ಜೈಪುರ:ಪಾಕಿಸ್ತಾನದ ಸೀಮಾ ಹೈದರ್​, ಭಾರತದ ಅಂಜು ಫಾತಿಮಾ ತಮ್ಮ ಪ್ರಿಯಕರನಿಗಾಗಿ ದೇಶದ ಗಡಿ ದಾಟಿದ ಪ್ರೇಮಕಥೆಗಳು ಮಾಸುವ ಮುನ್ನವೇ ಇದೀಗ ಅದೇ ರೀತಿಯ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಆದರೆ, ಈ ಬಾರಿ ಮಹಿಳೆ ಪ್ರಿಯಕರನಿಗಾಗಿ ಕುವೈತ್​ಗೆ ಹಾರಿದ್ದಾರೆ.
ಘಟನೆಯೂ ರಾಜಸ್ಥಾನದ ದುಂಗರ್​ಪುರ ಜಿಲ್ಲೆಯಲ್ಲಿ ನಡೆದಿದ್ದು, ದೀಪಿಕಾ ಪಾಟೀದಾರ್​(35) ತನ್ನ ಪ್ರಿಯಕರ ಇರ್ಫಾನ್​ ಹೈದರ್​ಗಾಗಿ ಮನೆಯಲ್ಲಿದ್ದ ಚಿನ್ನಾಭರಣ, ಹಣವನ್ನು ದೋಚಿ ಪರಾರಿಯಾಗಿದ್ದಾಳೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಹಿಳೆ ದೀಪಿಕಾ ಪಾಟೀದಾರ್​ಗೆ ಈಗಾಗಲೇ ಮದುವೆಯಾಗಿದ್ದು, 11 ಹಾಗೂ 7 ವರ್ಷದ ಇಬ್ಬರು ಮಕ್ಕಳಿದ್ದಾರೆ. ಆಕೆಯ ಪತಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಆತ ಪರಿವಾರದೊಂದಿಗೆ ಇರಲಿಲ್ಲ. ತಿಂಗಳಿಗೊಮ್ಮೆ ರಾಜಸ್ಥಾನಕ್ಕೆ ಬರುತ್ತಿದ್ದರು.
ಕುಟುಂಬಸ್ಥರು ಹಾಗೂ ಪತಿಯ ಬಳಿ ಅನಾರೋಗ್ಯದ ಕಾರಣ ನೀಡಿ ಚಿಕಿತ್ಸೆ ಪಡೆಯಲೆಂದು ಮಹಿಳೆ ಹಲವು ಬಾರಿ ರಾಜಸ್ಥಾನದ ಉದಯ್​ಪುರ ಹಾಗೂ ಗುಜರಾತ್​ಗೆ ಭೇಟಿ ನೀಡುತ್ತಿದ್ದರು. ಅದರಂತೆ ಜುಲೈ 10ರಂದು ಮಹಿಳೆ ಚಿಕತ್ಸೆಗಾಗಿ ಗುಜರಾತ್​ಗೆ ತೆರಳುತ್ತಿರುವುದಾಗಿ ಹೇಳಿ ಮನೆಯಿಂದ ಹೊರಟ್ಟಿದ್ದಾರೆ. ಜುಲೈ 13ರಂದು ಆಕೆಯ ಪತಿಗೆ ವಾಟ್ಸ್​ಅಪ್​ ಮೂಲಕ ಕರೆ ಮಾಡಿ ನಿಮ್ಮಿಂದ ಬೇಜಾರಾಗಿದ್ದು, ದೂರ ಹೋಗುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಪ್ರೋಟೋಕಾಲ್​ ವಿಚಾರವಾಗಿ ಕೆಂಪುಕೋಟೆಯ ಕಾರ್ಯಕ್ರಮದಿಂದ ದೂರ ಉಳಿದ ಮಲ್ಲಿಕಾರ್ಜುನ ಖರ್ಗೆ
ದೀಪಿಕಾ ಕರೆ ಬಳಿಕ ಎಚ್ಚೆತ್ತ ಆಕೆಯ ಪತಿ ಹಾಗೂ ಕುಟುಂಬಸ್ಥರು ಮನೆ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಆಕೆ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿ ಪ್ರಿಯಕರನೊಂದಿಗೆ ಓಡಿ ಹೋಗಿರುವುದು ಬೆಳಕಿಗೆ ಬಂದಿದೆ. ಆಕೆ ತನ್ನ ಪ್ರಿಯಕರನೊಂದಿಗೆ ಬುರ್ಖಾ ಧರಿಸಿ ಓಡಾಡುತ್ತಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು. ಈ ಸಂಬಂಧ ಮಹಿಳೆಯ ಪತಿ ದೂರು ನೀಡಿದ್ದು, ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
ದೀಪಿಕಾ ಪತಿ ಮುಕೇಶ್​ ಪಾಟೀದಾರ್​​ ಮಾತನಾಡಿ ಹೈದರ್​ ನನ್ನ ಪತ್ನಿಯ ತಲೆ ಕೆಡಿಸಿ ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ಗುಜರಾತ್​ನ ಸಬರ್​ಕಾಂತದಲ್ಲಿರುವ ಖೇಡ್​ ಬ್ರಹ್ಮದಲ್ಲಿ ಇಬ್ಬರು ಭೇಟಿಯಾಗಿದ್ದು, ಬಳಿಕ ಅಲ್ಲಿಂದ ಕುವೈತ್​ಗೆ ಹಾರಿದ್ದಾರೆ ಎಂದು ಮಹಿಳೆಯ ಪತಿ ಮುಕೇಶ್​ ಆರೋಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 9 =
Remember me
