ರಾಜಸ್ಥಾನ:ಮದುವೆಯ ನಂತರದ ಎದುರಾಗುವಂತಹ ವಿವಾದ, ಸವಾಲುಗಳನ್ನು ಎದುರಿಸಲು ಇಷ್ಟವಿಲ್ಲ ಎಂದು 30 ವರ್ಷದ ಪದವೀಧರೆಯೊಬ್ಬಳು ದೇವರನ್ನೇ ಮದುವೆಯಾಗಿದ್ದಾಳೆ. ಇದೀಗ ಈಕೆಯ ನಡೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಜೈಪುರದ ನರಸಿಂಗಪುರದ ನಿವಾಸಿಯಾಗಿರುವ ಪೂಜಾ, ದೇವರಾದ ವಿಷ್ಣುವಿನೊಂದಿಗೆ ತುಳಸಿ ವಿವಾಹವಾಗಿದ್ದಾಳೆ. ನನಗೆ ಮದುವೆ ಬಂಧನಕ್ಕೆ ಸಿಲುಕಿಕೊಳ್ಳಲು ಇಷ್ಟವಿಲ್ಲ. ಮದುವೆಯ ನಂತರ ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿಯರ ನಡುವಿನ ಜಗಳವನ್ನು ನೋಡಿದ್ದೇನೆ. ನನ್ನ ಬದುಕಿನಲ್ಲಿ ಇದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ದಂಪತಿಗಳ ನಡುವೆ ನಡೆಯುವ ಅನಗತ್ಯ ಜಗಳಗಳಿಂದ ಸಮಸ್ಯೆ ಎದುರಿಸುತ್ತಿರುವವರು ಮಹಿಳೆಯರೇ. ಹೀಗಾಗಿ ನಾನು ದೇವರನ್ನು ಮದುವೆಯಾಗುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಪೂಜಾ ಹೇಳಿಕೊಂಡಿದ್ದಾಳೆ.
ಡಿ.8 ರಂದು ಪೂಜಾ ವಿವಾಹ ಕಾರ್ಯಕ್ರಮ ನೆರವೇರಿದೆ. ನಿವೃತ್ತ ಬಿಎಸ್​​ಎಫ್​ ಯೋಧರಾಗಿರುವ ಈಕೆಯ ತಂದೆ, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಗಳ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಜತೆಗೆ ತಾಯಿ ರತನ್ ಕನ್ವಾರ್ ಮಗಳ ಕನ್ಯಾದಾನ ನೆರವೇರಿಸಿದ್ದಾರೆ.
ದೇವಸ್ಥಾನವೊಂದರಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 300 ಜನರು ಭಾಗವಹಿಸಿದ್ದರು. ಸದ್ಯ ಪೂಜಾ ತನ್ನ ಮನೆಯಲ್ಲಿಯೇ ವಿಷ್ಣುವನ್ನು ಭಕ್ತಿಯಿಂದ ನಿತ್ಯವೂ ಆರಾಧಿಸುತ್ತಿದ್ದೇನೆ. ಅಂತೆಯೇ ವಿಷ್ಣುವಿಗೆ ಪ್ರಿಯವಾದಂತಹ ಆಹಾರಗಳನ್ನು ಸಿದ್ಧಪಡಿಸಿ ನೈವೇದ್ಯ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾಳೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 11 =
Remember me
