ಅಲ್ವಾರ್‌:ಐಷಾರಾಮಿ ಜೀವನ ನಡೆಸಲು ಗ್ಯಾಂಗ್ ರಚಿಸಿಕೊಂಡು ನಿಖರವಾಗಿ ಕಳ್ಳತನ ಮಾಡುತ್ತಿದ್ದ ಯುವಕರನ್ನು ಬಂಧಿಸಿರುವ ಘಟನೆ ರಾಜಸ್ಥಾನದ ಅಲ್ವಾರ್​ನಲ್ಲಿ ನಡೆದಿದೆ.ಕಾದರ್ ಮತ್ತು ಸಾಹಿಲ್ ಎಂಬ ಇಬ್ಬರು ಕಳ್ಳರನ್ನು ಬಂಧಿಸಲಾಗಿದ್ದು, ಪೊಲೀಸರ ವಿಚಾರಣೆಯಲ್ಲಿ ಹಲವಾರು ಆಘಾತಕಾರಿ ಸಂಗತಿಗಳನ್ನು ಬೆಳಕಿಗೆ ಬಂದಿವೆ. ಈ ಗ್ಯಾಂಗ್​ನಲ್ಲಿ 10ಕ್ಕೂ ಹೆಚ್ಚು ಸದಸ್ಯರಿದ್ದು, ಓರ್ವ ಅಪ್ರಾಪ್ರಯ ವಯಸ್ಕನಿದ್ದಾನೆ. ಇನ್ನು ಅಲ್ವಾರ್ ನಗರದ ಸಮೀಪದ ಸಮೋಲಾ ಗ್ರಾಮದ ನಿರ್ದಿಷ್ಟ ಸಮುದಾಯದ ಯುವಕರು ತಮ್ಮ ಐಷಾರಾಮಿ ಜೀವನಕ್ಕಾಗಿ ಈ ಗ್ಯಾಂಗ್​ನ್ನು ರಚಿಸಿಕೊಂಡಿದ್ದರು ಎಂದು ಆರೋಪಿಗಳು ಹೇಳಿದ್ದಾರೆ.
ಇದನ್ನೂ ಓದಿ:ಸೀಮಾ ಹೈದರ್‌ನಂತೆಯೇ ಮಗು ಹಿಡಿದುಕೊಂಡು ಭಾರತಕ್ಕೆ ಬಂದ ನೆರೆರಾಷ್ಟ್ರದ ಯುವತಿ..ಪೊಲೀಸರ ವಿಚಾರಣೆಯಲ್ಲಿ ಈ ಗ್ಯಾಂಗ್ ಇದುವರೆಗೆ 33 ಕಳ್ಳತನದ ಘಟನೆಗಳನ್ನು ನಡೆಸಿದೆ ಎಂದು ಇಬ್ಬರೂ ಹೇಳಿದ್ದು, ತಮ್ಮ ಗ್ಯಾಂಗ್‌ನಲ್ಲಿ ಅದೇ ಗ್ರಾಮದ 10ಕ್ಕೂ ಹೆಚ್ಚು ಯುವಕರಿದ್ದಾರೆ. ಗ್ಯಾಂಗ್‌ನ ಪ್ರತಿಯೊಬ್ಬ ಸದಸ್ಯರು ವಿಭಿನ್ನ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ. ನಗರದ ಸಮೀಪದಲ್ಲಿರುವ ಗ್ರಾಮವಾದ್ದರಿಂದ ಆರಾಮವಾಗಿ ಕೃತ್ಯ ಎಸಗುತ್ತಿದ್ದರು ಎಂದು ಕಳ್ಳರು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾರೆ.
ಗ್ಯಾಂಗ್ ಸದಸ್ಯರು ಮೊದಲು ಇ-ರಿಕ್ಷಾಗಳು, ಬೈಕ್‌ಗಳು ಇತ್ಯಾದಿಗಳಲ್ಲಿ ಸುತ್ತಾಡಿಕೊಂಡು ನಿರ್ಜನ ಮತ್ತು ಬೀಗ ಹಾಕಿರುವ ಮನೆಗಳನ್ನು ಗುರುತಿಸಿದ ಬಳಿಕ ರಾತ್ರಿ ವೇಳೆ ಕೃತ್ಯ ಎಸಗಿ ಪರಾರಿಯಾಗುತ್ತಿದ್ದರು.ಗ್ರಾಮದ ನಿರುದ್ಯೋಗಿ ಯುವಕರನ್ನು ಮಾತ್ರ ದರೋಡೆಕೋರರ ಗುಂಪಿನಲ್ಲಿ ಸೇರಿಸಿಕೊಳ್ಳಲಾಗಿದ್ದು, ತಂಡದ ಬಗ್ಗೆ ಯಾವುದೇ ಮಾಹಿತಿ ಸೋರಿಕೆಯಾಗಿಲ್ಲ. ಆರೋಪಿಗಳು ಕದ್ದ ಮಾಲನ್ನು ಎಲ್ಲಿ ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:17 ದಿನದ ಮಗುವಿನ ಬೆಲೆ ಎರಡೂವರೆ ಲಕ್ಷ ರೂ.: ಮಾರಾಟಕ್ಕೆ ಯತ್ನಿಸಿದ ತಾಯಿ, ಗ್ಯಾಂಗ್​ ಬಂಧನಗ್ಯಾಂಗ್‌ನ ನಾಯಕ ಕಾದ‌ರ್​ ಎಲ್ಲಿ ಕಳ್ಳತನ ಮಾಡಬೇಕೆಂದು ನಿರ್ಧರಿಸುವುದರ ಜತೆಗೆ ಇತರ ಗ್ಯಾಂಗ್ ಸದಸ್ಯರಿಗೆ ಕಳ್ಳತನದ ತರಬೇತಿಯನ್ನು ಸಹ ನೀಡುತ್ತಿದ್ದ. ಎಲ್ಲಾ ಆರೋಪಿಗಳ ವಯಸ್ಸು 18 ರಿಂದ 30 ವರ್ಷ ಎಂದು ಹೇಳಲಾಗಿದೆ. ಕಳ್ಳತನದ ಘಟನೆ ನಡೆಸುವ ಮುನ್ನ ತಂಡದ ನಾಯಕ ಕಾದ‌ರ್​ ಎಲ್ಲ ಸದಸ್ಯರಿಗೂ ಕೆಲಸವನ್ನು ನೀಡುತ್ತಿದ್ದನು.ಕೆಲವರು ವಾಹನಗಳ ವ್ಯವಸ್ಥೆ ಮಾಡುತ್ತಿದ್ದರೇ, ಇನ್ನು ಕೆಲವರು ಕದ್ದ ಸರಕುಗಳನ್ನು ಸಾಗಿಸಲು ಜವಾಬ್ದಾರಿ ವಹಿಸಲಾಗಿತ್ತು. ಎಲ್ಲರೂ ಐಷಾರಾಮಿ ಜೀವನಕ್ಕಾಗಿ ಅಪರಾಧ ಎಸಗುತ್ತಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ. ಗ್ಯಾಂಗ್‌ನ ಉಳಿದ ಸದಸ್ಯರನ್ನು ಬಂಧಿಸುವಲ್ಲಿ ಪೊಲೀಸ್ ತಂಡಗಳು ನಿರತವಾಗಿದ್ದು, ಇವರು ಬಂಧನಕ್ಕಾಗಿ ಪೊಲೀಸ್ ತಂಡಗಳು ಅಲ್ಲಲ್ಲಿ ನಿರಂತರ ದಾಳಿ ನಡೆಸುತ್ತಿವೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eighteen =
Remember me
