ಜೈಪುರ: ಮಧ್ಯಪ್ರದೇಶ, ಗೋವಾಗಳಲ್ಲಿ ನಡೆದ ರಾಜಕೀಯ ಸನ್ನಿವೇಶ ರಾಜಸ್ಥಾನದಲ್ಲೂ ಪುನರಾವರ್ತನೆ ಆಗಲಿದೆ ಎಂಬ ಭಾವನೆ ಕಳೆದ ಕೆಲವು ತಿಂಗಳಿಂದ ಮೂಡಿತ್ತು. ಆದರೂ, ಕಾಂಗ್ರೆಸ್ ನಾಯಕರ ಸತತ ಪ್ರಯತ್ನದ ಬಳಿಕ ಸನ್ನಿವೇಶ ಬದಲಾಗಿದೆ. ಬಂಡಾಯದ ಬಾವುಟ ಹಾರಿಸಿದ್ದ ಸಚಿನ್ ಪೈಲಟ್​ ವಾಪಸ್ ಕಾಂಗ್ರೆಸ್ ತೆಕ್ಕೆಯಲ್ಲೇ ಉಳಿದಿದ್ದು, ಶುಕ್ರವಾರ ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್​ ವಿಶ್ವಾಸ ಮತ ಗೆದ್ದು, ಗೆಲುವಿನ ನಗೆ ಬೀರಿದ್ದಾರೆ.
ಇದನ್ನೂ ಓದಿ:ವಿಶ್ವಾಸ ಮತ ಯಾಚಿಸಲು ರಾಜಸ್ಥಾನ ಸಿಎಂ ಚಿಂತನೆ; ಆರು ತಿಂಗಳ ನೆಮ್ಮದಿಯೇ ಕಾರಣ…!
ಸಚಿನ್ ಪೈಲಟ್ ಪುನರಾಗಮನ ಗೆಹ್ಲೋಟ್ ಸರ್ಕಾರಕ್ಕೆ ಬಲ ತುಂಬಿದ್ದು, ನಿನ್ನೆಯಷ್ಟೇ ಪೈಲಟ್​ ಬಳಕದ 19 ಶಾಸಕರ ಪೈಕಿ ಮೂವರ ಮೇಲಿನ ಅಮಾನತು ಆದೇಶವನ್ನು ಕಾಂಗ್ರೆಸ್ ಹಿಂಪಡೆದಿತ್ತು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್​ ಸರ್ಕಾರದ ಅಸ್ತಿತ್ವ ಉಳಿಯುವ ಭರವಸೆ ಕಂಡುಬಂದಿತ್ತು. ಇಂದು ವಿಶ್ವಾಸ ಮತದ ಸಂದರ್ಭದಲ್ಲಿ 200 ಸದಸ್ಯ ಬಲದ ಸದನದಲ್ಲಿ ಗೆಹ್ಲೋಟ್​ಗೆ 125 ಸದಸ್ಯರ ಬೆಂಬಲ ದಕ್ಕಿದೆ. ಬಹುಮತಕ್ಕೆ ಬೇಕಾಗಿದ್ದುದು ಕೇವಲ 101. ಬಂಡಾಯ ಶಾಸಕರು ಹೊರಗುಳಿದ ಸಂದರ್ಭದಲ್ಲಿ ಗೆಹ್ಲೋಟ್ ಬಲ 102 ಆಗಿತ್ತು. ಆಗಲೂ ಅಲ್ಪ ಬಹುಮತ ಸಾಧ್ಯವಿತ್ತು. ಹೀಗಾಗಿ ಬಂಡಾಯ ಶಾಸಕರಿಲ್ಲದೆಯೂ ನಾವು ಬಹುಮತ ಸಾಬೀತು ಮಾಡಬಲ್ಲೆವು ಎಂದು ಗೆಹ್ಲೋಟ್ ವಿಶ್ವಾಸ ವ್ಯಕ್ತಪಡಿಸಿದ್ದರು.ಸದನದಲ್ಲಿ ಕಾಂಗ್ರೆಸ್ ಬಲ 107 ಆಗಿದ್ದು, ಬಿಜೆಪಿ 72 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್​ಗೆ ಮಿತ್ರ ಪಕ್ಷಗಳ ಸದಸ್ಯರ ಮತವೂ ಬಿದ್ದ ಕಾರಣ 125 ಬಲ ಬಂದಿದೆ.
ಇದನ್ನೂ ಓದಿ:ರಾಜಸ್ಥಾನದಲ್ಲಿ ಏನೊಂದು ಸರಿಯಿಲ್ಲ; ಯಾವುದೇ ಕ್ಷಣದಲ್ಲಿ ಪ್ರಕ್ಷುಬ್ಧಗೊಳ್ಳಬಹುದು ಪ್ರಶಾಂತ ಸಾಗರ
ಇದಕ್ಕೂ ಮುನ್ನ ನಿನ್ನೆ, ಬಿಜಪಿ ನಾಯಕರು ಸುದ್ದಿಗೋಷ್ಠಿ ನಡೆಸಿ ಅವಿಶ್ವಾಸಗೊತ್ತುವಳಿ ಮಂಡಿಸುವುದಾಗಿ ಹೇಳಿದ್ದರು. ಅಲ್ಲದೆ, ಗೆಹ್ಲೋಟ್ ಸರ್ಕಾರ ಶೀಘ್ರ ಪತನವಾಗಲಿದೆ ಎಂದೆಲ್ಲ ಹೇಳಿದ್ದರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಗೆಹ್ಲೋಟ್​ ಗೆಲುವಿನ ನಗೆ ಬೀರಿದ್ದು, ಅವರ ಸರ್ಕಾರ ಸುರಕ್ಷಿತವಾಗಿದೆ. (ಏಜೆನ್ಸೀಸ್)
ರಾಜಸ್ಥಾನ ರಾಜಕೀಯದಲ್ಲಿ ರೋಚಕ ಟ್ವಿಸ್ಟ್​!: ಅವಿಶ್ವಾಸ ಗೊತ್ತುವಳಿಗೆ ಬಿಜೆಪಿ ಸಿದ್ಧತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × two =
Remember me
