಿಯೊಬ್ಬ ಮಹಿಳೆ ಕಾಲಿಗೆ ಹಗ್ಗ ಕಟ್ಟಿ, ಆ ಹಗ್ಗವನ್ನು ತನ್ನ ಬೈಕ್​​ಗೆ ಕಟ್ಟಿದ್ದಾನೆ. ಆ ಬೈಕ್​ ಅನ್ನು ಗ್ರಾಮದಲ್ಲಿ ಡ್ರೈವ್​ ಮಾಡಿದ್ದಾನೆ. ಆರೋಪಿ ಆ ವ್ಯಕ್ತಿ ತನ್ನ ಬೈಕ್​ಗೆ ಕಟ್ಟಿಹಾಕಿ ಹಿಂಸೆ ನೀಡಿದ ಮಹಿಳೆ ಬೇರೆ ಯಾರು ಅಲ್ಲ ಆತನ ಹೆಂಡತಿಯೇ.
ಇದನ್ನು ಓದಿ:ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮಾನಹಾನಿ ಕೇಸ್​; ತಡೆಯಾಜ್ಞೆ ನೀಡಿ ನೋಟಿಸ್​​ ಜಾರಿ ಮಾಡಿದ ಕೋರ್ಟ್​
ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಮತ್ತೊಂದು ಮಹಿಳೆಯನ್ನು ಕಾಣಬಹುದು. ಆದರೆ ಆ ಮಹಿಳೆ ಈತನ ನೀಚ ಕೃತ್ಯ ನೋಡಿಯು ಏನನ್ನು ಪ್ರಶ್ನಿಸಿದೆ ತನ್ನ ಪಾಡಿಗೆ ತಾನು ಹೋಗುತ್ತಿದ್ದಾಳೆ. ಗ್ರಾಮದವರು ಎಲ್ಲರೂ ನೋಡುತ್ತಾ ನಿಂತಿದ್ದಾರೆ. ಗ್ರಾಮದಲ್ಲಿನ ಯಾರೋ ಒಬ್ಬರು ಆ ವ್ಯಕ್ತಿಯ ಹೇಯ ಕೃತ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ದರು ಗ್ರಾಮದ ಜನರು ನಿಂತು ನೋಡುವುದನ್ನು ನಾವು ವೈರಲ್​ ವಿಡಿಯೋದಲ್ಲಿ ಕಾಣಬಹುದು. ಕೊನೆಯಲ್ಲಿ ಮತ್ತೊಬ್ಬ ಮಹಿಳೆ ಬಂದು ಆಕೆಗೆ ಸಹಾಯ ಮಾಡಿದ್ದಾರೆ.
Shocking video from Rajasthan.Prema Ram Meghwal tied his wife Sumitra's leg to a bike and dragged her for several KM.Both of them got married 6 months ago.Video@Satyabhrt7pic.twitter.com/6uYwAtHQDU
ಜೈಸಲ್ಮೇರ್‌ನಲ್ಲಿರುವ ತನ್ನ ಸಹೋದರಿ ನೋಡಲು ಹೋಗುತ್ತೇನೆ ಎಂದಿದ್ದಕ್ಕೆ ಹೆಂಡತಿಗೆ ಪತಿ ಈ ರೀತಿ ಶಿಕ್ಷೆ ನೀಡಿದ್ದಾನೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ ಈ ಘಟನೆ ನಡೆದು ಒಂದು ತಿಂಗಳಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ನೋಡಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ನಹರಸಿಂಗ್‌ಪುರ ಗ್ರಾಮದಲ್ಲಿ ಸುಮಾರು ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದೆ. ಆರೋಪಿ ಯುವಕನ ಹೆಸರು ಪ್ರೇಮರಾಮ್ ಮೇಘವಾಲ್(32), ತನ್ನ ಪತ್ನಿಯನ್ನು ದ್ವಿಚಕ್ರವಾಹನದ ಹಿಂಭಾಗಕ್ಕೆ ಹಗ್ಗದಿಂದ ಕಟ್ಟಿ ಗ್ರಾಮಕ್ಕೆ ಎಳೆದೊಯ್ದಿದ್ದಾನೆ. ಈ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಪಂಚೌರಿ ಪೊಲೀಸ್ ಠಾಣೆಯ ಸಹಾಯಕ ಸಬ್​​​ಇನ್​ಸ್ಪೆಕ್ಟರ್​​ ಸುರೇಂದ್ರ ಕುಮಾರ್ ತಿಳಿಸಿದರು.
ವಿಷಯ ಬೆಳಕಿಗೆ ಬಂದ ಕೂಡಲೇ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆ ಪ್ರಸ್ತುತ ತನ್ನ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೇಮಾರಾಮ್​ಗೆ ಕುಡಿತ ಚಟವಿದ್ದು ಪತ್ನಿಯನ್ನು ಥಳಿಸುತ್ತಿದ್ದ. ಹೆಂಡತಿಯನ್ನು ಗ್ರಾಮದಲ್ಲಿ ಯಾರೊಂದಿಗೂ ಮಾತನಾಡಲು ಬಿಡುತ್ತಿರಲಿಲ್ಲ ಎಂದು ನೆರೆಹೊರೆಯವರು ತಿಳಿಸಿದ್ದಾರೆ.(ಏಜೆನ್ಸೀಸ್​​)
ಜಾವೆಲಿನ್​ ಕುರಿತು ಸೈನಾ ಹೇಳಿಕೆ ವೈರಲ್​; ಕಂಗನಾ ರಣಾವತ್ ಆಫ್​ ಇಂಡಿಯನ್​ ಸ್ಪೋರ್ಟ್ಸ್​ ಎಂದು ಕಿಡಿಕಾರಿದ ನೆಟ್ಟಿಗರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + five =
Remember me
