ಚೆನ್ನೈ:543 ಲೋಕಸಭೆ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಇಂದು (ಏಪ್ರಿಲ್ 19) ಮೊದಲ ಹಂತದ ಮತದಾನ ನಡೆಯುತ್ತಿದೆ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟು 102 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಈ ಪೈಕಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ತಮಿಳುನಾಡಿನ 39 ಲೋಕಸಭಾ ಸ್ಥಾನಗಳಿಗೂ ಮೊದಲ ಹಂತದಲ್ಲೇ ಮತದಾನ ನಡೆಯುತ್ತಿದೆ. ಸದ್ಯ ಮಾಹಿತಿ ಮೇರೆಗೆ ಬೆಳಗ್ಗೆ 9ಗಂಟೆಯವರೆಗೆ ಶೇ. 12.55 ರಷ್ಟು ಮತದಾನವಾಗಿದೆ. ಸೂಪರ್​ ಸ್ಟಾರ್​ ರಜಿನಿಕಾಂತ್​, ಕಮಲ್​ ಹಾಸನ್​, ವಿಜಯ್​ ಸೇತುಪತಿ ಹಾಗೂ ಧನುಷ್​ ಸೇರಿದಂತೆ ಸ್ಟಾರ್​ ನಟರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದು, ಮತದಾನ ಬಿರುಸುಪಡೆದುಕೊಂಡಿದೆ.
ನಟ ಧನುಷ್ ಅವರು ಚೆನ್ನೈನ ಟಿಟಿಕೆ ರಸ್ತೆಯ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆಯಲ್ಲಿ ಮತ ಚಲಾಯಿಸಿದರು. ವಿಜಯ್ ಸೇತುಪತಿ, ಕಿಲ್ಪಾಕ್‌ನ ಚೆನ್ನೈ ಹೈಸ್ಕೂಲ್‌ನಲ್ಲಿ ಮತದಾನ ಮಾಡಿದರು. ರಜನಿಕಾಂತ್ ಹಾಗೂ ಕಮಲ್​ ಹಾಸನ್​ ಕೂಡ ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತದಾನ ಮಾಡಿದರು ಮತ್ತು ಛಾಯಾಗ್ರಾಹಕರು ಮತ್ತು ವೀಡಿಯೋಗ್ರಾಫರ್‌ಗಳಿಗೆ ಶಾಯಿ ಅಂಟಿದ ಬೆರಳನ್ನು ಪ್ರದರ್ಶಿಸಿದರು.
#WATCH| Actor Rajnikanth casts his vote at a polling booth in Chennai, Tamil Nadu.
#LokSabhaElections2024pic.twitter.com/6Ukwayi5sv
— ANI (@ANI)April 19, 2024

ನಟರಾದ ಅಜಿತ್ ಕುಮಾರ್, ಶಿವಕಾರ್ತಿಕೇಯನ್, ಗೌತಮ್ ಕಾರ್ತಿಕ್, ನಿರ್ದೇಶಕರಾದ ಸುಂದರ್ ಸಿ, ವೆಟ್ರಿ ಮಾರನ್ ಮತ್ತು ಶಶಿಕುಮಾರ್ ಮತ್ತು ಇತರರು ಈಗಾಗಲೇ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
#WATCH| Tamil Nadu: Actor and MNM chief Kamal Haasan casts his vote at a polling booth in Koyambedu, Chennai.
Makkal Needhi Maiam (MNM) is not contesting the#LokSabhaElections2024, the party supported and campaigned for DMK.pic.twitter.com/EZ2tnICRDn
— ANI (@ANI)April 19, 2024

ಸಿನಿಮಾ ವಿಚಾರಕ್ಕೆ ಬಂದರೆ, ರಜನಿಕಾಂತ್ ಅವರು ನಿರ್ದೇಶಕ ಟಿಜೆ ಜ್ಞಾನವೇಲ್ ಅವರ ‘ವೆಟ್ಟೈಯನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಅಮಿತಾಬ್ ಬಚ್ಚನ್, ರಿತಿಕಾ ಸಿಂಗ್ ಮತ್ತು ದುಶಾರಾ ವಿಜಯನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಧನುಷ್ ಅವರು ‘ರಾಯನ್’ ‘ಕುಬೇರ’ ಮತ್ತು ‘ನಿಲವುಕ್ಕು ಎನ್ ಮೇಲ್ ಎನ್ನಡಿ ಕೋಬಮ್’ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.
#WATCH| Tamil Nadu: Actor Vijay Sethupathi casts his vote at a polling booth in Chennai#LokSabhaElections2024pic.twitter.com/Npm8oahp5O
— ANI (@ANI)April 19, 2024

