ರಾಯಪುರ (ರಾಜಸ್ಥಾನ):ತುತ್ತು ಅನ್ನಕ್ಕೂ ಗತಿ ಇಲ್ಲದೆ, ದಿಕ್ಕೇ ತೋಚದೆ ಕಂಗೆಟ್ಟಿರುವ ನಿರ್ಗತಿಕರಿಗೆ ಆಹಾರ ಪೂರೈಸಲು ಸರ್ಕಾರ ಮುಂದಾದರೆ, ಅಡುಗೆ ಕೆಲಸದಾಕೆ ಬರಲಿಲ್ಲ ಎಂದು ಅಡುಗೆ ಮಾಡಲು ಸೋಮಾರಿತನ ತೋರಿರುವ ಹಲವು ಸಿರಿವಂತರು ಬಡವರ ಅನ್ನಕ್ಕೆ ಕಲ್ಲು ಹಾಕುತ್ತಿರುವ ಘಟನೆ ರಾಜಸ್ಥಾನದಲ್ಲಿ ನಡೆಯುತ್ತಿದೆ!
ಕರೊನಾ ವೈರಸ್‌ನಿಂದಾಗಿ ಪ್ರತಿಯೊಬ್ಬರ ಬದಕೂ ಅಲ್ಲೋಲ ಕಲ್ಲೋಲವಾಗಿರುವುದು ನಿಜವೇ. ಆದರೆ ಕೂಲಿ-ನಾಲಿ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬಡವರ ಪಾಲಿಗೆ ಲಾಕ್‌ಡೌನ್‌ ಅಕ್ಷರಶಃ ನರಕವನ್ನು ತೋರಿಸಿದೆ. ಇಂಥ ಸಮಯದಲ್ಲಿ ಯಾರೂ ಹಸಿದಿರಬಾರದು ಎನ್ನುವ ಕಾರಣಕ್ಕೆ ಬಹುತೇಕ ಎಲ್ಲಾ ಜಿಲ್ಲಾಡಳಿತಗಳೂ ಬಡವರಿಗೆ ಅಗತ್ಯ ಪಡಿತರ ಮತ್ತು ಆಹಾರವನ್ನು ಒದಗಿಸುವ ಪ್ರಯತ್ನಗಳನ್ನು ಮಾಡುತ್ತಿವೆ.
ಇಂಥದ್ದೇ ಸೇವೆ ಒದಗಿಸುತ್ತಿದೆ ರಾಜಸ್ಥಾನದ ರಾಯಪುರ ಪುರಸಭೆ. ತೀರಾ ಸಂಕಷ್ಟದಲ್ಲಿ ಇರುವವರಿಗೆ ಪಡಿತರ ಮತ್ತು ಆಹಾರಗಳನ್ನು ಒದಗಿಸುವ ಮೂಲಕ ಅವರ ಹಸಿವನ್ನು ನೀಗಿಸಲು ಶತ ಪ್ರಯತ್ನ ಇಲ್ಲಿ ಮಾಡಲಾಗುತ್ತಿದೆ. ತೀರಾ ಕಷ್ಟದಲ್ಲಿ ಇರುವವರು ಸಹಾಯವಾಣಿಗೆ ಕರೆ ಮಾಡಿ ಆಹಾರವನ್ನು ತರಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಆದರೆ ಪುರಸಭೆಯ ಅಧಿಕಾರಿಗಳಿಗೆ ಶಾಕ್‌ ಆದ ಸಂಗತಿಯೆಂದರೆ, ಹೀಗೆ ಸಹಾಯವಾಣಿಗೆ ಕರೆ ಬಂದಿರುವವರ ಪೈಕಿ ಹೆಚ್ಚಿನವರು ಸಿರಿವಂತರೆಂದು! ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಮನೆಕೆಲಸದವರು ಈಗ ಕೆಲಸಕ್ಕೆ ಹೋಗುವುದು ಕಷ್ಟವಾಗಿದೆ. ಆದ್ದರಿಂದ ಮನೆ ಒಡತಿಯೇ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಬೇಕು. ಆದ್ದರಿಂದ ಅಡುಗೆ ಮಾಡಲು ಬೇಸರವಾದ ಕಾರಣದಿಂದಲೋ ಅಥವಾ ಅಡುಗೆ ಮಾಡಲು ಬಾರದ ಕಾರಣದಿಂದಲೋ ಸಹಾಯವಾಣಿಗೆ ಕರೆ ಮಾಡಿ ಬಡವರ ತುತ್ತನ್ನು ಕಸಿದುಕೊಳ್ಳುತ್ತಿರುವ ಆಘಾತಕಾರಿ ಘಟನೆಗಳು ನಡೆಯುತ್ತಿವೆ.
