ನಾಗಪುರ:ಅಲ್ಲೊಬ್ಬ ನೆಲದ ಮೇಲೆ ಮಲಗಿದ್ದಾನೆ. ಭಿಕ್ಷುಕನ ತರಹದ ವೇಷ. ಇನ್ನೊಬ್ಬ ಆತನ ಕೈಯನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತಾನೆ. ಇನ್ನೊಬ್ಬ ಆವನ ಮೇಲೆ ತನ್ನ ಕಾಲಿಟ್ಟು ಮೀಸುಕಾಡದಂತೆ ಒತ್ತಿ ಹಿಡಿಯುತ್ತಾನೆ. ನೆಲದ ಮೇಲೆ ಬಿದ್ದವನ ಪ್ಯಾಂಟ್​ ಬಿಚ್ಚಿ ಪೆಟ್ರೋಲ್​ ಅದ್ದಿದ ಸ್ಕ್ರೂಡ್ರೈವರ್​ನ್ನು ಗುದನಾಳಕ್ಕೆ ಸೇರಿಸಲು ಮುಂದಾಗುತ್ತಾನೆ.
ಕ್ರೂರತೆಯಿಂದ ತುಂಬಿದ ಈ ವೀಡಿಯೊ ಮುಗಿಯುತ್ತಿದ್ದಂತೆ ಮನುಷ್ಯನ ಕಿರುಚಾಟ ಕೇಳಿಸುತ್ತದೆ. ಇದು ಯಾವುದೋ ಸಿನಿಮಾದ ದೃಶ್ಯವಲ್ಲ. ಬದಲಿಗೆ, ರಾಜಸ್ಥಾನದ ನಾಗೌರ್ ಎಂಬಲ್ಲಿ ನಡೆದ ಘಟನೆ ಇದು. ಈ ವಿಡಿಯೋ ಹಳೆಯದಾಗಿದ್ದು, ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಳ್ಳತನದ ಆರೋಪದಲ್ಲಿ ರಾಜಸ್ಥಾನದ ನಾಗೌರ್​ನಲ್ಲಿ ಇಬ್ಬರು ಯುವ ದಲಿತ ಯುವಕರನ್ನು ಹೀಗೆ ಕ್ರೂರವಾಗಿ ಹಿಂಸಿಸಲಾಗಿದೆ. ಇದು ಯಾವುದೋ ಗ್ಯಾರೇಜ್​ನಲ್ಲಿ ಮಾಡಿದ್ದು, ಅದನ್ನು ವಿಡಿಯೋ ಮಾಡಲಾಗಿದೆ.
ಈ ಹಿಂಸೆ ನೀಡಿದ್ದು ಫೆಬ್ರವರಿ 16ರಂದು ಎನ್ನಲಾಗಿದೆ. ಆದರೆ ಪೊಲೀಸರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದಮೇಲೆ ಅಂದರೆ ಫೆ 19ರಂದು ದೂರು ದಾಖಲಿಸಿಕೊಂಡಿದ್ದಾರೆ.
ದಲಿತ ಯುವಕರಿಬ್ಬರು ತಮ್ಮ ವಾಹನ ರಿಪೇರಿಯಾಗಿದೆಯೇ ಎಂದು ಕೇಳಲು ಆ ಗ್ಯಾರೇಜ್​​ಗೆ ಬರುತ್ತಾರೆ. ಅಲ್ಲಿ ಹಣ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಆಗ ಗುಂಪೊಂದು ಅವರಿಬ್ಬರನ್ನು ಮನಬಂದಂತೆ ಥಳಿಸುತ್ತಾರೆ.
7 ಜನರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ಐವರನ್ನು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಅಮಾನವೀಯ ಘಟನೆಗೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಗೌರ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಪಾಠಕ್ ಹೇಳಿದ್ದಾರೆ.
ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಭನ್ವರ್ ಲಾಲ್ ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + six =
Remember me
