ಬೆಂಗಳೂರು:“ಇದು ರಿಯಲ್​ ಅಡ್ವೆಂಚರ್​” ಎನ್ನುವ ಸೂಪರ್​ಸ್ಟಾರ್​ ರಜನಿಕಾಂತ್​ ತಮ್ಮದೇ ಸ್ಟೈಲ್​ನಲ್ಲಿ ಕನ್ನಡಕ ಹಾಕಿಕೊಳ್ಳುತ್ತಾರೆ. ವನ್ಯ ಜೀವಿ ಸಾಹಸಿ ನಿರ್ದೇಶಕ ಬೇರ್​ ಗ್ರೀಲ್ಸ್​ನ “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದ 2ನೇ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ತಲೈವಾ ತಮ್ಮದೇ ಲುಕ್​ನಲ್ಲಿ ಕಂಡು ಬಂದಿದ್ದಾರೆ.
ಪ್ರೋಮೋವನ್ನು ಟ್ವೀಟ್​ ಮಾಡಿರುವ ಬೇರ್​ ಗ್ರೀಲ್ಸ್​ ಅವರು ಸೂಪರ್‌ಸ್ಟಾರ್ ರಜನಿಕಾಂತ್​ ಅವರ ಸಕಾರಾತ್ಮಕತೆ ಎಂದಿಗೂ ಸ್ಫೂರ್ತಿ ಎಂದು ಬರೆದುಕೊಂಡಿದ್ದಾರೆ.
ಒಂದು ನಿಮಿಷದ ವಿಡಿಯೋದಲ್ಲಿ ರಜನಿಕಾಂತ್​ ಎಟಿವಿ ಬೈಕ್​ನಲ್ಲಿ ಆಗಮಿಸುತ್ತಾರೆ. ಹೆಲ್ಮೆಟ್​, ಸನ್​ ಗ್ಲಾಸ್​ ಹಾಕಿಕೊಂಡ ಅವರು ತಮ್ಮದೇ ಶೈಲಿಯಲ್ಲಿಯೇ ಪರಿಚಯವಾಗುತ್ತಾರೆ. ನಂತರ ಬೇರ್​ ಗ್ರೀಲ್ಸ್​ ಜತೆಗೆ ಪ್ರಯಾಣ. ಹಗ್ಗ ಹಿಡಿದ ರಜನಿಕಾಂತ್​ ಇದನ್ನು ಹತ್ತಬೇಕು ಎನ್ನುತ್ತಿರಾ ಎಂದು ಬೇರ್​ ಗ್ರೀಲ್ಸ್​ಗೆ ಪ್ರಶ್ನಿಸುತ್ತಾರೆ.
ನಂತರ ತೆರೆದ ಜೀಪ್​ನಲ್ಲಿ ಹುಲಿ, ಆನೆ ಮತ್ತು ಜಿಂಕೆಯಂತಹ ಕಾಡು ಪ್ರಾಣಿಗಳ ನಡುವೆಯೇ ಪ್ರಯಾಣಿಸುತ್ತಾರೆ. ನಂತರ ಒಂದು ಕೊಳದಲ್ಲಿ ನೀರಿನಲ್ಲಿ ನಡೆಯುತ್ತಾರೆ. ಒಂದು ನಿಮಿಷದ ಪ್ರೋಮೋದಲ್ಲಿ ಇಷ್ಟೆಲ್ಲ ತೋರಿಸಲಾಗಿದೆ. ತಲೈವಾ ರಜನಿ ತಮ್ಮದೇ ಶೈಲಿಯಲ್ಲಿ ಕನ್ನಡಕವನ್ನು ತಿರುಗಿಸಿ ಹಾಕುವಲ್ಲಿಗೆ ಪ್ರೋಮೋ ಮುಕ್ತಾಯವಾಗುತ್ತದೆ.
ಕಾಯಕ್ರಮ ಮಾರ್ಚ್​ 23ರಂದು ರಾತ್ರಿ 8 ಗಂಟೆಗೆ ಡಿಸ್ಕವರಿ ಚಾನಲ್​ನಲ್ಲಿ ಪ್ರಸಾರವಾಗಲಿದೆ. ಬಂಡೀಪುರ ಹಾಗೂ ಸುತ್ತಮುತ್ತಲ ಅರಣ್ಯದಲ್ಲಿ ಚಿತ್ರೀಕರಣಗೊಂಡ “ಮ್ಯಾನ್​ ವರ್ಸಸ್​ ವೈಲ್ಡ್​” ಕಾರ್ಯಕ್ರಮದಲ್ಲಿ ತಲೈವಾ ರಜನಿಕಾಂತ್​ ಅಲ್ಲದೆ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಕೂಡ ನಟಿಸಿದ್ದಾರೆ.(ಏಜೆನ್ಸೀಸ್​)
The wait is over! This adrenaline pumping trailer gives you a glimpse of Superstar@Rajinikanth’s electrifying TV debut. Catch Into The Wild with@BearGryllson March 23 at 8:00 pm.#ThalaivaOnDiscoveryhttps://t.co/cg1zrx9dAw
— Discovery Channel India (@DiscoveryIN)March 9, 2020

VIDEO| ಗ್ರಾಮಸ್ಥರನ್ನು ಅಟ್ಟಿಸಿಕೊಂಡು ಗ್ರಾಮಕ್ಕೆ ಬಂದ ಸಿಂಹ, ಮುಂದೆ ಏನಾಯಿತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