ಕಲಾವಿದರಲ್ಲದೆ, ಮಾಜಿ ಐಪಿಎಸ್​ ಅಧಿಕಾರಿ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ, ತಮಿಳುನಾಡು ಸಿಎಂ ಸ್ಟಾಲಿನ್​ ಮತ್ತು ಸಚಿವ ಉದಯನಿಧಿ ಸ್ಟಾಲಿನ್​ ಸಹ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಲೋಕಸಭೆ ಚುನಾವಣೆ ನಿಮಿತ್ತ ಇಶಾ ಫೌಂಡೇಶನ್​ನ ಸಂಸ್ಥಾಪಕರಾದ ವಾಸುದೇವ ಅವರು ತಮಿಳುನಾಡಿದ ಕೊಯಂಬತ್ತೂರಿನಲ್ಲಿ ಮತ ಚಲಾಯಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸದ್ಗುರು ಗುಣಮುಖರಾಗುತ್ತಿದ್ದಾರೆ.
#WATCH| Tamil Nadu CM & DMK chief MK Stalin arrives at a polling booth in Chennai to cast his in the first phase of#LokSabhaElections2024pic.twitter.com/dCoyPV1hnK
— ANI (@ANI)April 19, 2024

ಅಣ್ಣಾಮಲೈ ಗಂಭೀರ ಆರೋಪಕರೂರಿನ ಉತ್ತುಪಟ್ಟಿಯಲ್ಲಿರುವ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಬಳಿಕ ಗಂಭೀರ ಆರೋಪ ಮಾಡಿರುವ ಅಣ್ಣಾಮಲೈ, ಕೊಯಮತ್ತೂರಿನಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ಡಿಎಂಕೆ ಮತ್ತು ಎಐಎಡಿಎಂಕೆ 1,000 ಕೋಟಿ ರೂ. ಖರ್ಚು ಮಾಡಿದೆ ಎಂದಿದ್ದಾರೆ. ಕೊಯಮತ್ತೂರಿನಲ್ಲಿ ಡಿಎಂಕೆ, ಎಐಎಡಿಎಂಕೆ ಏನು ಮಾಡುತ್ತಿದೆ ಎಂಬುದನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಕೊಯಮತ್ತೂರಿನಲ್ಲಿ 1,000 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗಿದೆ. ಬಿಜೆಪಿಯ ಕೆಲವರು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಹೇಳುವ ಒಬ್ಬ ಮತದಾರನನ್ನು ಮಾಧ್ಯಮದ ಮುಂದೆ ಕರೆತಂದರೆ, ನಾನು ಅದೇ ದಿನ ರಾಜಕೀಯವನ್ನು ತೊರೆಯುತ್ತೇನೆ. ಏಕೆಂದರೆ ನಾನು ಈ ಚುನಾವಣೆಯಲ್ಲಿ ತಾತ್ವಿಕವಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಅಣ್ಣಾಮಲೈ ಹೇಳಿದ್ದಾರೆ.
#WATCH| On DMK's allegation that BJP is distributing money in Coimbatore, Tamil Nadu BJP chief and party's candidate from Coimbatore constituency, says, "…I am running this election as a matter of principle…Their Intelligence, Tamil Nadu Police, DMK, AIADMK – what they are…pic.twitter.com/qT72RnP5nF
— ANI (@ANI)April 19, 2024

