ಲಂಡನ್:ಯುವ, ಕ್ರಿಯಾಶೀಲ ಹಾಗೂ ಪರಿಶ್ರಮಿ ಭಾರತೀಯ ದಾದಿ (ಇಂಡಿಯನ್ ನರ್ಸ್), ಕೌನ್ಸಿಲರ್ ರಾಜೀವ್ ಮೇತ್ರಿ ವೆಲ್ಶ್ ಲೇಬರ್ ಬಿಎಎಂಇ (ಬೇಮ್ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದಾರೆ. ಕಾರ್ಯದರ್ಶಿ ಹುದ್ದೆಗೆ ಮಾರ್ಚ್ 13ರಂದು ನಡೆದ ಚುನಾವಣೆಯಲ್ಲಿ ಮೇತ್ರಿ ಸ್ಪರ್ಧಿಸಿದ್ದರು. ಅವರು ನಾರ್ತ್​ವೇಲ್ಸ್​ನಿಂದ ಮೊದಲ ಭಾರತೀಯ ದನಿಯಾಗಿದ್ದಾರೆ.
ರಾಜೀವ್ ನಮ್ಮ ಭಾರತೀಯ ಸಮುದಾಯದವರು ಮಾತ್ರವೇ ಅಲ್ಲದೆ ಪ್ರತಿ ಮಾನವಜೀವಿ ಹಾಗೂ ಅಗತ್ಯವಿರುವ ಸಮುದಾಯ-ಸಂಸ್ಥೆಗಳ ಮಹಾನ್ ಬೆಂಬಲಿಗರಾಗಿದ್ದಾರೆ. ರಾಜ್ ಅವರು ಬ್ರಿಟಿಷ್ ಭಾರತೀಯ ನರ್ಸ್​ಗಳ ಸಂಘದ (ಬಿಐಎನ್​ಎ) ವೇಲ್ಸ್​ನ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿದ್ದಾರೆ. ಅವರು ನಮ್ಮ ಬಿಸಿಯುಎಚ್​ಬಿ (ವೇಲ್ಸ್​ನ ಬಿಗ್ಗೆಸ್ಟ್ ಹೆಲ್ತ್ ಬೋರ್ಡ್) ಬಿಸಿಯುನಿಟಿಯ (ಬಿಎಂಇ ಗ್ರೂಪ್) ಚೇರ್ ಕೂಡ ಆಗಿದ್ದಾರೆ.
ಏಕೈಕ ಭಾರತೀಯ: ರಾಜ್ ಅವರು ಇಡೀ ಯುನೈಟೆಡ್ ಕಿಂಗ್​ಡಂನಲ್ಲಿ ಎನ್​ಎಚ್​ಎಸ್ ಆಗಿ ಪೂರ್ಣ ಪ್ರಮಾಣದ ಉದ್ಯೋಗದ ಜೊತೆ ಜೊತೆಯಲ್ಲಿ ಟೌನ್ ಮತ್ತು ಕೌಂಟಿ ಎರಡರ ಕೌನ್ಸಿಲರ್ ಹುದ್ದೆಗಳನ್ನೂ ಹೊಂದಿರುವ, ಏಕೈಕ ಭಾರತೀಯ ಮತ್ತು ವಿಶೇಷವಾಗಿ ದಾದಿಯರ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ಮೇತ್ರಿ ಅವರು ಮೂಲತಃ ಬೆಳಗಾವಿ ಜಿಲ್ಲೆ ದಡ್ಡಿ ಗ್ರಾಮದವರು. ಅವರ ತಂದೆ-ತಾಯಿ ಇಬ್ಬರೂ ಶಿಕ್ಷಕರು. ತಂದೆ ಈಗ ಇಲ್ಲ. ತಾಯಿ ಸ್ವಗ್ರಾಮದಲ್ಲೇ ವಾಸವಾಗಿದ್ದಾರೆ. ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿ, ಮೇತ್ರಿ ಅವರು ಇಷ್ಟು ಉನ್ನತ ಸ್ಥಾನಕ್ಕೇರಿದ್ದಾರೆ. 2001ರಿಂದ ಇಂಗ್ಲೆಂಡ್​ನ ವೇಲ್ಸ್​ನಲ್ಲಿ ನೆಲೆಸಿದ್ದಾರೆ.
ಪತಿ ಸಾವಿಗೀಡಾಗಿ ಕೆಲವೇ ತಿಂಗಳುಗಳಲ್ಲಿ ಭಾರತೀಯ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದ ಜರ್ಮನ್ ನಟಿ!

ಟಿಕೆಟ್ ಕೈತಪ್ಪಿದೆ, ಇವನ ಬಳಿ ಹೇಗೆ ಕೆಲಸಕ್ಕಾಗಿ…. ಕಾರ್ಯಕರ್ತರಲ್ಲಿ ಪ್ರತಾಪ್ ಸಿಂಹ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 1 =
Remember me
