ಮುಂಬೈ:ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರತಂಡ ‘ಜೈಲರ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಚಿತ್ರವು ಜಾಗತಿಕವಾಗಿ 600 ಕೋಟಿ ರೂಪಾಯಿಗಳ ಗಡಿಯನ್ನು ತಲುಪುವ ಸಮೀಪದಲ್ಲಿದೆ.
ಸೆಪ್ಟೆಂಬರ್ 1 ರಂದು ಸನ್ ಪಿಕ್ಚರ್ಸ್ ಮುಖ್ಯಸ್ಥ, ಜೈಲರ್​ ಸಿನಿಮಾ ನಿರ್ಮಾಪಕ ಕಲಾನಿತಿ ಮಾರನ್, ರಜನಿಕಾಂತ್ ಅವರಿಗೆ ಹೊಚ್ಚ ಹೊಸ BMW X7 ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೋಗಳೂ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.
BMW i7 – ₹ 1.95 cr
BMW x7 – ₹ 1.24 cr
Superstar#Rajinikanthchose bmw x7.
[Ex Show Room Price]
||#Jailer|#600CrJailer||pic.twitter.com/F283y5XurH
— Manobala Vijayabalan (@ManobalaV)September 1, 2023

ಈ ಸಂತೋಷದಿಂದ ಅವರು ರಜನಿಕಾಂತ್ ಅವರಿಗೆ ಲಾಭದಿಂದ ಸ್ವಲ್ಪ ಮೊತ್ತವನ್ನು ಚೆಕ್ ಆಗಿ ನೀಡಿದರು. ಅಲ್ಲದೆ ಎರಡು ಹೊಸ ಬಿಎಂಡಬ್ಲ್ಯು ಕಾರುಗಳನ್ನು ತಂದಿದ್ದು,  BMW i7 – Rs.1.95 ಕೋಟಿ, BMW x7 – Rs.1.24 ಕೋಟಿ ಕಾರನ್ನು ರಜನಿಕಾಂತ್ ಅವರು ನೋಡಿ BMW x7 ಅನ್ನು ಆಯ್ಕೆ ಮಾಡಿದ್ದಾರೆ. ನಿರ್ಮಾಪಕರು ಕಾರಿನ ಕೀ ಸಹಿತ ಚೆಕ್ ನೀಡಿದ್ದಾರೆ.
#JailerSuccessCelebrationscontinue! Superstar@rajinikanthwas shown various car models and Mr.Kalanithi Maran presented the key to a brand new BMW X7 which Superstar chose.pic.twitter.com/tI5BvqlRor
— Sun Pictures (@sunpictures)September 1, 2023

ಸನ್ ಪಿಕ್ಚರ್ಸ್‌ನ ಅಧಿಕೃತ ಖಾತೆಯು ಟ್ವಿಟರ್‌ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದೆ. ‘ಕಲಾನಿಧಿ ಮಾರನ್, ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿ ಮಾಡಿ ಚೆಕ್ ಹಸ್ತಾಂತರಿಸಿ, ಜೈಲರ್ ಐತಿಹಾಸಿಕ ಯಶಸ್ಸಿನ ಸಂಭ್ರಮಾಚರಣೆ ಮಾಡಿದ್ದಾರೆ’ ಎಂದು ಶೀರ್ಷಿಕೆ ನೀಡಿ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ಫೋಟೋದಲ್ಲಿ ಕಲಾನಿಧಿ ಮಾರನ್, ರಜನೀಕಾಂತ್‌ಗೆ ಚೆಕ್‌ ನೀಡುತ್ತಿದ್ದರೆ, ಮತ್ತೊಂದರಲ್ಲಿ ತಲೈವಾಗೆ ಹೂವಿನ ಬೊಕ್ಕೆ ನೀಡುತ್ತಿದ್ದಾರೆ.
Info coming in that, the envelope handed over by Kalanithi Maran to superstar#rajinikanthcontains a single cheque amounting ₹1⃣0⃣0⃣ cr from City Union Bank, Mandaveli branch, Chennai.
This is a#Jailerprofit sharing cheque which is up & above the already paid…pic.twitter.com/I6TF6p4SvL
— Manobala Vijayabalan (@ManobalaV)August 31, 2023

ಈ ಚಿತ್ರವನ್ನು 200 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ರಮ್ಯಾ ಕೃಷ್ಣ, ತಮನ್ನಾ, ಕನ್ನಡದ ಸ್ಟಾರ್ ಹೀರೋ ಶಿವ ರಾಜ್‌ಕುಮಾರ್ ಮತ್ತು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಿನಿಮಾದ ಹೈಲೈಟ್ ಆಗಿತ್ತು. ನಿರ್ದೇಶಕ ನೆಲ್ಸನ್ ಇತ್ತೀಚೆಗಷ್ಟೇ ಈ ಚಿತ್ರದ ಮುಂದುವರಿದ ಭಾಗ ಬರಲಿದೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ತಲೈವಾ ಅಭಿಮಾನಿಗಳು ಖುಷಿಯಾಗಿದ್ದಾರೆ.
89ನೇ ವಯಸ್ಸಿನಲ್ಲಿ ಪಂಚಾಯತ್ ಅಧ್ಯಕ್ಷೆಯಾದ ವೃದ್ಧೆ; ಮಹಿಳೆಯ ಆರೋಗ್ಯದ ಗುಟ್ಟನ್ನು ಹಂಚಿಕೊಂಡ ಐಎಎಸ್ ಅಧಿಕಾರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 10 =
Remember me