ಯಾವ್ಯಾವ ರಾಜ್ಯಗಳಲ್ಲಿ ಮತದಾನ?1) ಅರುಣಾಚಲಪ್ರದೇಶ (2): ಅರುಣಾಚಲ ಪೂರ್ವ, ಅರುಣಾಚಲ ಪಶ್ಚಿಮ2) ಅಸ್ಸಾಂ (5): ಕಾಜಿರಂಗ, ಸೋನಿತ್‌ಪುರ್, ಲಖಿಂಪುರ, ದಿಬ್ರುಗಢ್, ಜೋರ್ಹತ್3) ಬಿಹಾರ (4): ಔರಂಗಾಬಾದ್, ಗಯಾ, ನಾವಡಾ, ಜಮುಯಿ4) ಛತ್ತೀಸ್‌ಗಢ (1): ಬಸ್ತಾರ್ (ST)5) ಮಧ್ಯಪ್ರದೇಶ (6): ಛಿಂದ್ವಾರಾ, ಸಿಧಿ, ಶಹದೋಲ್, ಜಬಲ್ಪುರ್, ಮಂಡ್ಲಾ, ಬಾಲಾಘಾಟ್6) ಮಹಾರಾಷ್ಟ್ರ (5): ನಾಗ್ಪುರ್, ಗಡ್ಚಿರೋಲಿ-ಚಿಮೂರ್ (ಎಸ್ಟಿ), ಭಂಡಾರಾ-ಗೊಂಡಿಯಾ, ಚಂದ್ರಾಪುರ್, ರಾಮ್ಟೆಕ್ (ಎಸ್ಸಿ)7) ಮಣಿಪುರ (2)8) ಮೇಘಾಲಯ (2): ಶಿಲ್ಲಾಂಗ್ ಮತ್ತು ತುರಾ9) ಮಿಜೋರಾಂ (1): ಮಿಜೋರಾಂ10) ನಾಗಾಲ್ಯಾಂಡ್ (1): ನಾಗಾಲ್ಯಾಂಡ್11) ಸಿಕ್ಕಿಂ (1): ಸಿಕ್ಕಿಂ12) ತ್ರಿಪುರ (1): ತ್ರಿಪುರ ಪಶ್ಚಿಮ13) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1): ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು14) ಜಮ್ಮು ಮತ್ತು ಕಾಶ್ಮೀರ (1): ಉಧಂಪುರ15) ಲಕ್ಷದ್ವೀಪ (1): ಲಕ್ಷದ್ವೀಪ16) ಪುದುಚೇರಿ (1): ಪುದುಚೇರಿ17) ಪಶ್ಚಿಮ ಬಂಗಾಳ (3): ಕೂಚ್‌ಬೆಹರ್, ಅಲಿಪುರ್ದುವಾರ್, ಜಲ್ಪೈಗುರಿ18) ಉತ್ತರಾಖಂಡ (5): ನೈನಿತಾಲ್-ಉಧಮ್ ಸಿಂಗ್ ನಗರ, ಅಲ್ಮೋರಾ, ಹರಿದ್ವಾರ, ಗರ್ವಾಲ್ (ಪೌರಿ), ತೆಹ್ರಿ ಗರ್ವಾಲ್19) ಉತ್ತರ ಪ್ರದೇಶ (8): ಸಹರಾನ್ಪುರ್, ಕೈರಾನಾ, ಮುಜಾಫರ್ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ್, ಪಿಲಿಭಿತ್20) ರಾಜಸ್ಥಾನ (12): ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್, ಭರತ್‌ಪುರ್, ಕರೌಲಿ-ಧೋಲ್‌ಪುರ್, ದೌಸಾ, ನಾಗೌರ್21) ತಮಿಳುನಾಡು (39): ತಿರುವಳ್ಳೂರ್ (SC), ಚೆನ್ನೈ ಉತ್ತರ , ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಶ್ರೀಪೆರಂಬದೂರ್, ಕಾಂಚೀಪುರಂ (SC), ಅರಕ್ಕೋಣಂ, ವೆಲ್ಲೂರು, ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ಅರಣಿ, ವಿಲುಪ್ಪುರಂ (SC), ಕಲ್ಲಕುರಿಚಿ, ಸೇಲಂ, ನಾಮ , ಈರೋಡ್ GEN, ತಿರುಪ್ಪೂರ್, ನೀಲಗಿರಿ (SC), ಕೊಯಮತ್ತೂರು, ಪೊಲ್ಲಾಚಿ, ದಿಂಡುಗಲ್, ಕರೂರ್, ತಿರುಚಿರಾಪಳ್ಳಿ, ಪೆರಂಬಲೂರ್, ಕಡಲೂರು, ಚಿದಂಬರಂ (SC), ಮೈಲಾಡುತುರೈ, ನಾಗಪಟ್ಟಣಂ, ತಂಜಾವೂರು, ಮಧುರೈ, ಶಿವಗಂಗಾ , ವಿರುಧುನಗರ, ರಾಮನಾಥಪುರಂ, ತೂತುಕ್ಕುಡಿ , ತೆಂಕಶಿ (SC), ತಿರುನೆಲ್ವೇಲಿ, ಕನ್ಯಾಕುಮಾರಿ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 10 =
Remember me
