ಬೆಂಗಳೂರು/ಚೆನ್ನೈ:ಸೂಪರ್​ಸ್ಟಾರ್​ ರಜನಿಕಾಂತ್​ ಅಭಿನಯದ ಬಹುನಿರೀಕ್ಷಿತ ಜೈಲರ್​ ಚಿತ್ರ ಇದೇ ಆಗಸ್ಟ್​ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ನೆಚ್ಚಿನ ನಟನನ್ನೂ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 2021ರಲ್ಲಿ ಬಿಡುಗಡೆಯಾಗಿದ್ದ ಅಣ್ಣಾತ್ತೆ ಚಿತ್ರದಲ್ಲಿ ಕಡೆಯದಾಗಿ ಕಾಣಿಸಿಕೊಂಡಿದ್ದ ರಜನಿಕಾಂತ್​ ಈಗ ಮತ್ತೊಮ್ಮೆ ಬೆಳ್ಳಿತೆರೆಯ ಮೇಲೆ ರಾರಾಜಿಸಲು ಬರುತ್ತಿದ್ದಾರೆ.
ಜೈಲರ್​ ಚಿತ್ರ ಬಿಡುಗಡೆ ಹಿನ್ನಲೆ ತಮಿಳುನಾಡು ಮೂಲದ ಕಂಪನಿಯೊಂದು ಆಗಸ್ಟ್​ 10ರಂದು ತನ್ನ ಉದ್ಯೋಗಿಗಳಿಗೆ ರಜೆ ಘೋಷಿಸಿದೆ. ಉನೊ ಅಕ್ವಾ ಕೇರ್​ ಎಂಬ ಸಂಸ್ಥೆಯೂ ಚಿತ್ರ ಬಿಡುಗಡೆ ನಿಮಿತ್ತ ತನ್ನ ಕೆಲಸಗಾರರಿಗೆ ರಜೆಯನ್ನೂ ನೀಡಿದೆ.
ಈ ಕುರಿತು ಟ್ವೀಟ್​ ಮಾಡಿರುವ ಸಂಸ್ಥೆಯ ಮುಖ್ಯಸ್ಥರು ಜೈಲರ್​ ಚಿತ್ರ ಬಿಡುಗಡೆ ನಿಮಿತ್ತ ಆಗಸ್ಟ್​ 10ರಂದು ಕಂಪನಿಯ ಉದ್ಯೋಗಿಗಳಿಗೆ ಸಾರ್ವತ್ರಿಕ ರಜೆಯನ್ನೂ ಘೋಷಿಸಲಾಗಿದೆ. ಜೈಲರ್​ ಚಿತ್ರ ವೀಕ್ಷಿಸಲು ಇಷ್ಟಪಡುವ ನಮ್ಮ ಕಂಪನಿಯ ಉದ್ಯೋಗಿಗಳಿಗೆ ನಾವು ಅವತ್ತಿನ ದಿನದ ಟಿಕೆಟ್​ಅನ್ನು ಹಂಚುತ್ತೇವೆ ಎಂದು ತಿಳಿಸಲಾಗಿದೆ.
Offices started announcing holiday for#Jailerrelease 😎🥳The#SuperstarRajinikanthphenomenon and the only actor in the world who can bring the country to standstill🥳❤️😍#Rajinikanth#Thalaivar170#JailerFromAug10#JailerAudioLaunch#JailerShowcase#Kaavaalaa#Thalaivarpic.twitter.com/BMLztdAiRO
ಇದನ್ನೂ ಓದಿ:ಸಚಿವ ಚೆಲುವರಾಯಸ್ವಾಮಿ ವಿರುದ್ಧ ದೂರು; ಇದರ ಹಿಂದಿರುವುದು ಬಿಜೆಪಿಯ ಫೇಕ್ ಫ್ಯಾಕ್ಟರಿಯೋ, ಪೆನ್ ಡ್ರೈವ್ ಶೂರರೋ: ಕಾಂಗ್ರೆಸ್​
ನಮ್ಮ ತಾತ-ಮುತ್ತಾತನ ಕಾಲದಿಂದ ನಾವು ರಜನಿಕಾಂತ್​ ಅವರ ಚಿತ್ರಗಳನ್ನೂ ನೋಡುತ್ತಾ ಬೆಳೆದಿದ್ದೇವೆ. ಈ ರಜೆ ಅವರಿಗೆ ಸಮರ್ಪಣೆ. ಚೆನ್ನೈ, ಬೆಂಗಳೂರು ಸೇರಿದಂತೆ ಇದು ಶಾಖೆಗಳಿಗೂ ಅನ್ವಯವಾಗುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥರು ಟ್ವೀಟ್​ ಮಾಡಿರುವ ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.
ಜೈಲರ್​ ಚಿತ್ರಕ್ಕೆ ನೆಲ್ಸನ್​ ದಿಲೀಪ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿದ್ದು, ಅನಿರುದ್ಧ ರವಿಂಚಂದರ್​ ಸಂಗೀತ ಸಂಯೋಜಿಸಿದ್ದಾರೆ. ವಿಜಯ್​ ಕಾರ್ತಿಕ್​ ಕಣ್ಣನ್​ ಛಾಯಾಗ್ರಾಕರಾಗಿ ಕೆಲಸ ಮಾಡಿದ್ದು, ಕಲಾನಿಧಿ ಮಾರನ್​ ಜೈಲರ್​ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 1 =
Remember me