ರಾಯಪುರ ಪುರಸಭೆಯ ಪ್ರಕಾರ, ‘ಕಾರು, ಬಂಗಲೆ ಹೊಂದಿರುವವರಿಂದಲೇ ನಮಗೆ ಅಧಿಕ ಕರೆಗಳು ಬರುತ್ತಿವೆ. ಅಡುಗೆಯವರು ರಜೆಯಲ್ಲಿ ಇರುವ ಕಾರಣ, ಅಡುಗೆ ಮಾಡುವ ಶ್ರಮವನ್ನು ಉಳಿಸಲು ಆಹಾರ ಪ್ಯಾಕೆಟ್‌ಗಳಿಗಾಗಿ ಸಹಾಯವಾಣಿಗೆ ಕರೆ ಮಾಡುತ್ತಿದ್ದಾರೆ. ಇದು ಆರಂಭದಲ್ಲಿ ನಮ್ಮ ಗಮನಕ್ಕೆ ಬರಲೇ ಇಲ್ಲ. ಏಕೆಂದರೆ ಅವರು ಕರೆ ಮಾಡುವಾಗ ತಮ್ಮನ್ನು ತಾವು ಬಡವರು ಎಂದು ಹೇಳಿಕೊಳ್ಳುತ್ತಿದ್ದರು. ನಂತರ ಅವರ ಮನೆಗೆ ಪ್ಯಾಕೆಟ್‌ ತಲುಪಿಸುವ ಹೊತ್ತಿಗೆ ಮೋಸ ಬಯಲಾಗಿದೆ’ ಎನ್ನುತ್ತಾರೆ ಅಧಿಕಾರಿ ಆಶಿಶ್ ಶರ್ಮಾ.
ಈ ನಡುವೆ ರಾಜಸ್ಥಾನದಲ್ಲಿ ಕಾಲ್ನಡಿಗೆಯಲ್ಲಿ ಮನೆಗೆ ತಲುಪಲು ಪ್ರಯತ್ನಿಸುತ್ತಿರುವಾಗ 22 ವಲಸಿಗರು ರಸ್ತೆಗಳಲ್ಲಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಇದೇ ರೀತಿ ಸಹಾಯವಾಣಿಗೆ ಪದೇ ಪದೇ ಕರೆ ಮಾಡಿ ಸಮೋಸಾ, ಚಟ್ನಿ ತರಿಸಿಕೊಂಡು ತಿನ್ನುತ್ತಿದ್ದ ವ್ಯಕ್ತಿಯೊಬ್ಬನಿಗೆ ಶಿಕ್ಷೆಯ ರೂಪದಲ್ಲಿ ಚರಂಡಿಯನ್ನು ಸ್ವಚ್ಛಗೊಳಿಸಲು ನೀಡಿರುವ ಘಟನೆ ಈಚೆಗೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.(ಏಜನ್ಸೀಸ್‌)
ದೇಶದಲ್ಲಿ ಇನ್ನೂ ಸಮುದಾಯಕ್ಕೆ ಹರಡಿಲ್ಲ ಕರೊನಾ: ಕೇಂದ್ರ ಸರ್ಕಾರದ ಅಭಯ; ಆರೋಗ್ಯ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದರೆ ಕಠಿಣ ಕ್ರಮ

ವಿಡಿಯೋ ಕಾಲ್‌ನಲ್ಲೇ ತಾಯಿಯ ಅಂತಿಮ ದರ್ಶನ: ಜೀವನದ ಅತ್ಯಂತ ನೋವಿನ ಸಂಗತಿ ಎಂದ ನರ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − seven =
Remember me
