ಮುಂಬೈ:ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಭಾಗವಹಿಸಿದ್ದು, ಮಾಸ್ ಸ್ಟೆಪ್ಸ್ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಅನಂತ್​ ಅಂಬಾನಿ ವಿವಾಹ: 160 ವರ್ಷ ಹಿಂದಿನ ಸೀರೆ ಉಟ್ಟಿದ್ದ ಆಲಿಯಾ ಭಟ್​..! ಇದರ ಬೆಲೆಯೇ 3ಕೋಟಿ!!
ಈ ಅದ್ದೂರಿ ಮದುವೆಗೆ ಟಾಲಿವುಡ್, ಬಾಲಿವುಡ್, ಕಾಲಿವುಡ್ ಹೀಗೆ ಎಲ್ಲ ರಂಗಗಳ ಫೇಮಸ್ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್ ಸಹ ಭಾಗವಹಿಸಿದ್ದು, ಸಮಾರಂಭದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಅವರು ವರನ ಜತೆ ಸ್ಟೆಪ್ಸ್​ ಹಾಕಿ ಗಮನ ಸೆಳೆದರು.
ವೈರಲ್​ ಆಗಿರುವ ವೀಡಿಯೋದಲ್ಲಿ, ಮದುವೆ ಸಮಾರಂಭದಲ್ಲಿ ಜಾನ್ ಸೀನಾ, ಸಲ್ಮಾನ್ ಖಾನ್, ಶಾರುಖ್ ಖಾನ್ ಮುಂತಾದ ತಾರೆಯರು ತಮ್ಮ ಮಾಸ್ ಸ್ಟೆಪ್ಸ್ ಮೂಲಕ ವರನನ್ನು ಸ್ವಾಗತಿಸುತ್ತಿದ್ದಾರೆ. ಅಷ್ಟರಲ್ಲಿ ರಜನಿಕಾಂತ್ ಅಲ್ಲಿಗೆ ಪ್ರವೇಶಿಸಿ ಸ್ಟೆಪ್ಸ್​ ಹಾಕಿ ಅಲ್ಲಿದ್ದವರನ್ನು ಬೆಚ್ಚಿ ಬೀಳಿಸಿದರು. ಈ ವಯಸ್ಸಿನಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಹೆಜ್ಜೆಗಳ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
ರಜನಿಕಾಂತ್ ಅವರು ಪತ್ನಿ ಲತಾ, ಮಗಳು ಐಶ್ವರ್ಯ ಮತ್ತು ಮೊಮ್ಮಗನೊಂದಿಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ರಜನಿಕಾಂತ್ ಸ್ಟೆಪ್ಸ್​ಗೆ ಅಲ್ಲಿದ್ದವರೂ ಚಪ್ಪಾಳೆ, ಶಿಳ್ಳೆಗಳ ಮೂಲಕ ಹುರಿದುಂಬಿಸಿದರು. ರಜನಿಕಾಂತ್ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋಗಳನ್ನು ನೋಡಿ ಸೂಪರ್ ಸ್ಟಾರ್ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ತಮ್ಮ ತಲೈವಾಗೆ ಇನ್ನೂ ವಯಸ್ಸಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನಂತ್ ಅಂಬಾನಿ ಮದುವೆ:ಏನೆಲ್ಲಾ ಬಡಿಸಲಾಯ್ತು? ಭೂರಿ ಭೋಜನಕ್ಕೆ ಎಷ್ಟು ಕೋಟಿ ಖರ್ಚಾಯ್ತು? ಇಲ್ಲಿದೆ ಮಾಹಿತಿ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen − 7 =
Remember me
